ತಾಲೂಕು ಔಷಧ ವ್ಯಾಪಾರಸ್ಥರ ಸಂಘದ ದಶಮನೋತ್ಸವ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಉಜಿರೆ: ರೋಗಿಗಳ ಪಾಲಿಗೆ ವೈದ್ಯರೆಂದರೆ ದೇವ ಸ್ವರೂಪಿ. ಅಂತೆಯೇ ಔಷಧ ವ್ಯಾಪಾರಸ್ಥರೂ ಕೂಡ ಸಮಾನ ಗೌರವಕ್ಕೆ ಪಾತ್ರರು. ನೀವೆಲ್ಲಾ ಸಂಘಟನೆ ಮೂಲಕ ಕಳೆದ 10 ವರ್ಷಗಳಿಂದ ತಾಲೂಕಿನಲ್ಲಿ ಮಾಡಿದ ಕಾರ್ಯಗಳು ಅತ್ಯುತ್ತಮವಾದುದು. ಯಾವುದೇ ಸಂಘಟನೆ ಇರಲಿ ಅದು ಮಾಡುವ ಸಮಾಜಮುಖಿಃ ಕಾರ್ಯಕ್ರಮದಿಂದ ಸಂಘಟನೆಯ ಹೆಸರು ಚಿರಸ್ಥಾಯಿಯಾಗುತ್ತದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ಅ. 7 ರಂದು ನಡೆದ ಬೆಳ್ತಂಗಡಿ ತಾಲೂಕು ಔಷಧ ವ್ಯಾಪಾರಸ್ಥರ ಸಂಘ ದಶಮಾನೋತ್ಸವ ಆಚರಣೆ, ದಿವ್ಯಾಂಗರಿಗೆ ಹಾಗೂ ಅಶಕ್ತರಿಗೆ ಧನಸಹಾಯ ವಿತರಣೆ ಹಾಗೂ 10 ಮಂದಿ ಯೋಧರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಔಷಧ ವ್ಯಾಪಾರಿಗಳ ಸಂಘಕ್ಕೆ ನಿವೇಶನ:
ತಾಲೂಕಿನ ಔಷಧ ವ್ಯಾಪಾರಿಗಳ ಸಂಘದವರು ಬಯಸಿದಲ್ಲಿ ಸಂಘಕ್ಕೆ ನಿವೇಶನ ಮತ್ತು ನಾನು ಮತ್ತು ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್ ಜೊತೆ ಸೇರಿ ನೀವು ಉದ್ದೇಶಿಸುವ ಕಟ್ಟಡಕ್ಕೆ ಅನುದಾನ ಮತ್ತು ಇತರ ನೆರವು ನೀಡಲಿದ್ದೇವೆ ಎಂದು ಹರೀಶ್ ಪೂಂಜ ಭರವಸೆ ನೀಡಿದರು. ನಿಮ್ಮ ಸಂಘದ ಎಲ್ಲಾ ನೋವು ನಲಿವುಗಳಲ್ಲಿ ನಿಮ್ಮ ಸದಸ್ಯನಂತೆ ನಿಮ್ಮ ಜೊತೆ ನಿಲ್ಲುತ್ತೇನೆ ಎಂದರು.
ಮುಖ್ಯ ಅತಿಥಿಯಾಗಿದ್ದ ಎಂಎಲ್‌ಸಿ ಹರೀಶ್ ಕುಮಾರ್ ಮಾತನಾಡಿ, ವೈದ್ಯರು ಮತ್ತು ಔಷಧ ವ್ಯಾಪಾರಸ್ಥರು ಮಾಡುವ ಸೇವೆಗೆ ಇತರ ಸೇವೆಗಳಿಗಿಂತಲೂ ಬಹುದೊಡ್ಡ ಅರ್ಥವಿದೆ. ಸಂಘಟನೆ ಹುಟ್ಟುಹಾಕವುದು ಸುಲಭ, ಆದರೆ ಅದನ್ನು ಮುಂದುವರಿಸಿಕೊಂಡು ಹೋಗುವುದು ಅಷ್ಟೇ ಕಷ್ಟದ ಕೆಲಸ. ಈ ಸಂಘ ೧೦ ವರ್ಷಗಳಿಂದ ಮಾಡುತ್ತಿರುವ ಒಳ್ಳೆಯ ಕೆಲಸಗಳು, ತಮ್ಮದೇ ಸಾಧಕ ಮಕ್ಕಳಿಗೆ ನೀಡುವ ಪ್ರತಿಭಾ ಪುರಸ್ಕಾರ ವಿದ್ಯಾರ್ಥಿಗಳ ಬಾಳಿನಲ್ಲಿ ಉತ್ತೇಜನದಾಯಕ. ವ್ಯಕ್ತಿಗಳಿಗೆ ವಯಸ್ಸಾದಂತೆ ಶಕ್ತಿಕುಂದುತ್ತಾ ಹೋದರೆ ಸಂಘ ಸಂಸ್ಥೆಗಳು ಶಕ್ತಿಪಡೆಯುತ್ತಾ ಹೋಗುತ್ತದೆ ಎಂದರು.
ಸಮಾರಂಭದಲ್ಲಿ ಬೆಂಗಳೂರು ಸುವರ್ಣ ಕರ್ನಾಟಕ ರಾಜ್ಯ ಔಷಧ ಮತ್ತು ಸಗಟು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಹರಿಕೃಷ್ಣ, ಕಾರ್ಯದರ್ಶಿ ಎಸ್ ಮಂಜುನಾಥ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಡಿ.ಎಂ ಗೌಡ, ತಾ. ಪತ್ರಕರ್ತರ ಸಂಘದ ಅಧ್ಯಕ್ಷ ಮನೋಹರ ಬಳೆಂಜ, ದ.ಕ ಜಿಲ್ಲಾ ಉಪ ಔಷಧ ನಿಯಂತ್ರಕ ಶಿವಕುಮಾರ್, ಸಹಾಯಕ ಔಷಧ ನಿಯಂತ್ರಕ ರಮಾಕಾಂತ ಕುಂಟೆ, ಜಿಲ್ಲಾ ಔಷಧ ಪರಿವೀಕ್ಷಕ ಧನಂಜಯ ಅಡ್ಪಕಿ ಕಾರ್ಯಕ್ರಮಕ್ಕೆ ಶುಭ ಕೋರಿದರು.
ವೇದಿಕೆಯಲ್ಲಿ ಸಂಘದ ಗೌರವಾಧ್ಯಕ್ಷ ಕೇಶವ ಭಟ್, ಕೋಶಾಧಿಕಾರಿ ಗಣಪತಿ ಭಟ್, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಎಚ್, ಉಪಸ್ಥಿತರಿದ್ದರು.
ಸುಜಾತಾ ಭಟ್ ಪ್ರಾರ್ಥನೆ ಹಾಡಿದರು. ಬೆಳ್ತಂಗಡಿ ತಾಲೂಕು ಔಷಧ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಜಗಧೀಶ್ ಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಅಜಿತ್ ಕುಮಾರ್ ಕೊಕ್ರಾಡಿ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.