ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘ ಗ್ರಾಮ ಸಮಿತಿ ಉದ್ಘಾಟನೆ

ತೋಟತ್ತಾಡಿ: ಭಾರತೀಯ ಮಜ್ದೂರ್ ಸಂಘ ಬೆಳ್ತಂಗಡಿ ತಾಲೂಕು , ಸಮಿತಿ ಇದರ ಆಶ್ರಯದಲ್ಲಿ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘ ಗ್ರಾಮ ಸಮಿತಿ ತೋಟತ್ತಾಡಿ ಇದರ ಉದ್ಘಾಟನಾ ಕಾರ್ಯಕ್ರಮ ಮತ್ತು ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳ ಮಾಹಿತಿ ಹಾಗೂ ನೊಂದಾವಣಾ ಕಾರ್ಯಾಗಾರವನ್ನು ಶಾಸಕ ಹರೀಶ್ ಪೂಂಜ ದೀಪ ಬೆಳಗಿಸಿ ಉದ್ಘಾಟಿಸಿದರು.
ನಂತರ ಮಾತಾಡಿ ಜಗತ್ತಿನಲ್ಲಿ ಅತೀ ದೊಡ್ಡ ಸಂಘಟನೆ ಎಂದರೆ ಭಾರತೀಯ ಮಜ್ದೂರ್ ಸಂಘ ಎಂದರು. ಈ ಸಂಘಟನೆಯನ್ನು ದಿ| ಪ್ರಭಾಕರ ಘಾಟೆ ಕಟ್ಟಿ ಬೆಳೆಸಿದವರು. ಕಾರ್ಮಿಕರ ಬದುಕಿನ ಯೋಜನೆ ರೂಪಿಸಿಕೊಳ್ಳಲು ಇರುವ ಸಂಘಟನೆ ಇದು. ಕಾರ್ಮಿಕರಿಗೆ ಸರಕಾರದಿಂದ ದೊರೆಯುವ ಹಲವಾರು ಯೋಜನೆಗಳಿದೆ. ಇದಕ್ಕೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದರು.
ಅಧ್ಯಕ್ಷತೆಯನ್ನು ತಾಲೂಕು ಸಮಿತಿ ಅಧ್ಯಕ್ಷ ನ್ಯಾಯವಾದಿ ಉದಯ ಬಿ.ಕೆ ವಹಿಸಿದ್ದರು. ಅಸಂಘಟಿತ ಕಾರ್ಮಿಕ ವರ್ಗದವರನ್ನು ಒಗ್ಗೂಡಿಸಿ, ಕಾರ್ಮಿಕರ ಭದ್ರತೆಗಾಗಿ ಈ ಸಂಘಟನೆ ಬೇಕಾಗಿದೆ. ಅದಕ್ಕಾಗಿ ಬಿ.ಎಸ್.ಎಂ ಸಂಘಟನೆ ಪ್ರಾಮಾಣಿಕ ಕೆಲಸ ಮಾಡುತ್ತಿದೆ ಎಂದರು.
ಇನ್ನೋರ್ವ ಅತಿಥಿ ಚಾರ್ಮಾಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ ಮಾತನಾಡಿ, ಈ ದೇಶದಲ್ಲಿ ಶೇ.೭೫ ಕಾರ್ಮಿಕರಿದ್ದಾರೆ. ಕಾರ್ಮಿಕರಿಗೆ ಸರಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ತಿಳುವಳಿಕೆಯ ಕೊರತೆಯಿಂದ ಹಿಂದೆ ಉಳಿಯಲು ಕಾರಣ ಎಂದು ಹೇಳಿದರು.
ವಿಜಯ ಜಿ ಅರಳಿ ಪ್ರಾಸ್ತಾವಿಕ ಮಾತನಾಡಿದರು. ಚಾರ್ಮಾಡಿ ಗ್ರಾ.ಪಂ ಅಧ್ಯಕ್ಷೆ ಶೈಲಜಾ ಅಧ್ಯಕ್ಷತೆ ವಹಿಸಿದ್ದರು. ತೋಟತ್ತಾಡಿ ಗ್ರಾಮ ಸಮಿತಿ ಅಧ್ಯಕ್ಷ ದಿವಾಕರ ಪರಪಿತ್ತಿಲು, ಸಂಯೋಜಕ ಜೀವನ್, ಜಗದಿಶ .ಕೆ. ಕಜೆ, ಕಮಲಾಕ್ಷ ಪಾದೆ, ಓಬಯ್ಯ ಗೌಡ, ಸತೀಶ್ ಉಬರಬೈಲು, ದಿವಾಕರ ಡಿ. ವಳಚ್ಚಿಲು ಉಮೇಶ್ ಬಾರೆ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು,

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.