ಆಕಾಶವಾಣಿ ಸಂಗೀತ ಸಮ್ಮೇಳನದಲ್ಲಿ ಧರ್ಮಸ್ಥಳ ಬಿ ಪ್ರಕಾಶ ದೇವಾಡಿಗ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಪ್ರತಿಷ್ಠಿತ ಆಕಾಶವಾಣಿ ಸಂಗೀತ ಸಮ್ಮೇಳನ-2018 ರಾಷ್ಟ್ರೀಯ ಕಾರ್ಯಕ್ರಮದಲ್ಲಿ ರಾಜ್ಯದ ಖ್ಯಾತ ಸ್ಯಾಕ್ಸೋಫೋನ್ ವಾದಕ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಬಿ ಪ್ರಕಾಶ್ ದೇವಾಡಿಗ ಅವರು ಅವಕಾಶ ಪಡೆದಿದ್ದು ಕಲಾಕ್ಷೇತ್ರಕ್ಕೇ ಹೆಮ್ಮೆ ತಂದಿದ್ದಾರೆ.
ಮುಂದಿನ ಅ. 6 ರಂದು ದೇಶದಾದ್ಯಂತ ಆಕಾಶವಾಣಿ ಸಂಗೀತ ಸಮ್ಮೇಳನ ಜರುಗಲಿರುವ ಪ್ರಯುಕ್ತ ಆಂಧ್ರ ಪ್ರದೇಶದ ವಿಶಾಖ ಪಟ್ಟಣದಲ್ಲಿ ಆಹ್ವಾನಿತ ಶೋತೃಗಳ ಸಮ್ಮುಖದಲ್ಲಿ ಪ್ರಕಾಶ್ ದೇವಾಡಿಗ 1 ಗಂಟೆಗಳ ಕಾಲ ತನ್ನ ಲೈವ್ ಕಾರ್ಯಕ್ರಮ ನೀಡಲಿದ್ದಾರೆ.
ಆಕಾಶವಾಣಿ ಮತ್ತು ದೂರದರ್ಶನ ಎ ಗ್ರೇಡ್ ಕಲಾವಿದರಾಗಿರುವ ಪ್ರಕಾಶ್ ದೇವಾಡಿಗರು, ಪ್ರಸ್ತುತ ಈ ಪ್ರತಿಷ್ಠಿತ ರಾಷ್ಟ್ರೀಯ ಆಕಾಶವಾಣಿ ಸಂಗೀತ ಸಮ್ಮೇಳನದಲ್ಲಿ ಕಾರ್ಯಕ್ರಮ ನೀಡುತ್ತಿರುವ ರಾಜ್ಯದ 3ನೇಯ ಸ್ಯಾಕ್ಸೋಫೋನ್ ಕಲಾವಿದರಾಗಿದ್ದಾರೆ.
ದಿ. ಧರ್ಮಸ್ಥಳ ಬಾಬು ದೇವಾಡಿಗ ಮತ್ತು ಸೀತಾ ದಂಪತಿ ಪುತ್ರರಾಗಿರುವ ಪ್ರಕಾಶ್ ದೇವಾಡಿಗ ಅವರು ದಿ. ಪಿ.ಎ ನಾಗೇಶ್ ಉಪ್ಪಿನಂಗಡಿ, ಹಾಗೂ ದಿ. ತಂಜವೂರು ಆರ್ ರಾಮದಾಸ್ ಇವರ ಶಿಷ್ಯರಾಗಿದ್ದಾರೆ. ತನ್ನ ತಂದೆಯಿಂದಲೇ ಅವರು ಈ ವಾದನ ಕಲೆಯನ್ನು ಕರಗತ ಮಾಡಿಕೊಂಡು ಉತ್ಕೃಷ್ಟ ಮಟ್ಟದ ಸಾಧನೆಗಳನ್ನು ಮೆರೆಯುತ್ತಾ ಅತೀ ಸಣ್ಣ ಪ್ರಾಯದಲ್ಲೇ ಪ್ರಬುದ್ಧತೆ ಸಾಧಿಸಿ ಇಷ್ಟೊಂದು ಎತ್ತರಕ್ಕೆ ಬೆಳೆದುನಿಂತಿದ್ದಾರೆ.
ಈಗಾಗಲೇ ಅವರು ಹೈದರಾಬಾದ್‌ನ ಡೆಕ್ಕನ್ ಫೆಸ್ಟಿವಲ್‌ನಲ್ಲಿ, 71 ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಧಾನ ವೇದಿಕೆಯಲ್ಲಿ, ಆಳ್ವಾಸ್ ನುಡಿಸಿರಿ ಪ್ರಧಾನ ವೇದಿಕೆಯಲ್ಲಿ, ಅಮೇರಿಕಾದ ಸ್ಟ್ರೌಡ್ಸ್‌ಬರ್ಗ್ ನಲ್ಲಿ ಕೂಡ ತನ್ನ ಕಾರ್ಯಕ್ರಮ ಸಾದರಪಡಿಸಿ ವಿಖ್ಯಾತಿ ಪಡೆದಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.