ಪಿಲಿಕಲ ಜಲ್ಲಿ ಕ್ರಶರ್‌ನಲ್ಲಿ ಯು.ಪಿ ಮೂಲದ ಕಾರ್ಮಿಕ ಅಸಹಜ ಸಾವು

Advt_NewsUnder_1
Advt_NewsUnder_1

ಪುದುವೆಟ್ಟು: ಪುದುವೆಟ್ಟು ಗ್ರಾಮದ ಪಿಲಿಕಲ ಬಸ್ತಿ ಎಂಬಲ್ಲಿ ಜಲ್ಲಿ ಕ್ರಶರ್‌ನಲ್ಲಿ ಉತ್ತರ ಪ್ರದೇಶ ಲಕ್ನೋ ಮೂಲದ ಕೂಲಿ ಕಾರ್ಮಿಕ ನಂದ ಕಿಶೋರ್ (32ವ.) ಅವರ ಮೃತದೇಹ ಅಸಹಜವಾಗಿ ಸಾವನ್ನಪ್ಪಿದ ರೀತಿಯಲ್ಲಿ ಅ. 3 ರಂದು ಪತ್ತೆಯಾಗಿದೆ.
3 ದಿನಗಳಿಂದ ನಾಪತ್ತೆಯಾಗಿದ್ದ ಅವರ ಮೃತದೇಹ ಕ್ರಶರ್‌ನ ಪ್ರದೇಶದ ಪೊದೆಯೊಂದರಲ್ಲಿ ಕವುಚಿ ಮಲಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಊರವರಲ್ಲಿ ಅನೇಕ ಸಂದೇಹಗಳಿಗೆ ಕಾರಣವಾಗಿದೆ.
ಮದುವೆಯಾಗಿ ಇಬ್ಬರು ಮಕ್ಕಳಿರುವ ನಂದ ಕಿಶೋರ್ ಈ ಕ್ರೆಶರ್‌ನಲ್ಲಿ ಹೆಲ್ಪರ್‌ಆಗಿ ಕೆಲಸ ಮಾಡುತ್ತಿದ್ದರು. ವಾರದ ಸಂಬಳದ ದಿನ ಎಂದಿನಂತೆ ಮದ್ಯ ಸೇವಿಸಿದ್ದ ಅವರಿಗೆ ಮತ್ತು ಕ್ರಶರ್ ಮೇಲ್ವಿಚಾರಕರ ಮಧ್ಯೆ ಜಗಳವಾಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಆ ಬಳಿಕದಿಂದ ನಾಪತ್ತೆಯಾಗಿದ್ದ ಅವರನ್ನು ಈ ಎರಡು ದಿನಗಳಲ್ಲಿ ಹುಡುಕುವ ಪ್ರಯತ್ನ ಕೂಡ ಆಗಿರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಬುಧವಾರ ಅವರ ಶವ ಪತ್ತೆಯಾಗಿದೆ. ಮೃತದೇಹವನ್ನು ವೀಕ್ಷಿಸುವಾಗ ಮೂರು ದಿನಗಳ ಹಿಂದೆಯೇ ನಂದಕಿಶೋರ್ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂಬ ಅನುಮಾನ ವ್ಯಕ್ತವಾಗಿದೆ. ಇನ್ನೊಂದು ಮೂಲಗಳ ಪ್ರಕಾರ ನಂದಕಿಶೋರ್ ಅವರಿಗೆ ಅನಾರೋಗ್ಯ ಸಮಸ್ಯೆ ಇತ್ತೆಂದು ಅವರು ಹೇಳಿಕೊಂಡಿದ್ದು, ಈ ಕಾರಣಕ್ಕೆ ಅವರು ಬಿದ್ದು ಸಾವನ್ನಪ್ಪಿರಬಹುದೆಂದೂ ಶಂಕೆಯೂ ವ್ಯಕ್ತವಾಗಿದೆ. ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಧಾವಿಸಿದ್ದು ಮಹಜರು ನಡೆಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.