ಶಾಮಿಯಾನ ಮಾಲಕರ ಸಂಘ ಬೆಳ್ತಂಗಡಿ ತಾಲೂಕು ಉದ್ಘಾಟನೆ

 

ಗುರುವಾಯನಕೆರೆ: ಶಾಮಿಯಾನ ಎಂದರೆ ವ್ಯವಹಾರಕ್ಕಿಂತಲೂ ಸೇವೆ ಎಂಬುದು ಗಮನಾರ್ಹ. ಸಾರ್ವಜನಿಕ ಕ್ಷೇತ್ರದಲ್ಲಿ ವ್ಯವಹಾರದಲ್ಲಿ ತೊಡಗಿಕೊಂಡಿರುವವರಿಗೆ ಸೇವೆಯ ಪ್ರಜ್ಞೆ, ಸಮಯ ಪ್ರಜ್ಞೆ, ಜನ ಪ್ರಜ್ಞೆ ಅತ್ಯಂತ ಮುಖ್ಯವಾಗಿ ಬೇಕಾಗಿದೆ ಎಂದು ಸೇಕ್ರೆಡ್‌ ಹಾರ್ಟ್ ಚರ್ಚ್ ಮಡಂತ್ಯಾರು ಇಲ್ಲಿನ ಪ್ರಧಾನ ಧರ್ಮಗುರುಗಳಾದ ರೆ. ಫಾ ಬೇಸಿಲ್ ವಾಸ್ ಹೇಳಿದರು.
ದ.ಕ ಜಿಲ್ಲಾ ಶಾಮಿಯಾನ ಮಾಲಕರ ಸಂಘ ಇದರ ಬೆಳ್ತಂಗಡಿ ತಾಲೂಕು ಸಮಿತಿಯ ಉದ್ಘಾಟನಾ ಸಮಾರಂಭ ಅ. 10 ರಂದು ಗುರುವಾಯನಕೆರೆ ಕುಲಾಲ ಮಂದಿರದಲ್ಲಿ ಜರುಗಿ, ಈ ಸಂದರ್ಭ ಅವರು ಆಶೀರ್ವಚನ ನೀಡಿದರು.
ಪವಿತ್ರ ಸಂದೇಶದಂತೆ ಕಷ್ಟಪಟ್ಟು ದುಡಿವವನಿಗೆ ಇಲ್ಲಿ ಭಗವಂತನ ಆಶೀರ್ವಾದ ಖಂಡಿತಾ ಲಭಿಸಲಿದೆ. ಸೋಮಾರಿಯಾಗಿರುವವನಿಗೆ ಅನ್ನವನ್ನೂ ನೀಡಬೇಡ ಎಂಬ ಸಂದೇಶದ ಮರ್ಮ ಇದಾಗಿದೆ. ಶಾಮಯಾನ ಉದ್ಯಮ ನಡೆಸುವ ನೀವು ರಾತ್ರಿ ಹಗಲೆನ್ನದೆ, ಬಡವ ಶ್ರೀಮಂತನೆನ್ನದೆ ದುಡಿಯುತ್ತೀರಿ. ನಿಮಗೆ ಭಗವಂತನು ಯಶಸ್ಸು ಖಂಡಿತಾ ನೀಡುತ್ತಾನೆ ಎಂದರು.
ಅಧ್ಯಕ್ಷೆ ವಹಿಸಿದ್ದ ಸಂಘದ ಅಧ್ಯಕ್ಷ ಅಬ್ದುಲ್ ಲತೀಫ್ ಮಾತನಾಡಿ, ಸಮಾಜದಲ್ಲಿ ನಮ್ಮನ್ನು ದುರುಪಯೋಗ ಮಾಡಿಕೊಂಡು ಹಣ ವಂಚನೆ ಮಾಡುವವರಿದ್ದಾರೆ. ಅವರ ಕಿವಿ ಹಿಂಡಲು ನಮಗೆ ಸಂಘ ಬೇಕು. ನಮ್ಮ ಕಾರ್ಮಿಕರಿಗೆ ಅಗತ್ಯ ಸಂದರ್ಭಗಳಲ್ಲಿ ಆರ್ಥಿಕ ನೆರವು, ಅವರ ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹ, ಮುಂದಕ್ಕೆ ಆರೋಗ್ಯ ರಕ್ಷಣೆಗಾಗಿ ವಿಮೆ ಇತ್ಯಾಧಿ ವ್ಯವಸ್ಥೆ ಮಾಡುವ ಉದ್ದೇಶವಿದೆ. ಎಲ್ಲರ ಸಹಕಾರ ಪಡೆದು ಒಳ್ಳೊಳ್ಳೆ ಕಾರ್ಯಗಳನ್ನು ಮಾಡಲು ಉದ್ದೇಶಿಸಿದ್ದೇವೆ ಎಂದರು.
ಸಮಾರಂಭದಲ್ಲಿ ಬಂಟ್ವಾಳ ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಬಾಬು ಕೆ.ವಿ ವಿಟ್ಲ, ಮಂಗಳೂರು ಪೂನಿಯಾ ಟೆಂಟ್ ಹೌಸ್ ಮಾಲಕ ರಾಜೇಶ್, ಮಂಗಳೂರಿನ ಕರಾವಳಿ ಟೆಂಟ್ ವರ್ಕ್ಸ್ ಮಾಲಕ ಅಬ್ದುಲ್ ರಶೀದ್ ಡಿ.ಎಂ, ಬೆಳ್ತಂಗಡಿ ಶ್ರೀ ದುರ್ಗಾ ಟೆಂಟ್ ಹೌಸ್ ಮಾಲಕ ಕೃಷ್ಣ ಕುಮಾರ್ ಮೂಡಬಿದ್ರೆ ಜಿ. ಕೆ ಶಾಮಿಯಾನದ ಗಣೇಶ್ ಕಾಮತ್, ಶಿವಪ್ರಸಾದ್ ಹೆಗ್ಡೆ, ಬಂಟ್ವಾಳ ಸಂಘದ ಪ್ರತಿನಿಧಿ ಶ್ರೀನಿವಾಸ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಲ| ಅಜಿತ್ ಕುಮಾರ್ ಕೊಕ್ರಾಡಿ ನಿರೂಪಿಸಿದರು. ಸಂಘದ ಗೌರವಾಧ್ಯಕ್ಷ ಪೃಥ್ವಿರಂಜನ್ ರಾವ್ ಸ್ವಾಗತಿಸಿದರು.
ಕೋಶಾಧಿಕಾರಿ ಸುಕೇಶ್ ಜೈನ್ ಸಹಿತ ಪದಾಧಿಕಾರಿಗಳು, ಸದಸ್ಯರುಗಳು ಸಹಕಾರ ನೀಡಿದರು. ಅನನ್ಯಾ ಗೇರುಕಟ್ಟೆ ಪ್ರಾರ್ಥನಾ ಗೀತೆ ಹಾಡಿದರು.
ಸಂಘದ ಪ್ರ. ಕಾರ್ಯದರ್ಶಿ ಬಿ ಹರೀಶ್ ಕುಮಾರ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.