ಬೆಳ್ತಂಗಡಿ : ಕರ್ನಾಟಕ ರಾಜ್ಯ ಎನ್.ಪಿ.ಎಸ್ ನೌಕರರ ಸಂಘದ ವತಿಯಿಂದ ರಾಷ್ಟ್ರೀಯ ಪಿಂಚಣಿ ನೀತಿ (ಎನ್ಪಿಎಸ್) ವಿರುದ್ಧ ರಕ್ತ ಕೊಟ್ಟೇವು ಪಿಂಚಣಿ ಬಿಡೆವು ಎಂಬ ಕ್ರಾಂತಿಕಾರಿ ವಿನೂತನ ಹೋರಾಟ ಅ.3 ರಂದು ಬೆಳ್ತಂಗಡಿ ಮಿನಿ ವಿಧಾನ ಸೌಧದ ಬಳಿ ಬೆಳಗ್ಗಿನಿಂದ ಸಂಜೆಯವರೆಗೆ ನಡೆಯಿತು.
ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮನೋಹರ ಬಳಂಜ ಗಿಡಕ್ಕೆ ನೀರು ಹಾಕುವ ಮೂಲಕ ರಕ್ತದಾನ ಶಿಬಿರ ಉದ್ಘಾಟಿಸಿದರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಜಯಕೀರ್ತಿ ಜೈನ್ ಮಹಾತ್ಮಾ ಗಾಂಧೀಜಿ ಭಾವಚಿತ್ರಕ್ಕೆ ಹಾರ ಹಾಕುವ ಮೂಲಕ ಪ್ರತಿಭಟನಾ ಸಭೆಗೆ ಚಾಲನೆ ನೀಡಿದರು.
ವಿವಿಧ ಸಂಘ ಸಂಸ್ಥೆಗಳಿಂದ ಬೆಂಬಲ: ಎನ್ಪಿಎಸ್ ನೌಕರರ ಹೋರಾಟಕ್ಕೆ ವಿವಿಧ ಸಂಘ ಸಂಸ್ಥೆಗಳು ಬೆಂಬಲ ನೀಡಿದ್ದು, ಮಾಜಿ ಶಾಸಕ ವಸಂತ ಬಂಗೇರ, ಬೆಳ್ತಂಗಡಿ ತಾ. ವಕೀಲರ ಸಂಘದ ಕಾರ್ಯದರ್ಶಿ ಮನೋಹರ್ ಕುಮಾರ್, ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತರ ಸಂಘದ ತಾಲೂಕು ಅಧ್ಯಕ್ಷ ವಿಠಲ ಶೆಟ್ಟಿ ಲಾಲ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ರಘುಪತಿ ಕೆ. ರಾವ್, ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ನೌಕರರ ಸಂಘದ ತಾ. ಅಧ್ಯಕ್ಷ ನಾಗೇಶ್ ಎಂ, ಪ್ರೌಢ ಶಾಲಾ ಸಹಶಿಕ್ಷಕರ ಸಂಘದ ಕಾರ್ಯದರ್ಶಿ ರಿಯಾಜ್ ಕೊಕ್ರಾಡಿ, ಸಿಐಟಿಯು ತಾ. ಅಧ್ಯಕ್ಷ ನ್ಯಾಯವಾದಿ ಶಿವಕುಮಾರ್, ಸರಕಾರಿನೌಕರರ ರಾಜ್ಯ ಪರಿಷತ್ ಸದಸ್ಯ . ಧರಣೇಂದ್ರ ಕೆ. ಜೈನ್, ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಂಘದ ಕಾರ್ಯದರ್ಶಿ ಕೆ. ರಾಮಕೃಷ್ಣ ಭಟ್ ಚೊಕ್ಕಾಡಿ, ಪ್ರಾಥಮಿಕ ಶಾಲಾ ಸಹಶಿಕ್ಷಕರ ಸಂಘದ ಜೊತೆ ಕಾರ್ಯದರ್ಶಿ ಶಿವಪುತ್ರ ಸೊಣಗಾರ, ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಮೇಶ ಮಯ್ಯ, ಚಿತ್ರಕಲಾ ಶಿಕ್ಷಕರ ಸಂಘದ ವತಿಯಿಂದ ಸದಾನಂದ ಬಿರಾದಾರ್, ಉಜಿರೆ ಜೇಸಿಐ ಮಾಜಿ ಅಧ್ಯಕ್ಷ ದೇವದಾಸ್ ನಾಯ್ಕ್ ಹೋರಾಟಕ್ಕೆ ಬೆಂಬಲ ನೀಡಿ ಮಾತನಾಡಿದರು. ಎನ್.ಪಿ.ಎಸ್. ನೌಕರರ ಸಂಘದ ತಾಲೂಕು ಅಧ್ಯಕ್ಷ ಸುರೇಶ್ ಮಾಚಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕಾರ್ಯಕ್ರಮದ ಮೊದಲು ನಗರದಲ್ಲಿ ನಡೆದ ಶಾಂತಿಯುತ ಮೆರವಣಿಗೆಗೆ ತಾ. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಭಾಕರ ನಾರಾವಿ ಚಾಲನೆ ನೀಡಿದರು. ಸೀತಾರಾಮ ನೆತ್ತರ ವಂದಿಸಿದರು. ಸದಾಶಿವ, ರಾಜೇಶ್ ನೆಲ್ಯಾಡಿ, ಸುರೇಂದ್ರ ಕೋಟ ನಿರೂಪಿಸಿದರು.
Ӏncredibⅼe points. Solid arguments. Keep up
the amaᴢing spirit.
There’sdefinately a ⅼott to know anout thks topic.
I really like all the points you have made.