ಅ.7: ಉಜಿರೆಯಲ್ಲಿ ಉಚಿತ ವೈದ್ಯಕೀಯ ಹಾಗೂ ರಕ್ತದಾನ ಶಿಬಿರ

Advt_NewsUnder_1
Advt_NewsUnder_1
Advt_NewsUnder_1

ಉಜಿರೆ : ಇಲ್ಲಿಯ ಸಂತ ಅಂತೋನಿ ಚರ್ಚ್‌ನ ಸುವರ್ಣ ಮಹೋತ್ಸವ ಹಾಗೂ ಸಂತ ವಿನ್ಸೆಂಟ್ ಡಿಪಾವ್ಲ್ ಸಭಾ ಉಜಿರೆ ಘಟಕದ ದಶಮಾನೋತ್ಸವದ ಪ್ರಯುಕ್ತ ಮಂಗಳೂರು ಹಾಗೂ ತುಂಬೆ ಫಾದರ್ ಮುಲ್ಲರ್‍ಸ್ ವೈದ್ಯಕೀಯ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ಉಜಿರೆ ಸಂತ ಅಂತೋನಿ ಚರ್ಚ್‌ನ ಪಾಲನಾ ಮಂಡಳಿ, ಕಪುಚಿನ್ ಕೃಷಿಕ ಸೇವಾ ಕೇಂದ್ರ ವಿಮುಕ್ತಿ ಲಾಲ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಜಿರೆ ವಲಯ, ಕಥೋಲಿಕ್ ಸಭಾ ಉಜಿರೆ ಘಟಕ, ಭಾರತೀಯ ಕಥೋಲಿಕ್ ಯುವ ಸಂಚಾಲನ, ಸ್ತ್ರೀ ಸಂಘಟಣೆಗಳ ಸಹಕಾರದೊಂದಿಗೆ ಅ.7 ರಂದು ಉಜಿರೆ ಅನುಗ್ರಹ ಶಾಲಾ ವಠಾರದಲ್ಲಿ ಬೃಹತ್ ಉಚಿತ ವೈದ್ಯಕೀಯ ಹಾಗೂ ರಕ್ತದಾನ ಶಿಬಿರವು ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ಗಂಟೆ ವರೆಗೆ ನಡೆಯಲಿದೆ.
ಜನರಲ್ ಮೆಡಿಸಿನ್, ಮಕ್ಕಳ ಚಿಕಿತ್ಸೆ, ಕಿವಿ, ಮೂಗು, ಗಂಟಲು ರೋಗ, ಸ್ತ್ರೀರೋಗ, ಕ್ಯಾಟರಾಕ್ಟ್ ಶಸ್ತ್ರ ಚಿಕಿತ್ಸೆ, ಕಣ್ಣಿಗೆ ಸಂಬಂಧಪಟ್ಟ ಚಿಕಿತ್ಸೆಗಳು, ಮೂಲೆ ಮತ್ತು ಎಲುಬು ರೋಗ, ಶಸ್ತ್ರ ಚಿಕಿತ್ಸೆ, ದಂತ ಚಿಕಿತ್ಸೆ, ಚರ್ಮ ರೋಗ ಮೊದಲಾದ ಖಾಯಿಲೆಗಳಿಗೆ ಉಚಿತ ಚಿಕಿತ್ಸೆ ಲಭ್ಯವಿದೆ. ಸಕ್ಕರೆ ಖಾಯಿಲೆ ರಕ್ತ ಪರೀಕ್ಷೆ, ಇಸಿಜಿ, ರಕ್ತದೊತ್ತಡ, ಶಸ್ತ್ರ ಚಿಕಿತ್ಸೆ, ರೋಗಿಗಳಿಗೆ ಉಚಿತ ಔಷದ ವಿತರಣೆ, ಉಚಿತ ಓದುವ ಕನ್ನಡಕಗಳ ವಿತರಣೆ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.