ಸ್ನೇಹ ಸಂಗಮ ಆಟೋ ರಿಕ್ಷಾ ನಿಲ್ದಾಣ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1

ಗೇರುಕಟ್ಟೆ: ಕಳಿಯ ಗ್ರಾಮದ ಗೇರುಕಟ್ಟೆ ಸ್ನೇಹ ಸಂಗಮ ಆಟೋ ಚಾಲಕರ ಮತ್ತು ಮಾಲಕರ ಸಂಘದ ಆಟೋ ರಿಕ್ಷಾ ನಿಲ್ದಾಣ ಉದ್ಘಾಟನಾ ಸಮಾರಂಭವು ಅ.5 ರಂದು ಜರುಗಿತು.
ಶಾಸಕ ಹರೀಶ್ ಪೂಂಜ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಾ ಸಮಾಜದ ಬದುಕಿನೊಟ್ಟಿಗೆ ಬದುಕುವ ವ್ಯಕ್ತಿಗಳಾಗಿ ಸಮಾಜದ ಕಷ್ಟ-ಸುಖಗಳನ್ನು ಅರಿತುಕೊಂಡು, ಅವರಿಗೆ ಸ್ಪಂದನೆ ನೀಡುತ್ತಾ ,ಸಮಾಜದ ಸೇವೆ ತೊಡಗಿಸಿಕೊಳ್ಳುವವರು ಆಟೋ ಚಾಲಕರು ಎಂದು ಹೇಳಿದರು.
ಸಂಘದ ಅಧ್ಯಕ್ಷ ಪದ್ಮನಾಭ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಳಿಯ ಗ್ರಾ.ಪಂ ಮಾಜಿ ಪ್ರಧಾನ ರತ್ನಾಕರ ಪೂಜಾರಿ ಬಲ್ಪುಂಜ, ಕಳಿಯ ಸಹಕಾರಿ ಸಂಘದ ಅಧ್ಯಕ್ಷ ವಸಂತ ಮಜಲು, ಉದ್ಯಮಿ ಸುರೇಶ್ ಕುಮಾರ್ ಆರ್.ಎನ್, ಕಳಿಯ ಗ್ರಾ.ಪಂ ಅಧ್ಯಕ್ಷ ಶರತ್ ಕುಮಾರ್, ಸಂಚಾರಿ ಪೊಲಿಸ್‌ಠಾಣೆ ಎಸ್.ಐ ಓಡಿಯಪ್ಪ ಗೌಡ, ಜಿ.ಪಂ ಸದಸ್ಯೆ ಮಮತಾ ಎಂ.ಶೆಟ್ಟಿ, ತಾ.ಪಂ ಉಪಾಧ್ಯಕ್ಷೆ ವೇದಾವತಿ, ಸದಸ್ಯರಾದ ಪ್ರವೀಣ ಜಿ ಗೌಡ, ಗ್ರಾ.ಪಂ ಸದಸ್ಯ ಅಬ್ದುಲ್ ಕರೀಂ, ಕುವೆಟ್ಟು ಗ್ರಾ.ಪಂ ಅಧ್ಯಕ್ಷ ಅಶೋಕ ಕೋಟ್ಯಾನ್, ಗೇರುಕಟ್ಟೆ ಪ್ರೌಢಶಾಲಾ ಉಪಪ್ರಾಂಶುಪಾಲ ಕೆ.ಜಿ ಲಕ್ಷ್ಮಣ ಕೊರಂಜ, ಶಾಲಾ ಮುಖ್ಯ ಶಿಕ್ಷಕಿ ಆಲಿಸ್ ವಿಮಲ, ಗೇರುಕಟ್ಟೆ ಮಿಲ್ಕ್ ಸೊಸೈಟಿ ಅಧ್ಯಕ್ಷ ಜನಾರ್ದನ ಗೌಡ, ಪರಪ್ಪು ಜುಮ್ಮಾ ಮಸೀದಿ ಅಧ್ಯಕ್ಷ ಅಬ್ದುಲ್ ಬಶೀರ್, ಪ್ರಗತಿಪರ ಕೃಷಿಕ ತೋಮಸ್ ಕೊರೆಯಾ, ಪೊಲೀಸ್ ಸಿಬ್ಬಂದಿ ಬಸವರಾಜ್ ಉಪಸ್ಥಿತರಿದ್ದರು. ಆಟೋ ಚಾಲಕ ಮತ್ತು ಮಾಲಕರ ಸಂಘದ ವತಿಯಿಂದ ಶಾಸಕರನ್ನು ಸನ್ಮಾನಿಸಲಾಯಿತು.
ಉಪನ್ಯಾಸಕ ಕೇಶವ ಬಂಗೇರ ಸ್ವಾಗತಿಸಿ, ರಾಜೇಶ್ ಪೆಂರ್ಬುಡ ನಿರೂಪಿಸಿ, ಸಂಘದ ಸದಸ್ಯ ಸಿದ್ದೀಕ್ ಗೇರುಕಟ್ಟೆ ವಂದಿಸಿದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.