ತಣ್ಣೀರುಪಂತ: ಗ್ರಾ.ಪಂ ಅಧ್ಯಕ್ಷ, ಪಿಡಿಒಗೆ ನಿಂದನೆ ದೂರು

ತಣ್ಣೀರುಪಂತ: ಸರಕಾರಿ ಕಾಮಗಾರಿಗೆ ತಡೆಯೊಡ್ಡಲು ಪ್ರಯತ್ನಿಸಿ, ಸ್ಥಳ ಪರಿಶೀಲನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ತಣ್ಣೀರುಪಂತ ಗ್ರಾ.ಪಂ ಅಧ್ಯಕ್ಷ, ಸದಸ್ಯ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ ಗ್ರಾಮಸ್ಥ ಯೋಗೀಶ್ ಎಂಬವರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕರಾಯ ಗ್ರಾಮದ ಶಿವಗಿರಿ ಎಂಬಲ್ಲಿಯ ರಸ್ತೆ ಕಾಂಕ್ರಿಟೀಕರಣ ಕಾಮಗಾರಿ ಪೂರ್ಣಗೊಂಡ ಬಳಿಕ, ರಸ್ತೆಯಂಚಿಗೆ ಮಣ್ಣು ತುಂಬಿಸುವ ಕಾರ್ಯನಡೆಸಲು ಸರ್ಕಾರಿ ಸ್ವಾಮ್ಯದ ಭೂಮಿಯಿಂದ ಮಣ್ಣು ತೆಗೆಯುತ್ತಿದ್ದ ಸಂದರ್ಭದಲ್ಲಿ, ಸ್ಥಳೀಯ ನಿವಾಸಿ ಶ್ರೀಧರ ಪೂಜಾರಿ ಮತ್ತು ಇವರ ಪುತ್ರ ಯೋಗೀಶ್‌ರವರು ಭೂಮಿ ತನ್ನದೆಂದು ವಾದಿಸಿ, ಕಾಮಗಾರಿಗೆ ತಡೆಯೊಡ್ಡಿದ್ದಾರೆ. ಈ ಬಗ್ಗೆ ಗ್ರಾ.ಪಂ ಅಧ್ಯಕ್ಷ ವಿಚಾರಿಸಿದಾಗ ಯೋಗೀಶ್ ದೂರವಾಣಿ ಮೂಲಕ ಜೀವ ಬೆದರಿಕೆಯೊಡ್ಡಿದ್ದು, ಸ್ಥಳ ಪರಿಶೀಲನೆಗೆಂದು ತೆರಳಿದ್ದ ಸಂದರ್ಭದಲ್ಲಿ ತಮಗೆ ಅವ್ಯಾಚ್ಯ ಪದಗಳಿಂದ ನಿಂದಿಸಿರುವುದಾಗಿ ಪಿಡಿಒ ದೂರಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.