ಅ.13 : ಮಡಂತ್ಯಾರಿನಲ್ಲಿ ಶ್ರೀ ದುರ್ಗಾ ಟೆಕ್ಸ್‌ಟೈಲ್ಸ್ & ರೆಡಿಮೇಡ್ಸ್ ಪ್ರಾರಂಭೋತ್ಸವ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ : ಈಗಾಗಲೇ ಉಜಿರೆ, ಬೆಳ್ತಂಗಡಿ ಮತ್ತು ಬಂಟ್ವಾಳದಲ್ಲಿ ವಸ್ತ್ರೋದ್ಯಮ ವ್ಯವಹಾರದಲ್ಲಿ ಮನೆ ಮಾತಾಗಿ ಎಲ್ಲರ ಪ್ರೀತಿ, ಅಭಿಮಾನ, ವಿಶ್ವಾಸಾರ್ಹತೆಗೆ ಪಾತ್ರವಾದ ಶ್ರೀ ದುರ್ಗಾ ಟೆಕ್ಸ್‌ಟೈಲ್ಸ್ & ರೆಡಿಮೇಡ್ ಮಳಿಗೆ ಮಡಂತ್ಯಾರಿನ ಗ್ರಾಹಕರ ಬೇಡಿಕೆಯನ್ನು ಪೂರೈಸಲು ಮುಖ್ಯ ರಸ್ತೆಯ ಪೊಂಪೈ ಆರ್ಕೇಡ್‌ನ ವಿಶಾಲ ಮಳಿಗೆಯಲ್ಲಿ ನೂತನ ಉದ್ಯಮವನ್ನು ಪ್ರಾರಂಭಿಸುತ್ತಿದೆ. ಅತ್ಯಾಧುನಿಕ ವಿನ್ಯಾಸ ಹಾಗೂ ಫ್ಯಾಶನ್ನಿನ ಪುರುಷರು, ಮಹಿಳೆಯರು ಹಾಗೂ ಮಕ್ಕಳ ಉಡುಪುಗಳು, ಸಿಲ್ಕ್ ಹಾಗೂ ರೇಷ್ಮೆ ಸೀರೆಗಳ ಪ್ರತ್ಯೇಕ ವಿಭಾಗಗಳಲ್ಲಿ ಗ್ರಾಹಕರ ಆಯ್ಕೆಗೆ ವಿಪುಲ ಶ್ರೇಣಿಯ ಹೊಚ್ಚ ಹೊಸ ದಾಸ್ತಾನನ್ನು ರಿಯಾಯಿತಿ ದರದಲ್ಲಿ ಒದಗಿಸಿದ ಹಿರಿಮೆ ಶ್ರೀ ದುರ್ಗಾ ಟೆಕ್ಸ್‌ಟೈಲ್ಸ್ ಮತ್ತು ರೆಡಿಮೇಡ್ ಮಳಿಗೆಯದ್ದು. ಬೆಳ್ತಂಗಡಿ ತಾಲೂಕಿನ ಮತ್ತೊಂದು ವ್ಯಾಪಾರ-ವ್ಯವಹಾರ ಕೇಂದ್ರವಾದ ಮಡಂತ್ಯಾರಿನ ಹೃದಯ ಭಾಗದಲ್ಲಿ ಶ್ರೀ ದುರ್ಗಾ ಟೆಕ್ಸ್‌ಟೈಲ್ಸ್ & ರೆಡಿಮೇಡ್ ಮಳಿಗೆ ಗ್ರಾಹಕರ ಸೇವೆಗೆ ತನ್ನನ್ನು ಸಮರ್ಪಿಸಿಕೊಳ್ಳುತ್ತಿದೆ.
ನೂತನ ವಸ್ತ್ರೋದ್ಯಮ ಮಳಿಗೆಯನ್ನು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಯು.ವಿಜಯರಾಘವ ಪಡ್ವೆಟ್ನಾಯರು ದೀಪ ಪ್ರಜ್ವಲನೆಗೊಳಿಸಿ ಶುಭಾರಂಭಗೊಳಿಸಲಿದ್ದಾರೆ. ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚಿನ ಧರ್ಮಗುರು ರೆ| ಫಾ| ಬಾಸಿಲ್ ವಾಸ್ ವಿನೂತನ ವ್ಯವಹಾರವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಕೆ.ಹರೀಶ್ ಕುಮಾರ್, ಹುಣಸೂರು/ಮೈಸೂರಿನ ಪೃಥ್ವಿ ಜ್ಯುವೆಲ್ಸ್ ಪ್ರೈ ಲಿ.ನ ಚೇರ್‌ಮೆನ್ ಸಮರ್ಥ್ ಲಾಲ್‌ದುಖ್, ಪಾರೆಂಕಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ.ರಾಜಶೇಖರ ಶೆಟ್ಟಿ ಭಂಡಾರಿಗುಡ್ಡೆ, ದ.ಕ ಮತ್ತು ಉಡುಪಿ ಜಿಲ್ಲಾ ಜಮೀಯತುಲ್ ಫಲಾಹ್‌ನ ನಿಕಟಪೂರ್ವ ಅಧ್ಯಕ್ಷ ಕೊಲ್ಪೆದಬೈಲು ಹಾಜಿ ಅಬ್ದುಲ್ ಲತೀಫ್ ಸಾಹೇಬ್, ಮಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಬೇಬಿ ಸುವರ್ಣ ಮತ್ತು ಮಡಂತ್ಯಾರು ಗ್ರಾಮ ಪಂಚಾಯತು ಅಧ್ಯಕ್ಷ ಕೆ. ಗೋಪಾಲಕೃಷ್ಣ ಭಾಗವಹಿಸಿ ಶುಭಾಶಂಸನೆಗೈಯಲಿದ್ದಾರೆ. ಟಿ.ಎಸ್.ಮಾದವ್ ಅವರ ಮಾರ್ಗದರ್ಶನದಲ್ಲಿ ಸಾಂಗ್ ಸಿಂಗ್, ಧರ್ಮಿಚಂದ್ ಕೆ. ಹಿರಿಯರ ಶುಭಾಕಾಂಕ್ಷೆಯೊಂದಿಗೆ ಶ್ರೀ ದುರ್ಗಾ ಟೆಕ್ಸ್‌ಟೈಲ್ಸ್ & ರೆಡಿಮೇಡ್ ವಸ್ತ್ರೋದ್ಯಮ ಮಳಿಗೆಗೆ ಗ್ರಾಹಕರ ಪೂರ್ಣ ಸಹಕಾರ, ಪ್ರೋತ್ಸಾಹ, ಆಶೀರ್ವಾದವನ್ನು ಮಾಲಕ ಮೋಹನ್ ಚೌಧರಿಯವರು ಅಪೇಕ್ಷಿಸಿದ್ದಾರೆ.
ವಿಸ್ತೃತ ಸ್ಥಳಾವಕಾಶದ ನೂತನ ಮಳಿಗೆಯಲ್ಲಿ ಗ್ರಾಹಕರ ಸಂತೃಪ್ತಿಯ ಆಯ್ಕೆಗೆ ವಿಪುಲ ಶ್ರೇಣಿಯ ದಾಸ್ತಾನು ಪ್ರತ್ಯೇಕ ವಿಭಾಗಗಳಲ್ಲಿ ಲಭ್ಯವಿದೆ. ಸಿಬ್ಬಂಧಿಗಳ ನಗು ಮೊಗದ ಸೇವೆ ಮನ ಗಾಣುವಿರಿ. ಮಧುರೆ, ಕಾಂಜೀವರಂ, ಮದುವೆ ಮತ್ತು ರೇಷ್ಮೆ ಸೀರೆಗಳು ಗ್ರಾಹಕರ
ಹೃನ್ಮನ ಸೂರೆಗೊಳ್ಳಲಿವೆ. ಗುಣಮಟ್ಟದ ಬಟ್ಟೆಬರೆಗಳು, ಬ್ರಾಂಡೆಡ್, ರೆಡಿಮೆಡ್‌ಗಳು ಸ್ಪರ್ದಾತ್ಮಕ ಹಾಗೂ ರಿಯಾಯಿತಿ ದರದಲ್ಲಿ ಪ್ರಾರಂಭೋತ್ಸವದ ವಿಶೇಷ ಹಾಗೂ ನವರಾತ್ರಿ-ದೀಪಾವಳಿಯ ಕೊಡುಗೆಗಳೊಂದಿಗೆ ನ.10 ರ ವರೆಗೆ ಪ್ರತಿ ಖರೀದಿ ಮೇಲೆ ವಿಶೇಷ ಗಿಪ್ಟ್ ಐಟಂಗಳು ದೊರೆಯಲಿದೆ ಎಂದು ಮಾಲಕ ಮೋಹನ್ ಚೌಧರಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.