ಸಿ.ಪಿ.ಐ ನಾಗೇಶ್ ಕದ್ರಿ ರಿಗೆ ಬೀಳ್ಕೊಡುಗೆ

Advt_NewsUnder_1
Advt_NewsUnder_1

ಬೆಳ್ತಂಗಡಿ ಪೊಲೀಸ್ ವೃತ್ತದಲ್ಲಿ ಪೊಲೀಸ್ ವೃತ್ತ ನಿರೀಕ್ಷಕರಾಗಿ ಕಳೆದ ಎರಡು ವರ್ಷಗಳಿಂದ ಕರ್ತವ್ಯ ನಿರ್ವಹಿಸಿ, ವರ್ಗಾವಣೆಗೊಂಡಿರುವ ನಾಗೇಶ್ ಕದ್ರಿ ರವರಿಗೆ ಬೆಳ್ತಂಗಡಿ ಪೊಲೀಸ್ ವೃತ್ತದ ವತಿಯಿಂದ  ಬೀಳ್ಕೊಡುಗೆ ಸಮಾರಂಭವು ಬೆಳ್ತಂಗಡಿ ಪೊಲೀಸ್ ಠಾಣಾ ಆವರಣದಲ್ಲಿ ಸೆ.30 ರಂದು  ಜರುಗಿತು.

ಬೆಳ್ತಂಗಡಿ ಪಿ.ಎಸ್.ಐ. ರವಿ ಬಿಎಸ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ನಾಗೇಶ್ ಕದ್ರಿರವರು ಮಾತನಾಡಿ, ಎಲ್ಲಾ ಅಧಿಕಾರಿಗಳು ಪರಸ್ಪರ ವಿಶ್ವಾಸದಿಂದ ಒಟ್ಟಾಗಿ ಕರ್ತವ್ಯ ನಿರ್ವಹಿಸಿದರೆ ಯಾವುದೇ ಸಂದರ್ಭವನ್ನು ಸಮರ್ಥವಾಗಿ ನಿರ್ವಹಿಸಬಹುದೆಂದು ಹೇಳಿದರು. ಈ ಸಂದರ್ಭದಲ್ಲಿ ಬೆಳ್ತಂಗಡಿ ವೃತ್ತ ಕಛೇರಿಯಿಂದ ಪುತ್ತೂರು ಗ್ರಾಮಾಂತರ ವೃತ್ತ ಕಛೇರಿಗೆ ವರ್ಗಾವಣೆಗೊಂಡ ನವಾಜ್ ಬುಡ್ಕಿ ರವರನ್ನು ಸನ್ಮಾನಿಸಿ, ಬೀಳ್ಕೊಡಲಾಯಿತು.
ವೇದಿಕೆಯಲ್ಲಿ ಧರ್ಮಸ್ಥಳ ಪಿಎಸ್. ಐ  ಅವಿನಾಶ್, ಬೆಳ್ತಂಗಡಿ ಸಂಚಾರ ಠಾಣೆಯ ಪಿಎಸ್ ಐ ಗಳಾದ ಓಡಿಯಪ್ಪ, ಶ್ರೀಮತಿ ಭಾರತಿ, ವೇಣೂರು ಪಿಎಸ್.ಐ   ನಾಗರಾಜ್, ಪುಂಜಾಲಕಟ್ಟೆ ಪಿಎಸ್.ಐ   ಸತೀಶ್ ಬಲ್ಲಾಳ್ ಹಾಗೂ ಪೊಲೀಸ್ ಅಧಿಕಾರಿಗಳ ಕುಟುಂಬಸ್ಥರು ಉಪಸ್ಥಿತರಿದ್ದರು.
ಕು|ಚೈತ್ರ ರವರು ಸ್ವಾಗತಿಸಿ, ಕು|ಲತಾ ವಂದಿಸಿ, ಪಿ.ಎ ಸ್ ವೆಂಕಪ್ಪ  ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.