ಚಾರ್ಮಾಡಿ ಕಣಿವೆ ರಸ್ತೆಯಲ್ಲಿ ಈಗ ಅಪಘಾತಗಳದ್ದೇ ಮೃದಂಗ

ಚಾರ್ಮಾಡಿ: ಚಾರ್ಮಾಡಿ ಕಣಿವೆ ರಸ್ತೆಯುದ್ದಕ್ಕೂ ರಸ್ತೆ ಸಂಪೂರ್ಣ ಎಕ್ಕುಟ್ಟಿಹೋಗಿದ್ದು ಲಘು ವಾಹನಗಳ ಸಂಚಾರಕ್ಕೆ ಅಸಾಧ್ಯವೆಂಬಂತಹಾ ಸ್ಥಿತಿಗೆ ಬಂದು ತಲುಪಿದೆ.
ಪರಿಣಾಮ ನಿತ್ಯವೂ ವಾಹನಗಳ ಅಪಘಾತ ಅಧಿಕವಾಗಿದೆ. ಮಳೆ ಬಂದರಂತೂ ಕೇಳುವುದೇ ಬೇಡ. ಹೊಸ ಚಾಲಕರುಗಳು ಬಂದರಂತೂ ಅವರಿಗೆ ರಸ್ತೆಯ ಹಿಮ್ಮುರಿ ತಿರುವುಗಳ ಬಗ್ಗೆ ಅನುಭವ ಇಲ್ಲದವರು ಬಂದರೆ ಅಪಘಾತಗಳು ಕಟ್ಟಿಟ್ಟ ಬುತ್ತಿ. ಹೀಗಿರುವಂತೆ ಹೊಸ ರಸ್ತೆಯಲ್ಲದಿದ್ದರೂ ಇರುವ ರಸ್ತೆಯ ಗುಂಡಿ ಮುಚ್ಚುವ ಕಾರ್ಯವಾದರೂ ಆಗಬೇಕಾಗಿದೆ.
ಸೆ.29 ರಂದು ಕುರಿ ಗೊಬ್ಬರ ಸಾಗಾಟದ ಲಾರಿಯೊಂದು ಮಗುಚಿಬಿದ್ದು 3ಗಂಟೆಗಳ ಕಾಲ ರಸ್ತೆ ಸಂಚಾರಕ್ಕೆ ಅಡಚಣೆಯಾಯಿತು.
ಆದರೆ ವಿಚಾರ ಅರಿತ ಸ್ಥಳೀಯ ಆಪಾದ್ಬಾಂಧವ ಚಾರ್ಮಾಡಿ ಹಸನಬ್ಬ ಅವರು ತಮ್ಮ ತಂಡದೊಂದಿಗೆ ಧಾವಿಸಿ ಕೇವಲ 3 ಗಂಟೆಯಲ್ಲಿ ಸಂಚಾರ ಸುಗಮಗೊಳಿಸುವ ಕಾರ್ಯ ಮಾಡಿದರು. ಅಪಘಾತದ ಸಂದರ್ಭ ರಸ್ತೆಯಲ್ಲಿ ಕುರಿ ಗೊಬ್ಬರ ಚೀಲಗಳು ಚೆಲ್ಲಿಕೊಂಡಿತ್ತು. ಅದನ್ನು ಬದಿಗೆ ಸರಿಸಿ ಬಳಿಕ ಸರಕಾರದ ಕಡೆಯಿಂದ ನೀಡಲಾದ ಕ್ರೇನನ್ನು ಕೊಟ್ಟಿಗೆಹಾರದಿಂದ ತರಿಸಿ ಕನಿಷ್ಟ ವೇಳೆಯಲ್ಲೇ ರಸ್ತೆ ಸಂಚಾರ ಸುಗಮಗೊಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.