ಪ್ರಶಸ್ತಿ ಪುರಸ್ಕೃತ ಮತ್ತು ನಿವೃತ ಸಾಧಕ ಶಿಕ್ಷಕರಿಗೆ ಶಿಕ್ಷಣ ಸಂಪನ್ಮೂಲ ಕೇಂದ್ರದಿಂದ ಸನ್ಮಾನ

ಶಿಕ್ಷಣ ಸಂಪನ್ಮೂಲ ಕೇಂದ್ರ ಬೆಳ್ತಂಗಡಿ, ಎಸ್‌ಡಿಎಂಸಿ ಸಮನ್ವಯ ಸಮಿತಿ ಬೆಳ್ತಂಗಡಿ, ಮುಳಿಯ ಜ್ಯುವೆಲ್ಲರ್‍ಸ್ ಬೆಳ್ತಂಗಡಿ ಇವರ ಜಂಟಿ ಆಶ್ರಯದಲ್ಲಿ ಅ.6 ರಂದು ಮುಳಿಯ ಜ್ಯುವೆಲ್ಲರ್‍ಸ್ ಮೇಲ್ಮಹಡಿಯಲ್ಲಿ ತಾಲೂಕಿನ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷ ಶ್ರೀಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಗೋಪಾಲಕೃಷ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಿಕ್ಷಕರಾದ ಯಾಕೂಬ್ ಕೊಯ್ಯೂರು (ರಾಜ್ಯ ಪ್ರಶಸ್ತಿ), ವಸಂತಿ ಟಿ ನಿಡ್ಲೆ( ರಾಜ್ಯ ಪ್ರಶಸ್ತಿ), ಬಾಬು ಗೌಡ ಬಾಜಿಮಾರು (ನಿವೃತ ಶಿಕ್ಷಕ), ಮೇರಿ ಟೀಚರ್ (ನಿವೃತ ಶಿಕ್ಷಕಿ), ವಿಜಯ (ಅತ್ಯುತ್ತಮ ಶಾಲೆ ಪೆರಿಯಡ್ಕ), ಇವರನ್ನು ಪುರಸ್ಕರಿಸಲಾಯಿತು.
ಸಮಾರಂಭದಲ್ಲಿ ಎಸ್‌ಡಿಎಂಸಿ ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷ ಮೊಯಿದು, ತಾ. ಅಧ್ಯಕ್ಷ ರಮೇಶ್ ಶೆಟ್ಟಿ, ಜಿಲ್ಲಾ ಸಮಿತಿ ಸದ್ಸಯ ನೀಲಕಂಠ ಶೆಟ್ಟಿ, ಮುಳಿಯ ಜ್ಯುವೆಲ್ಲರ್‍ಸ್ ವ್ಯವಸ್ಥಾಪಕ ಪ್ರವೀಣ್ ಉಪಸ್ಥಿತರಿದ್ದರು. ಸಿ.ಕೆ ಚಂದ್ರಕಲಾ, ಚಿಂತನಾ, ಮಲ್ಲಿಕಾ, ಸುರೇಶ್ ಮಾಸ್ಟರ್, ವಾಲ್ಟರ್ ಪಇಂಟೋ ಸನ್ಮಾನಿತರ ಪರಿಚಯ ಮಾಡಿದರು. ಅನುಷಾ ಸುಪ್ರೀತಾ ಪ್ರಾರ್ಥನೆ ಹಾಡಿದರು. ಸುಧಾಮಣಿ ರಮಾನಂದ ಸಾಲಿಯಾನ್ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.