ತಾಯಿಯಿಂದಲೇ ನಜಜಾತ ಶಿಶುವಿನ ಕೊಲೆ: ಆರೋಪಿ ಬಂಧನ

ಆರೋಪಿ ಶಿವಪ್ಪ

 

ಸ್ಥಳ ಮಹಜರು ನಡೆಸುತ್ತಿರುವ ತಹಶಿಲ್ದಾರ ಮದನ್ ಮೋಹನ್. ಪಟ್ರಮೆ ಗ್ರಾ.ಪಂ ಸದಸ್ಯ ಶ್ಯಾಮ್ ರಾಜ್ ಮತ್ತಿತರರು

 

ಮೇಲಕ್ಕೆತ್ತಲಾದ ನವಜಾತ ಶಿಶುವಿನ ಮೃತದೇಹ

 

ನವಜಾತ ಶಿಶುವನ್ನು ಹೂತಿಟ್ಟ ಸ್ಥಳ

ಪಟ್ರಮೆ: ಪಟ್ರಮೆ ಗ್ರಾಮದ ಪಚ್ಚೆ ಎಂಬಲ್ಲಿ ಗೃಹಿಣಿಯೊಬ್ಬರು ತನ್ನ ಪ್ರಿಯಕರನ ಜೊತೆ ಅಕ್ರಮ ಸಂಬಂಧದಿಂದ ಹುಟ್ಟಿದ ನವಜಾತ ಗಂಡು ಮಗುವನ್ನು ಮಣ್ಣಿನಡಿ ಹೂತುಹಾಕಿದ್ದಾರೆ ಎಂದು ಆಪಾದಿಸಿ ಆಕೆಯ ಮಾವ ಸಂಜೀವ ಮುಗೇರ ಅವರು ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದಾರೆ.
ಸೆ. 23 ರಂದು ಬೆಳಿಗ್ಗೆ 4 ಗಂಟೆಗೆ ನನ್ನ ತಂಗಿ ಪುಷ್ಪಾ ಅವರಿಗೆ ಎರಡನೇ ಬಾರಿಗೆ ಅಕ್ರಮ ಸಂಬಂಧದಿಂದ ನನ್ನ ಮನೆಯ ಕೊಟ್ಟಿಗೆಯಲ್ಲಿ ಹೆರಿಗೆಯಾಗಿದ್ದು, ಬಳಿಕ ಆಕೆಯು ತನ್ನ ಮೊದಲನೇ ಮಗು ಅಮಿತಾಕ್ಷಿ, ನವಜಾತ ಗಂಡು ಶಿಶು ಮತ್ತು ತನ್ನ ಪ್ರಿಯಕರ ಶಿವಪ್ಪ ಎಂಬವರೊಂದಿಗೆ ತನಗೆ ಪಂಚಾಯತ್ ವತಿಯಿಂದ ಮಂಜೂರಾಗಿದ್ದ ಹೊಸ ಮನೆಗೆ ಹೋಗಿದ್ದರು.
ಮರು ದಿನ ಅಂದರೆ ಸೆ. 24 ರಂದು ಬೆಳಿಗ್ಗೆ ಪುಷ್ಪಾ ಅವರ ಮಗಳ ಬಳಿ ನವಜಾತ ಶಿಶುವಿನ ಬಗ್ಗೆ ವಿಚಾರಿಸಿದಾಗ, ತನ್ನ ತಾಯಿ ಮತ್ತು ಶಿವಪ್ಪ ಅವರು ಸೇರಿಕೊಂಡು ಮಗುವನ್ನು ಮಣ್ಣಿನೊಳಗಡೆ ಹಾಕಿರುತ್ತಾರೆ ಎಂಬುದಾಗಿ ಹೇಳಿದ್ದು, ಹೀಗೆ ತಂಗಿ ಪುಷ್ಪಾ ಮತ್ತು ಆಕೆಯ ಪ್ರಿಯಕರ ಶಿವಪ್ಪ ಸೇರಿಕೊಂಡು ಅಕ್ರಮ ಸಂಬಂಧದಿಂದ ಜನಿಸಿದ ನವಜಾತ ಗಂಡು ಶಿಶುವನ್ನು ಕೊಲೆ ಮಾಡಿ ಕೃತ್ಯವನ್ನು ಮರೆಮಾಚುವ ಉದ್ದೇಶದಿಂದ ಮೃತ ದೇಹವನ್ನು ಹೂತುಹಾಕಿದ್ದಾಗಿದೆ ಎಂದು ಸಂಜೀವ ಮುಗೇರ ಠಾಣೆಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.

ಈ ಸಂಬಂಧ ಠಾಣೆಯಲ್ಲಿ ಪುಷ್ಪಾ ಮತ್ತು ಶಿವಪ್ಪ ಅವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಶಿವಪ್ಪ ರನ್ನು ಬಂಧಿಸಿದ್ದಾರೆ.

ನವಜಾತ ಶಿಶುವಿನ ಮೃತದೇಹವನ್ನು ಮೇಲಕ್ಕೆತ್ತಲಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.