ಬೆಳ್ತಂಗಡಿಯಲ್ಲಿ ನಮ್ಮೂರ ಹಬ್ಬ ಕೃಷ್ಣೋತ್ಸವ

ಬೆಳ್ತಂಗಡಿ: ಧರ್ಮದ ತಳಹದಿಯಲ್ಲಿ ಉತ್ತಮ ಜೀವನವನ್ನು ಹೇಗೆ ಕಟ್ಟಬಹುದು ಎಂಬುದಕ್ಕೆ ಶ್ರೀ ಕೃಷ್ಣ ನಮಗೆಲ್ಲರಿಗೂ ಪ್ರೇರಣೆಯಾಗಿದ್ದಾರೆ ಎಂದು ಎಬಿವಿಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನಯ ಬಿದರೆ ಹೇಳಿದರು.
ಅವರು ಸೆ.30 ರಂದು ಶ್ರೀ ಕೃಷ್ಣೋತ್ಸವ ಸೇವಾ ಸಮಿತಿ ಬೆಳ್ತಂಗಡಿ ಇದರ ಆಶ್ರಯದಲ್ಲಿ ಬೆಳ್ತಂಗಡಿಯಲ್ಲಿ ನಡೆದ `ನಮ್ಮೂರ ಹಬ್ಬ ಕೃಷ್ಣೋತ್ಸವ’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.
ಜೀವನದಲ್ಲಿ ಸಂಕಷ್ಟ ಎದುರಾದಾಗ ನಮಗೆ ಶ್ರೀ ಕೃಷ್ಣ ಗುರುವಾಗಿ, ಸ್ನೇಹಿತನಾಗಿ ಕಾಣುತ್ತಾರೆ. ಇಂದಿನ ಕಾಲ ಘಟ್ಟದಲ್ಲಿ ನಾವು ಜಾತಿ, ಧರ್ಮವನ್ನು ಬದಿಗಿಟ್ಟು ಶ್ರೀ ಕೃಷ್ಣನಾಗಿ ಕೆಲಸ ಮಾಡಬೇಕಾಗಿದೆ. ನಮ್ಮ ದೇಶದ ರೈತರು ಮತ್ತು ಸೈನಿಕರನ್ನು ಎಂದಿಗೂ ಮೆರೆಯಬಾರದು, ಗೋವುಗಳನ್ನು ಸಂರಕ್ಷಿಸುವುದರೊಂದಿಗೆ ಸಮಾಜ ಕಟ್ಟುವ ಕಾರ್ಯಕ್ಕೆ ಕೃಷ್ಣೋತ್ಸವ ಪ್ರೇರಣೆಯಾಗಲಿ ಎಂದು ಹಾರೈಸಿದರು.
ಸಮಿತಿ ಗೌರವಾಧ್ಯಕ್ಷ ಹಾಗೂ ಶಾಸಕ ಹರೀಶ್ ಪೂಂಜ ಅವರು ಮಾತನಾಡಿ, ಹಿಂದೂ ಸಮಾಜ ಜಾಗೃತವಾಗಬೇಕು ಎಂಬ ನಿಟ್ಟಿನಲ್ಲಿ ಸಮಾಜದ ಎಲ್ಲರನ್ನೂ ಒಂದುಗೂಡಿಸುವ ಮೂಲಕ ಗೋ ರಕ್ಷಣೆ ಮತ್ತು ದುಶ್ಚಟಮುಕ್ತ ಸಮಾಜ ನಿರ್ಮಾಣ ಕೃಷ್ಣೋತ್ಸವದ ಮುಖ್ಯ ಉದ್ದೇಶವಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಿ.ಹಿಂ.ಪ ತಾಲೂಕು ಅಧ್ಯಕ್ಷ ಸುಬ್ರಹ್ಮಣ್ಯ ಕುಮಾರ್ ಅಗರ್ತ ವಹಿಸಿದ್ದರು. ಶ್ಯಾಂ ಜ್ಯುವೆಲ್‌ನ ಎಂ.ಡಿ ಕೃಷ್ಣನಾರಾಯಣ ಮುಳಿಯ, ವಿನಾಯಕ ರೈಸ್ ಮಿಲ್‌ನ ಎ. ಶ್ರೀಕಾಂತ್ ಕಾಮತ್, ಮಹಿಳಾ ವೃಂದದ ಅಧ್ಯಕ್ಷೆ ಆಶಾ ಸತೀಶ್ ಆಚಾರ್ಯ ಕಾರ್ಯಕ್ರಮಕ್ಕೆ ಶುಭ ಕೋರಿದರು.
ಉದ್ಘಾಟನೆ: ಬೆಳ್ತಂಗಡಿ ಬಸ್‌ನಿಲ್ದಾಣದ ಬಳಿ ನಡೆದ ಸಮಾರಂಭವನ್ನು ಶಾಸಕ ಹರೀಶ್ ಪೂಂಜ ಉದ್ಘಾಟಿಸಿ, ಧರ್ಮರಕ್ಷಣೆ ಕಾರ್ಯದ ಜೊತೆ ಹಿಂದೂ ಸಮಾಜಕ್ಕೆ ಶಕ್ತಿ ನೀಡುವ ಉದ್ದೇಶದೊಂದಿಗೆ ಆರಂಭಗೊಂಡ ಕೃಷ್ಣೋತ್ಸವವು ನಮ್ಮ ಜಿಲ್ಲೆಯ ಪ್ರಮುಖ ಉತ್ಸವವಾಗಿ ಆಕರ್ಷಣೆಯನ್ನು ಪಡೆದಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ಉಜಿರೆಯ ರಾಜೇಶ್ ಪೈ ಅವರು ಮೂರು ವರ್ಷಗಳ ಹಿಂದೆ ಭಕ್ತಿ, ಶ್ರದ್ಧೆ, ವಿಶ್ವಾಸದಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವ್ಯಕ್ತಿ ಇಂದು ಈ ಕ್ಷೇತ್ರದ ಶಾಸಕರಾಗಿದ್ದಾರೆ ಎಂದರೆ ಕೃಷ್ಣೋತ್ಸವಕ್ಕೆ ಎಷ್ಟು ಶಕ್ತಿ ಇದೆ ಎಂಬುದನ್ನು ಅರಿಯಬಹುದು. ಮುಂದೆ ಹರೀಶ್ ಪೂಂಜ ಸಚಿವರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂಬುದು ನಮ್ಮೆಲ್ಲರ ಕನಸಾಗಿದೆ ಎಂದರು. ಬಹುಜನ ಸಮಾಜ ಪಾರ್ಟಿಯ ತಾಲೂಕು ಅಧ್ಯಕ್ಷ ರಮೇಶ್ ರೆಂಕೆದಗುತ್ತು ಮಾತನಾಡಿ ಸುಂದರ ಸಮಾಜ ನಿರ್ಮಾಣದ ಕಾರ್ಯ ಕೃಷ್ಣೋತ್ಸವ ಸಮಿತಿಯಿಂದ ಆಗಲಿ ಎಂದು ಹಾರೈಸಿದರು. ಮಾಜಿ ಸೈನಿಕ ಸುನೀಲ್ ಶೆಣೈ ಕಾತ್ಯಾಯಿನಿ ಮಾತನಾಡಿ ಧರ್ಮಾಚರಣೆಯಲ್ಲಿ ರಾಜಕೀಯ ಬೇಡ ನಾವೆಲ್ಲ ಭಾರತೀಯರು ಎಂಬ ಭಾವನೆಯಿಂದ ಭಾಗವಹಿಸೋಣ ಎಂದರು.
ಗಜಾನನ ಗ್ಲಾಸ್ & ಪ್ಲೈವುಡ್ಸ್‌ನ ಸುಧೀರ್ ಭಟ್, ನ್ಯಾಯವಾದಿ ನೋಟರಿ ಪಬ್ಲೀಕ್ ಮುರಳಿ, ಕಾಮಿಡಿ ಕಿಲಾಡಿಯ ಹಿತೇಶ್ ಕುಮಾರ್ ಕಾಪಿನಡ್ಕ, ಲಕ್ಷ್ಮೀ ಗ್ರೂಫ್ ಉಜಿರೆಯ ಮೋಹನ್ ಕುಮಾರ್, ನ.ಪಂ ಮಾಜಿ ಸದಸ್ಯ ಸಂತೋಷ್ ಕುಮಾರ್ ಜೈನ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವೇದಿಕೆಯಲ್ಲಿ ಸಮಿತಿಯ ಅಧ್ಯಕ್ಷ ಶರತ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಉಮೇಶ್ ಕುಲಾಲ್ ಉಪಸ್ಥಿತರಿದ್ದರು. ಸಮಿತಿಯ ಪ್ರಧಾನ ಸಂಚಾಲಕ ಪ್ರಕಾಶ್ ಆಚಾರ್ಯ ಸ್ವಾಗತಿಸಿದರು. ಉಪನ್ಯಾಸಕ ಸ್ಮಿತೇಶ್ ಬಾರ್ಯ ಕಾರ್ಯಕ್ರಮ ನಿರೂಪಿಸಿ, ಸಮಿತಿ ಉಪಾಧ್ಯಕ್ಷ ಜಯಾನಂದ ಗೌಡ ಧನ್ಯವಾದವಿತ್ತರು.

ಆದ್ದೂರಿಯ ಮೆರವಣಿಗೆ: ಕೃಷ್ಣೋತ್ಸವದಲ್ಲಿ ಮುದ್ದು ಕೃಷ್ಣ ವೇಷಧಾರಿ ಪುಟಾಣಿಗಳು ಸಣ್ಣ ಮಡಕೆಯಿಂದ ಬೆಣ್ಣೆ ತಿನ್ನುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಬೆಳ್ತಂಗಡಿ ಬಸ್ ನಿಲ್ದಾಣದ ಬಳಿಯಿಂದ ಶ್ರೀ ಧ.ಮಂ ಕಲಾಭವನದ ತನಕ ಆದ್ದೂರಿಯ ಮೆರವಣಿಗೆ ನಡೆಯಿತು. ವಿವಿಧ ವೇಷ-ಭೂಷಣ, ನಾಸಿಕ್‌ಬ್ಯಾಂಡ್, ಕಲ್ಲಡ್ಕದ ಶಿಲ್ಪಕಲಾ ಗೊಂಬೆ ಬಳಗ, ಕೇರಳದ ಚೆಂಡೆ, ಕೊಂಬು, ವ್ಯಾದ ಮೆರವಣಿಗೆಗೆ ವಿಶೇಷ ಮೆರಗನ್ನು ನೀಡಿತು. ೯ ಕಡೆಗಳಲ್ಲಿ ಗೋವಿಂಧ ಸ್ಪರ್ಧೆಗಳು ನಡೆದು ವಿಶೇಷ ಆಕರ್ಷಣೆಯನ್ನು ಗಳಿಸಿತು. ಅಂತಿಮ ಗೋವಿಂದ ಸ್ಪರ್ಧೆ ಶ್ರೀ ಮಂಜುನಾಥ ಕಲಾಭವನದ ಬಳಿ ನಡೆಯಿತು. ಮಧ್ಯಾಹ್ನ ನಂತರ ಮುದ್ದುಕೃಷ್ಣ ಸ್ಪರ್ಧೆ ಜರುಗಿತು. ಎಲ್ಲಾ ಕಾರ್ಯಕ್ರಮಗಳಲ್ಲಿ ಬೃಹತ್ ಸಂಖ್ಯೆಯಲ್ಲಿ ಯುವಕರು ಸೇರಿದಂತೆ ನಾಗರಿಕರು ಭಾಗವಹಿಸಿದ್ದರು.
 
ಸಮಾರಂಭದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ಮಾಜಿ ಸೈನಿಕ ಕೆ. ಉದನೇಶ್ವರ ಭಟ್ ಮಡಂತ್ಯಾರು, ಪತ್ರಕರ್ತ ಭುವನೇಶ್ ಗೇರುಕಟ್ಟೆ, ಕಲಾ ಕ್ಷೇತ್ರ ಗಂಗಾಧರ ಆಚಾರ್ಯ ಗುರುವಾಯನಕೆರೆ, ಸೇವಾ ಕ್ಷೇತ್ರ ಹಿಂದೂ ಯುವಶಕ್ತಿ ಆಲಡ್ಕ ಕ್ಷೇತ್ರ, ಶೈಕ್ಷಣಿಕ ಕ್ಷೇತ್ರ ಗಿರೀಶ್ ಕೆ.ಹೆಚ್ ಶ್ರೀ ಕುಂಭಶ್ರೀ ಎಜ್ಯುಕೇಶನಲ್ ಟ್ರಸ್ಟ್ ನಿಟ್ಟಡೆ, ಕೃಷಿ ಕ್ಷೇತ್ರ ಜಗದೀಶ್ ಪ್ರಸಾದ್ ಉಜಿರೆ, ಸಾಮಾಜಿಕ ಕ್ಷೇತ್ರ ಶ್ರೀಮತಿ ಪೂರ್ಣಿಮಾ, ನಾಟಿ ವೈದ್ಯ ನರಸಿಂಹ ಪ್ರಭು ಮದ್ದಡ್ಕ, ವೈದ್ಯಕೀಯ ಕ್ಷೇತ್ರ ಡಾ. ಟಿ.ಎನ್ ತುಳಪುಳೆ ಬೆಳ್ತಂಗಡಿ ಇವರನ್ನು ಶಾಲು ಹೊದಿಸಿ ಸ್ಮರಣಿಕೆ, ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು. ರಾತ್ರಿ ಸೋನಿ ಮತ್ತು ಝಿ ಟಿವಿಗಳಲ್ಲಿ ಪ್ರಶಸ್ತಿ ಪಡೆದ ಭಾರ್ಗವಿ ನೃತ್ಯ ತಂಡ ಉಡುಪಿ ಇವರಿಂದ `ನೃತ್ಯ ವೈವಿಧ್ಯ’ ಆಕರ್ಷಣೆ ಗಳಿಸಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.