ವೇಣೂರು: ಮರಬಿದ್ದು ಸಂತೆಮಾರುಕಟ್ಟೆ ಕಟ್ಟಡ ಕುಸಿತ

ವೇಣೂರು: ಇಲ್ಲಿಯ ಶ್ರೀರಾಮನಗರದ ಸಂತೆ ಮಾರುಕಟ್ಟೆ ಕಟ್ಟಡದ ಮೇಲೆ ಭಾರೀ ಗಾತ್ರದ ಮರವೊಂದು ಉರುಳಿ ಬಿದ್ದ ಪರಿಣಾಮ ಕಟ್ಟಡ ಭಾಗಸಃ ಕುಸಿದು ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಕಟ್ಟಡ ಶಿಥಿಲವಸ್ಥೆಯಲ್ಲಿದ್ದು, ಅದರಲ್ಲೇ ವಾರದ ಸಂತೆ ನಡೆಯುತ್ತಿತ್ತು. ಪ್ರತೀ ವರ್ಷ ಏಲಂ ನಡೆಸುವ ಪಂಚಾಯತು ಕಟ್ಟಡದ ದುರಸ್ತಿಗೆ ಮನಸ್ಸು ಮಾಡಿರಲಿಲ್ಲ.
ಇದರಿಂದ ಪ್ರಸಕ್ತ ಸಾಲಿನಲ್ಲಿ ಯಾರೂ ಏಲಂ ವಹಿಸಲು ಮುಂದಾಗಿರಲಿಲ್ಲ. ಆದರೆ ವಾರದ ಸಂತೆಯ ದಿನ ಇಲ್ಲಿ ಜನಜಂಗುಳಿಯಿಂದ ವ್ಯಾಪಾರ ವಹಿವಾಟು ನಡೆಯುತ್ತಿದ್ದು, ಸೆ.30 ರಂದು ರಾತ್ರಿ ನಡೆದ ಕಾರಣ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.
ಸ್ಥಳಕ್ಕೆ ಜಿ.ಪಂ. ಸದಸ್ಯ ಶೇಖರ ಕುಕ್ಕೇಡಿ ಮತ್ತು ಸದಸ್ಯ ಪಿ. ಧರಣೇಂದ್ರ ಕುಮಾರ್, ವೇಣೂರು ಗ್ರಾ.ಪಂ. ಉಪಾಧ್ಯಕ್ಷ ಅರುಣ್ ಕ್ರಾಸ್ತ, ಸದಸ್ಯರಾದ ಸತೀಶ್ ಹೆಗ್ಡೆ, ನೇಮಯ್ಯ ಕುಲಾಲ್, ರಾಜೇಶ್ ಪೂಜಾರಿ ಮೂಡುಕೋಡಿ, ಯಶೋಧರ ಹೆಗ್ಡೆ ಭೇಟಿ ನೀಡಿ ಪರಿಶೀಲಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.