ನಾಳೆಯಿಂದ ಶಿರಾಡಿ ಘಾಟಿ ವಾಹನ ಸಂಚಾರ ಆರಂಭ

ಶಿರಾಡಿಘಾಟಿ ರಸ್ತೆ ಮೂಲಕ ಬಸ್ ಸಹಿತ ಎಲ್ಲಾ ಪ್ರಯಾಣಿಕ ವಾಹನಗಳ ಸಂಚಾರಕ್ಕೆ ಅ.3 ರಿಂದ ಅನುಮತಿ ನೀಡಲಾಗುವುದು ಹಾಗೂ ತಜ್ಞರ ವರದಿ ಆಧರಿಸಿ ವಾರದ ಬಳಿಕ ಗೂಡ್ಸ್ ವಾಹನಗಳ ಸಂಚಾರ ಕುರಿತಂತೆ ಅಂತಿಮ ದಿನಾಂಕ ಪ್ರಕಟಿಸಲಾಗುವುದು ಎಂದು ದ.ಕ ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್ ತಿಳಿಸಿದ್ದಾರೆ.
ಅ.1 ರಂದು ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಜ್ಞರ ವರದಿ ಆಧರಿಸಿ ಸರಕಾರಿ ಹಾಗೂ ಖಾಸಗಿ ಬಸ್‌ಗಳಿಗೆ ಅನುಮತಿ ನೀಡಲಾಗಿದೆ. ಹಾಸನ ಜಿಲ್ಲಾಧಿಕಾರಿ ಜತೆಗೂ ಈ ಬಗ್ಗೆ ಚಚಿಸಲಾಗಿದೆ. ಶಿರಾಡಿಯಲ್ಲಿ ಕುಸಿತಗೊಂಡ 12 ಕಡೆಯ ಪೈಕಿ 8 ಕಡೆ ಅಪಾಯವಿಲ್ಲ. ಅಪಾಯ ಸಾಧ್ಯತೆಯ 4 ಕಡೆಗಳಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲು ಸೂಚಿಸಲಾಗಿದೆ. ಓವರ್ ಟೇಕ್, ವೇಗದ ಚಾಲನೆ ಮಾಡದಂತೆ ಎಲ್ಲಾ ವಾಹನದವರು ಎಚ್ಚರಿಕೆ ವಹಿಸಬೇಕು ಎಂದರು.
ಶಿರಾಡಿ ರಸ್ತೆ ಕೆಳಭಾಗದ ಪಾರ್ಶ್ವದಲ್ಲಿ ಮಣ್ಣು ಕೊರೆದು ಸಮಸ್ಯೆ ಆಗಿರುವ ಹಿನ್ನಲೆಯಲ್ಲಿ, ಅಲ್ಲಿ ಯಾವ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಬಹುದು ಎಂಬ ಬಗ್ಗೆ ತಜ್ಞರ ಅಭಿಪ್ರಾಯಗಳನ್ನು ಪಡೆಯಲಾಗುವುದು. ಶಿರಾಡಿ ಘಾಟಿಯಲ್ಲಿ ಪೂರ್ಣ ಪ್ರಮಾಣದ ವಾಹನ ಸಂಚಾರ ಆರಂಭವಾದ ಬಳಿಕ ಚಾರ್ಮಾಡಿ ಘಾಟಿ ಕೆಲವು ದಿನ ಬಂದ್ ಮಾಡಿ ಸಂಪೂರ್ಣ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.