ಉಜಿರೆಯಲ್ಲಿ ದಸರಾ ಕ್ರೀಡಾಕೂಟ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಜಿರೆ: ಒಲೆಂಪಿಕ್ಸ್‌ನಂತಹಾ ಕ್ರೀಡಾಕೂಟದ ಪದಕ ಪಟ್ಟಿಯಲ್ಲಿ ಭಾರತೀಯರ ಹೆಸರು ಕೊನೆಯ ಸಾಲಿನಲ್ಲಿದ್ದುದನ್ನು ಗಮನಿಸಿರುವ ಪ್ರಧಾನಿ ನರೇಂದ್ರ ಮೋದೀಜಿ ಯವರು ಗ್ರಾಮೀಣ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಕ್ರೀಡಾ ಕ್ಷೇತ್ರದಲ್ಲಿ ಉನ್ನತ ಸ್ಥಾನಕ್ಕೇರಿಸಲು ಅನೇಕ ಪ್ರೋತ್ಸಾಹದಾಯಕ ಕಾರ್ಯಗಳನ್ನು ಅನುಷ್ಟಾನಕ್ಕೆ ತಂದಿದ್ದಾರೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಉಜಿರೆ ಶ್ರೀ ರತ್ನವರ್ಮ ಕ್ರೀಡಾಂಗಣದಲ್ಲಿ ಅ. 7  ರಂದು ನಡೆದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಅಧ್ಯಕ್ಷತೆಯನ್ನು ಉಜಿರೆ ತಾ.ಪಂ ಸದಸ್ಯ ಶಶಿಧರ ಎಂ ಕಲ್ಮಂಜ ವಹಿಸಿದ್ದರು.
ಮುಂದಿನ ವರ್ಷ ಸಂಭ್ರಮದ ದಸರಾ ಕ್ರೀಡಾಕೂಟ:
ಕ್ರೀಡಾಕೂಟದಲ್ಲಿ ನೀರಸ ವಾತಾವರಣವಿದೆ ಎಂದು ತಿಳಿಸಿದ ಶಾಸಕ ಹರೀಶ್ ಪೂಂಜ, ಮುಂದಿನ ವರ್ಷ ತಾಲೂಕಿನ ಯುವಕ ಯುವತಿ ಮಂಡಲಗಳನ್ನು ಸೇರಿಸಿ ಕ್ರೀಡಾಕೂಟಕ್ಕೆ ಪೂರ್ವವಾಗಿಯೇ ಸಭೆ ನಡೆಸಿ ದಾನಿಗಳ ಸಹಕಾರವನ್ನೂ ಪಡೆದು ಈ ಕ್ರೀಡಾಕೂಟವನ್ನು ಎಲ್ಲರೂ ಸೇರುವಂತೆ ಪ್ರಚೋದಿಸಿ ಸಂಭ್ರಮದಿಂದ ಆಚರಿಸುವಂತಾಗಬೇಕು ಎಂದು ತಮ್ಮ ಭಾಷಣದಲ್ಲಿ ತಿಳಿಸಿದರು.
ಜಿ.ಪಂ ಸದಸ್ಯರಾದ ಕೆ ಕೊರಗಪ್ಪ ನಾಯ್ಕ ಮಾತನಾಡಿ, ಸರಕಾರದ ಪ್ರಾಕೃತಿಕ ವಿಕೋಪದ ಹೆಸರಿನಲ್ಲಿ ಈ ಕ್ರೀಡಾಕೂಟವನ್ನು ಮೊಟಕುಗೊಳಿಸುವ ಪ್ರಯತ್ನ ಮಾಡಿತ್ತು. ಆಧರೆ ಜಿ.ಪಂ ಸಾಮಾನ್ಯ ಸಭೆಯಲ್ಲಿ ಅದರ ಬಗ್ಗೆ ಧ್ವನಿಯೆತ್ತಿ, ಅನುದಾನವನ್ನು ಮೀಸಲಿಟ್ಟು ಕ್ರೀಡಾಕೂಟ ಆಗುವಂತೆ ಪ್ರಯತ್ನಪಟ್ಟದ್ದನ್ನು ನೆನಪಿಸಿಕೊಂಡರು.
ಮುಖ್ಯ ಅತಿಥಿಗಳಾಗಿ ಸೌಮ್ಯಲತಾ ಜಯಂತ ಗೌಡ ಮತ್ತು ಮಮತಾ ಎಂ ಶೆಟ್ಟಿ ಪಂದ್ಯಾಕೂಟಕ್ಕೆ ಶುಭಕೋರಿದರು. ವೇದಿಕೆಯಲ್ಲಿ ತಾ.ಪಂ ಸದಸ್ಯ ಕೃಷ್ಣಯ್ಯ ಆಚಾರ್ಯ, ದೈಹಿಕ ಶಿಕ್ಷಣ ಪರಿವೀಕ್ಷಕ ಯಶೋಧರ ಸುವರ್ಣ, ಜಿಲ್ಲಾ ಯುವಜನ ಒಕ್ಕೂಟದ ಗೌರವಾಧ್ಯಕ್ಷ ರಾಜೀವ ಸಾಲಿಯಾನ್ ಮುಂಡೂರು, ತಾ. ಅಧ್ಯಕ್ಷ ಪ್ರಭಾಕರ ಶೆಟ್ಟಿ ಉಪ್ಪಡ್ಕ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕೃಷ್ಣಾನಂದ ರಾವ್ ಮುಂಡಾಜೆ, ತಾಲೂಕು ಅಧ್ಯಕ್ಷ ಯುವರಾಜ ಅನಾರು. ಮುಂಡಾಜೆ ಯಂಗ್‌ಚಾಲೆಂಜರ್‍ಸ್ ಕ್ರೀಡಾ ಸಂಘದ ಸಂಸ್ಥಾಪಕ ಲ. ನಾಮದೇವ ರಾವ್, ಎಸ್‌ಡಿಎಂ ಕಾಲೇಜು ಕ್ರೀಡಾ ನಿರ್ದೇಶಕ ರಮೇಶ್ ಉಪಸ್ಥಿತರಿದ್ದರು.
ಜಯಾನಂದ ಲಾಲ ಕಾರ್ಯಕ್ರಮ ನಿರೂಪಿಸಿದರು.
ತಾ. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರೂ ಆಗಿರುವ ತಾಲೂಕು ಯುವ ಸಬಲೀಕರಣ ಕ್ರೀಡಾಧಿಕಾರಿ ಪ್ರಭಾಕರ ನಾರಾವಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿಯರಾದ ಪ್ರತೀಕ್ಷಾ ಮತ್ತು ಬಳಗದವರು ಪ್ರಾರ್ಥನೆ ಗೀತೆ ಹಾಡಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.