ಎಲ್.ಐ.ಸಿ ವತಿಯಿಂದ ಗ್ರಾಮಾಭಿವೃದ್ಧಿ ಯೋಜನೆಯ 60 ಲಕ್ಷ ಸದಸ್ಯರಿಗೆ ವಿಮೆ

ಧರ್ಮಸ್ಥಳ: ಭಾರತೀಯ ಜೀವ ವಿಮಾ ನಿಗಮವು ಶ್ರೀ.ಧ.ಮಂ.ಗ್ರಾಮಾಭಿವೃದ್ಧಿ ಯೋಜನೆ ಸ್ವಸಹಾಯ ಗುಂಪಿನ ಸುಮಾರು ೬೦ಲಕ್ಷ ಸದಸ್ಯರಿಗೆ ಜೀವ ವಿಮಾ ಭದ್ರತೆ ನೀಡುವ ಸಲುವಾಗಿ ಒಪ್ಪಂದ ಮಾಡಲಾಯಿತು. ಅ.1 ರಂದು ಧರ್ಮಸ್ಥಳದಲ್ಲಿ ನಿಗಮದ ಕ್ಷೇತ್ರೀಯ ವಲಯಾಧಿಕಾರಿ ಟಿ.ಸಿ.ಸುಶೀಲ್ ಕುಮಾರ್ ರವರು ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರಿಗೆ ಮಾಸ್ಟರ್ ಪಾಲಿಸಿ ಜೀವ ಭಿಮಾ ಭದ್ರತೆಯನ್ನು ಹಸ್ತಾಂತರಿಸಿ, ಪಾಲಿಸಿಯ ಮಹತ್ವವನ್ನು ವಿವರಿಸಿದರು. ಹೆಗ್ಗಡೆಯವರು ಮಾತನಾಡಿ ವಿಮಾ ಯೋಜನೆ ಸಂಘದ ಸದಸ್ಯರ ಆರ್ಥಿಕ ಸೇರ್ಪಡೆಯ ಭಾಗವಾಗಲಿದೆ ಹಾಗೂ ವಿಮಾ ಕ್ಷೇತ್ರದಲ್ಲಿ ಎಲ್.ಐ.ಸಿ ಪಾತ್ರ ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಶ್ರೀ.ಧ.ಮಂ.ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್.ಹೆಚ್ ಮಂಜುನಾಥ್, ಪ್ರಾದೇಶಿಕ ನಿರ್ದೇಶಕರಾದ ಎಂ.ಕೆ ಅಬ್ರಹಾಂ, ಡಿ.ಜಯರಾಮ, ಜೀವವಿಮಾ ನಿಗಮದ ವಲಯಾಧಿಕಾರಿ ಜಿ. ಸತ್ಯನಾರಾಯಣ ಶಾಸ್ತ್ರಿ, ಉಡುಪಿ ಹಿರಿಯ ವಿಭಾಗಾಧಿಕಾರಿ ಪಿ. ವಿಶ್ವೇಶ್ವರ ರಾವ್, ವಿಭಾಗಾಧಿಕಾರಿ ವೈ.ಎಸ್ ಅಶೋಕ್, ಮಾರುಕಟ್ಟೆ ಪ್ರಭಂದಕ ವೆಂಕಟರಮಣ ಶಿರೂರು, ಗುರುರಾಜ್ ರಾವ್, ಬೆಳ್ತಂಗಡಿ ಶಾಖಾಧಿಕಾರಿ ಯೋಗೇಂದ್ರ ಹಾಗೂ ಜೀವವಿಮಾ ನಿಗಮದ ಅಬಿವೃದ್ಧಿ ಅಧಿಕಾರಿಗಳಾದ ಎ.ಜಯದೇವ್, ಎಂ.ವಿ ಶೆಟ್ಟಿ, ಉದಯಶಂಕರ್ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.