ತಾಲೂಕು ಮಟ್ಟದ ಬಾಲಕ-ಬಾಲಕಿಯರ ಅಥ್ಲೆಟಿಕ್ಸ್ ಕ್ರೀಡಾಕೂಟ ಸಮಾರೋಪ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಗೇರುಕಟ್ಟೆ: ಕೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೆಳ್ತಂಗಡಿ ಹಾಗೂ ಗೇರುಕಟ್ಟೆ ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವತಿಯಿಂದ ಗೇರುಕಟ್ಟೆ ಸರಕಾರಿ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ಎರಡು ದಿನ ನಡೆದ ಬೆಳ್ತಂಗಡಿ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ 14 ಹಾಗೂ 17 ವಯೋಮಿತಿಯ ಬಾಲಕ-ಬಾಲಕಿಯರ ಅಥ್ಲೆಟಿಕ್ಸ್ ಕ್ರೀಡಾಕೂಟದ ಸಮಾರೋಪ ಸಮಾರಂಭವು ಅ.7 ರಂದು ಜರುಗಿತು.

ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತನಾಡಿದ ಮಾಜಿ ಶಾಸಕ ಕೆ. ವಸಂತ ಬಂಗೇರ  , ಗ್ರಾಮೀಣ ಪ್ರತಿಭೆಗಳಿಗೆ ಕೇಂದ್ರ ಹಾಗೂ ರಾಜ್ಯ ಸರಕಾರ ಹೆಚ್ಚಿನ ಆದ್ಯತೆ ನೀಡಿ ಪ್ರೋತ್ಸಾಹ ನೀಡಬೇಕಾಗಿದೆ. ಕ್ರೀಡಾಳುಗಳಿಗೆ ಸಹಕಾರ, ಮಾರ್ಗದರ್ಶನ ನೀಡಿದ್ದಲ್ಲಿ ರಾಷ್ಟ್ರೀಯ ಅಂತರಾಷ್ಟ್ರೀಯ  ಮಟ್ಟದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಗ್ರಾಮೀಣ ಭಾಗದಲ್ಲಿ ಇದ್ದಾರೆ. ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ಸಾಧನೆಯನ್ನು ಮಾಡಬೇಕು ಎಂದರು.

ಕ್ರೀಡಾಕೂಟ ನಿರ್ವಹಣಾ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಕೆ . ಎಸ್ ಅಧ್ಯಕ್ಷತೆ ವಹಿಸಿದ್ದರು.  ಮುಳಿಯ ಗ್ರೂಪ್ಸ್ ಆಡಳಿತ ನಿರ್ದೇಶಕ ಕೇಶವ ಪ್ರಸಾದ್ ಮುಳಿಯ, ಜಿ.ಪಂ ಮಾಜಿ ಸದಸ್ಯ ರಾಜಶೇಖರ ಅಜ್ರಿ, ಶೈಲೇಶ್ ಕುಮಾರ್, ತಾಪಂ ಮಾಜಿ ಅಧ್ಯಕ್ಷೆ ಜಯಂತಿ ಪಾಲೆದು, ಸರಕಾರಿ ನೌಕರರ ಸಂಘದ ಅಧ್ಯಕ್ಷ ಜಯಕೀರ್ತಿ ಜೈನ್ , ಜಿ.ಪಂ ಸದಸ್ಯೆ  ಮಮತಾ ಎಂ ಶೆಟ್ಟಿ, ಗ್ರಾ.ಪಂ ಸದಸ್ಯ ದಿವಾಕರ ಮೆದಿನ, ಅಬ್ದುಲ್ ಕರಿಂ, ಶಾಲೆಯ ಸ್ಥಾಪಕ ಸಿತಿ ಅಧ್ಯಕ್ಷ ದಿವಾಕರ ಶಾಸ್ತ್ರಿ, ಲಯನ್ಸ್ ಅಧ್ಯಕ್ಷೆ ಮೇದಿನಿ ಗೌಡ,  ದೈಹಿಕ ಶಿಕ್ಷಕ ಪರಿವೀಕ್ಷಣಾಧಿಕಾರಿ ಯಶೋಧರ ಸುವರ್ಣ, ಶಿಕ್ಷಕ ಸಂಘಗಳ ಪದಾಧಕಾರಿಗಳಾದ ಧರಣೇಂದ್ರ ಜೈನ್, ಕೃಷ್ಣಾನಂದ, ಯುವರಾಜ ಅನಾರು, ಉಪನ್ಯಾಸಕ ಕೇಶವ ಬಂಗೇರ, ಉಪಪ್ರಾಂಶುಪಾಲ ಲಕ್ಷ್ಮಣ ಶೆಟ್ಟಿ, ಸಮಿತಿಯ ಪದಾಧಿಕಾರಿಗಳಾದ ತುಕಾರಾಮ ಪೂಜಾರಿ, ರತ್ನಾಕರ ಪೂಜಾರಿ, ಸಿ. ಆರ್. ಪಿ   ರಾಜೇಶ್ ಉಪಸ್ಥಿತರಿದ್ದರು.

ಪ್ರಾಥಮಿಕ ಶಾಲಾ ವಿಭಾಗ
ಬಾಲಕರ ವಿಭಾಗದಲ್ಲಿ ವೈಯುಕ್ತಿಕ ಚಾಂಪಿಯನ್ ಆಗಿ ಉಜಿರೆ ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆಯ ಉಬೈದ್ ಹಾಗೂ ಧರ್ಮಸ್ಥಳ ಎಸ್‌ಡಿಎಂ ಅ. ಹಿ. ಪ್ರಾ. ಶಾಲೆಯ ಮದನ್ ಕುಮಾರ್ ಪಡೆದಿದ್ದಾರೆ. ಬಾಲಕಿಯರ ವಿಭಾಗದಲ್ಲಿ ಬಂದಾರು ಸ. ಉ. ಹಿ. ಪ್ರಾ. ಶಾಲೆಯ ಮೋಹಿನಿ ಹಾಗೂ ಉರುವಾಲು ಶ್ರೀಭಾರತಿ ವಿದ್ಯಾಸಂಸ್ಥೆಯ ಉಷಾ ಪ್ರಶಸ್ತಿ ಗಳಿಸಿದ್ದಾರೆ.
ಬಾಲಕರ ತಂಡ ಪ್ರಶಸ್ತಿಯನ್ನು ಉಜಿರೆ ಎಸ್‌ಡಿಎಂ ಅ. ಹಿ. ಪ್ರಾ. ಶಾಲೆ ಹಾಗೂ ಬಾಲಕಿಯರ ತಂಡ ಪ್ರಶಸ್ತಿಯನ್ನು ಬಂದಾರು ಸ.ಉ. ಹಿ. ಪ್ರಾ. ಶಾಲೆ ಪಡೆದುಕೊಂಡಿದೆ.

ಪ್ರೌಢ ಶಾಲಾ ವಿಭಾಗ
ಬಾಲಕರ ವೈಯುಕ್ತಿಕ ವಿಭಾಗದಲ್ಲಿ ಗೇರುಕಟ್ಟೆ ಸ. ಪ್ರೌ. ಶಾಲೆಯ ಯಕ್ಷಿತ್ ಕೆ. ಬಿ ಹಾಗೂ ಮಚ್ಚಿನ ಸ. ಪ್ರೌ. ಶಾಲೆಯ ಇಝಾಜ್‌ಖಾನ್ ಪ್ರಶಸ್ತಿ ಪಡೆದುಕೊಂಡಿದ್ದು, ಬಾಲಕಿಯರ ವಿಭಾಗದಲ್ಲಿ ಗೇರುಕಟ್ಟೆ ಪ್ರೌ. ಶಾಲೆಯ ರಕ್ಷಿತಾ ಡಿ. ಪ್ರಶಸ್ತಿ ಗಳಿಸಿದ್ದಾರೆ.
ಬಾಲಕರ ತಂಡ ಪ್ರಶಸ್ತಿಯನ್ನು ಮಚ್ಚಿನ ಸ. ಪ್ರೌ. ಶಾಲೆ ಹಾಗೂ ಬಾಲಕಿಯ ತಂಡ ಪ್ರಶಸ್ತಿಯನ್ನು ಗೇರುಕಟ್ಟೆ ಸ. ಪ್ರೌ. ಶಾಲೆ ಪಡೆದುಕೊಂಡಿದೆ.
14 ವಯೋಮಿತಿಯ 8ನೇ ತರಗತಿಯ ಬಾಲಕರ ವಿಭಾಗದ ತಂಡ ಪ್ರಶಸತಿಯನ್ನು ಉಜಿರೆ ಅನುಗ್ರಹ ಶಾಲೆ ಹಾಗೂ ಬಾಲಕಿಯ ವಿಭಾಗದಲ್ಲಿ ಮಚ್ಚಿನ ಸ. ಉ. ಹಿ. ಪ್ರಾ. ಶಾಲೆ ಹಾಗೂ ಕಣಿಯೂರು ಕಸಬಾ ಸ.ಉ. ಹಿ. ಪ್ರಾ. ಶಾಲೆ ಪಡೆದುಕೊಂಡಿದೆ. ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿಯನ್ನು ಗೇರುಕಟ್ಟೆ ಸರಕಾರಿ ಪ್ರೌಢ ಶಾಲೆ ಪಡೆದುಕೊಂಡಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.