ಮುಳಿಯ ಚಿನ್ನೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಪುತ್ತೂರಿನ ಪ್ರಸಿದ್ಧ ಚಿನ್ನಾಭರಣಗಳ ಮಳಿಗೆ ಮುಳಿಯ ಜ್ಯುವೆಲ್ಸ್ ನಲ್ಲಿ “ಮುಳಿಯ ಚಿನ್ನೋತ್ಸವ 2018” ರ ಆಮಂತ್ರಣ ಪತ್ರಿಕೆಯನ್ನು ಪುತ್ತೂರು ನಗರಸಭೆಯ ಹಿರಿಯ ಆರೋಗ್ಯ ಅಧಿಕಾರಿಯಾದ ಶ್ರೀಮತಿ ಶ್ವೇತ ಕಿರಣ್ ಹಾಗೂ ಗ್ರಾಹಕರಾದ ಮಾಸ್ಟರ್ ಜೋಸೆಫ್‌ರವರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತ ನಿರ್ದೇಶಕರಾದ ಶ್ರೀ ಕೃಷ್ಣ ನಾರಾಯಣ ಮುಳಿಯ, ಶಾಖಾ ಪ್ರಬಂಧಕರಾದ ನಾಮ್‌ದೇವ್ ಮಲ್ಯ, ಫ್ಲೋರ್ ಮ್ಯಾನೇಜರಾದ ಯತೀಶ್ ಮತ್ತು ಆನಂದ ಕುಲಾಲ್ ಉಪಸ್ಥಿತರಿದ್ದರು.
ಪ್ರತೀ ವರ್ಷದಂತೆ ಜನ ಮನ್ನಣೆ ಪಡೆದ “ಮುಳಿಯ ಚಿನ್ನೋತ್ಸವ” ಅಕ್ಟೋಬರ್ 10 ರಿಂದ ಆರಂಭವಾಗಲಿದೆ. ಸಮಾಜಮುಖಿ ಕಾರ್‍ಯಕ್ರಮಗಳಾದ ಕೃಕೋತ್ಸವದ ಹಾಗೆ ಗ್ರಾಹಕರನ್ನು ಮುಳಿಯ ಶೋರೂಂ ಒಳಗೆ ಬರುವಂತಹ ಹಬ್ಬದ ವಾತಾವರಣವನ್ನು ನಿ”ಸಲಾಗಿದೆ. ಪುತ್ತೂರು ಮತ್ತು ಬೆಳ್ತಂಗಡಿಯ ಎರಡೂ ಶಾಖೆಗಳಲ್ಲಿ ಚಿನ್ನೋತ್ಸವ ನಡೆಯಲಿದೆ.
ಚಿನ್ನೋತ್ಸವದ ಸಂದರ್ಭದಲ್ಲಿ ತೋಲ್‌ಮೋಲ್‌ಕೆ ಬೋಲ್, ಸೆಲ್ಫಿ ಕಾರ್ನಾರ್… ಮುಂತಾದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ..
ಈ ಸಂದರ್ಭದಲ್ಲಿ ಆಡಳಿತ ನಿರ್ದೇಶಕರಾದ ಕೃಷ್ಣ ನಾರಾಯಣ ಮುಳಿಯ ಮಾತನಾಡಿ “ದಸರಾ-ದೀಪಾವಳಿ ಹಬ್ಬದ ಸಂದರ್ಭದಲ್ಲಿ ಜನರು ಚಿನ್ನಾಭರಣ ಖರೀದಿ ಮಾಡುವ ಪರಿಪಾಠ ಇದೆ. ಹಾಗಾಗಿ ಹೆಚ್ಚಿನ ವೆರೈಟಿಯ, ವಿವಿಧ ಗ್ರಾಂಗಳ, ಹೊಸ ಹೊಸ ವಿನ್ಯಾಸದ ಹೆಚ್ಚಿನ ಸ್ಟಾಕ್‌ಗಳನ್ನು ನಾವು ಪ್ರದರ್ಶನ ಮತ್ತು ಮಾರಾಟಕ್ಕೆ ಇಟ್ಟಿದ್ದೇವೆ. ಇದು ಚಿನ್ನೋತ್ಸವದ ವಿಶೇಷ. ಗ್ರಾಹಕ ಸಂತೃಪ್ತಿಯಲ್ಲಿ ನಮ್ಮ ಮುಳಿಯ ಕುರಿತಂತೆ ಮಾಹಿತಿ ಸಂಗ್ರಹಿಸಿ ನಮ್ಮ ಕಂಪನಿಯನ್ನು ಇನ್ನಷ್ಟು ಕ್ರಿಯಾಶೀಲವನ್ನಾಗಿ ಮೂಡಿಸುವ ಕೆಲಸ ನಡೆಯುತ್ತಿದೆ.” ಎಂದರು.
ಒಂದು ಲಕ್ಷ ನಗದು ಬಂಪರ್ ಬಹುಮಾನ ಮತ್ತು ದ್ವಿಚಕ್ರ ವಾಹನ, ಸ್ಮಾರ್ಟ್ ಫೋನ್, ಮನೆ ವಸ್ತುಗಳು ಹಾಗೂ ಇನ್ನಿತರ ಆಕರ್ಷಣೀಯ ಗಿಫ್ಟ್‌ಗಳು ಇರಲಿವೆ. ಒಟ್ಟಿನಲ್ಲಿ ‘ಚಿನ್ನಾಭರಣಗಳ ಹಬ್ಬ ಈ ಚಿನ್ನೋತ್ಸವ’ ಎಂದು ಮುಳಿಯ ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.