ಉಜಿರೆ ಅನಂತ ಮೋಟಾರ್‍ಸ್‌ಗೆ ದಕ್ಷಿಣ ಕರ್ನಾಟಕ ಮಟ್ಟದ ಬೆಸ್ಟ್ ಫರ್ಫಾಮರ್ ಅವಾರ್ಡ್

ಉಜಿರೆ: ಕೇವಲ 4 ವರ್ಷಗಳನ್ನಷ್ಟೇ ಪೂರೈಸಿ 5 ನೇ ವರ್ಷಕ್ಕೆ ಕಾಲಿಟ್ಟಿರುವ ಹೀರೋ ದ್ವಿಚಕ್ರ ವಾಹನಗಳ ಅಧಿಕೃತ ಮಾರಾಟ ಮತ್ತು ಸೇವಾ ಸಂಸ್ಥೆ “ಅನಂತ್ ಮೋಟಾರ್‍ಸ್ ಉಜಿರೆ” ಗೆ ಅತ್ಯಲ್ಪ ಅವಧಿಯಲ್ಲೇ ಸೇವಾ ವಿಭಾಗದಲ್ಲಿ ಮತ್ತು ಬಿಡಿಭಾಗಗಳ ಮಾರಾಟ ವಿಭಾಗದಲ್ಲಿ ದಕ್ಷಿಣ ಕರ್ನಾಟಕ ಮಟ್ಟದ ಬೆಸ್ಟ್ ಫರ್ಫಾಮರ್ 2 ಪ್ರಶಸ್ತಿಗಳು ಲಭಿಸಿದೆ.
ಅ.4 ರಂದು ಬೆಂಗಳೂರಿನ ರೋಯಲ್ ಆರ್ಚಿಡ್ ಹೊಟೇಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನಂತ್ ಮೋಟಾರ್‍ಸ್ ಸಂಸ್ಥೆಯ ಆಡಳಿತ ನಿರ್ದೇಶಕಿ ವೀಣಾ ಅನಂತರಾಮ ಸೋಮಯಾಗಿ ಅವರ ಮಾಗದರ್ಶನದಂತೆ ಸಂಸ್ಥೆಯ ಮಾಲಕ ವಿಕ್ರಾಂತ್ ಸೋಮಯಾಗಿ ಈ ಜೋಡಿ ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ.
ಅನಂತ್ ಮೋಟಾರ್‍ಸ್ ಶೋರೂಮಿನಲ್ಲಿ ಸೂಪರ್‌ವೈಸರ್ ಆಗಿ ಸುಬ್ರಹ್ಮಣ್ಯ, ಮನೇಜರ್ ಆಗಿ ಜಯರಾಮ್, ಮೇಲುಸ್ತುವಾರಿಯಾಗಿ ದೀಪಕ್, ಸರ್ವಿಸ್ ಟೆಕ್ನೀಷಿಯನ್‌ಗಳಾಗಿ ಚಂದ್ರ, ಗಣೇಶ್, ಮೋಕ್ಷಿತ್, ಪ್ರದೀಪ್, ಸೂರಜ್, ದೀಪಕ್, ವಿವಿಧ ವಿಭಾಗಗಳಲ್ಲಿ ಸಂಧ್ಯಾ, ಸೌಮ್ಯಾ, ಭಾರತಿ, ಅಕ್ಷತಾ, ಪವನ್, ಸುನಿಲ್ ಶ್ರೀರಾಮ್ ಫೈನಾನ್ಸ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಶಸ್ತಿಯ ಸಂಭ್ರಮದ ವೇಳೆ ಹೀರೋ ಪೈನಾನ್ಸ್‌ನ ಮಂಗಳೂರು ವಿಭಾಗೀಯ ವ್ಯವಸ್ಥಾಪಕ ರಿಯಾಝ್ ಪುತ್ತೂರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.