ಮುಳಿಯ ಚಿನ್ನೋತ್ಸವ: ಪ್ರದರ್ಶನ ಮತ್ತು ಮಾರಾಟ ಉದ್ಘಾಟನೆ

ಬೆಳ್ತಂಗಡಿ: ಮುಳಿಯ ಕೇಶವ ಭಟ್ಟ್ ಆಂಡ್ ಸನ್ಸ್ ಗ್ರಾಹಕರಿಗಾಗಿ ಆಯೋಜಿಸಿರುವ ಮುಳಿಯ ಚಿನ್ನೋತ್ಸವ ಪ್ರದರ್ಶನ ಮತ್ತು ಮಾರಾಟ ಬೆಳ್ತಂಗಡಿ ಮಳಿಗೆಯಲ್ಲಿ ಅ.10 ರಂದು ಉದ್ಘಾಟನೆಗೊಂಡಿತು.
ಬಂಗಾಡಿ ಅರಸು ಮನೆತನದ ಯಶೋಧರ ಬಲ್ಲಾಳ್ ದೀಪ ಬೆಳಗಿಸಿ ಉದ್ಘಾಟಿಸಿ, ಸಂಸ್ಥೆಗೆ ಶುಭ ಹಾರೈಸಿದರು. ಬೆಳ್ತಂಗಡಿ ಪೊಲೀಸ್ ಉಪ ನಿರೀಕ್ಷಕ ರವಿ ಬಿ.ಎಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, ಗ್ರಾಹಕರ ಅಭಿರುಚಿಗೆ ತಕ್ಕಂತೆ ಅನುಕೂಲ ಸೇವೆಯೊಂದಿಗೆ ಈ ಚಿನ್ನೋತ್ಸವ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಸಂಸ್ಥೆಯ ಆಡಳಿತ ನಿರ್ದೇಶಕ ಕೃಷ್ಣ ನಾರಾಯಣ ಭಟ್ ಮುಳಿಯ ಮಾತನಾಡುತ್ತಾ, ಬೆಳ್ತಂಗಡಿಯ ಗ್ರಾಹಕರ ಅಪೇಕ್ಷೆಯ ಮೇರೆಗೆ ಪ್ರಾರಂಭಿಸಿದ ಬೆಳ್ತಂಗಡಿ ಮಳಿಗೆಗೆ ಪ್ರೋತ್ಸಾಹ ನೀಡುತ್ತಿರುವ ಗ್ರಾಹಕರಿಗೆ ಕೃತಜ್ಞತೆ ಸಲ್ಲಿಸುತ್ತಾ ಹಬ್ಬಗಳ ಪ್ರಯುಕ್ತ ಏರ್ಪಡಿಸಲಾಗುವ ಚಿನ್ನೋತ್ಸವ ಯಶಸ್ವಿಗೆ ಸಹಕರಿಸಿ ಎಂದರು. ಅ.10 ರಿಂದ ನ.10 ರವರೆಗೆ ಮುಳಿಯ ಚಿನ್ನೋತ್ಸವ ನಡೆಯಲಿದ್ದು, ಪುತ್ತೂರು ಮತ್ತು ಬೆಳ್ತಂಗಡಿ ಮಳಿಗೆಯಲ್ಲಿ ವಿವಿಧ ವಿನ್ಯಾಸಗಳ ಆಭರಣಗಳ ಪ್ರದರ್ಶನ ಮತ್ತು ಮಾರಾಟ ಜರುಗಲಿದ್ದು, ಬಂಪರ್ ಬಹುಮಾನ ಒಂದು ಲಕ್ಷ ನಗದು ಅಥವಾ ಚಿನ್ನಾಭರಣ, ಪ್ರಥಮ ಬಹುಮಾನ ಹೋಡಾ ಆಕ್ಟೀವಾ, ಚಿನ್ನದ ನಾಣ್ಯಗಳು, ವೆಜ್ ಗ್ರೈಂಡರ್, ಬ್ರಾಂಡೆಡ್ ಸ್ಮಾರ್ಟ್ ಫೋನ್, ಕುಕ್ಕರ್‌ಗಳು, ಬೆಳ್ಳಿ ನಾಣ್ಯಗಳು, ಗಿಫ್ಟ್ ಹ್ಯಾಂಪರ್‌ಗಳು ಸೇರಿದಂತೆ ೪೦೦ ಕ್ಕೂ ಹೆಚ್ಚು ಬಹುಮಾನಗಳನ್ನು ಗ್ರಾಹಕರು ಗೆಲ್ಲುವ ಅವಕಾಶ ಈ ಚಿನ್ನೋತ್ಸವ ದಲ್ಲಿ ಲಭ್ಯ. ಬೆಳ್ತಂಗಡಿ ಶಾಖಾ ಪ್ರಭಂದಕ ಪ್ರವೀಣ್ ಸ್ವಾಗತಿಸಿದರು. ಸಿಬ್ಬಂದಿ ರಮೇಶ ಗೌಡ ಕಾರ್ಯಕ್ರಮ ನಿರೂಪಿಸಿ, ಭವ್ಯಶ್ರೀ ವಂದಿಸಿದರು. ಸಂಸ್ಥೆಯ ಸಲಹೆಗಾರ ವೇಣು ಶರ್ಮ, ಸಿಬ್ಬಂದಿ ವರ್ಗದವರು, ಗ್ರಾಹಕರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.