ನಕ್ಸಲ್ ಬೆಂಬಲಿಗರ ಮೇಲೆ ಕಾನೂನು ಕ್ರಮಕ್ಕೆ ಹಿಂದೂ ಜನಜಾಗೃತಿ ಸಮಿತಿ ಆಗ್ರಹ

ಬೆಳ್ತಂಗಡಿ: ನಕ್ಸಲೀಯರಿಗೆ ಬೆಂಬಲ ನೀಡಿದ ಗಿರೀಶ್ ಕಾರ್ನಾಡ್ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ಸನಾತನ ಸಂಸ್ಥೆಯ ಮೇಲಿನ ಸುಳ್ಳು ಆರೋಪವನ್ನು ಖಂಡಿಸಿ ಸೆ.29 ರಂದು ತಾಲೂಕು ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ಹಿಂದೂ ಜನಜಾಗೃತಿ ಸಮಿತಿ ಹಾಗೂ ಎಲ್ಲಾ ಹಿಂದೂಪರ ಸಂಘಟನೆಗಳ ವತಿಯಿಂದ ರಾಷ್ಟ್ರೀಯ ಹಿಂದೂ ಆಂದೋಲನ ನಡೆಯಿತು.

‘ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ‘ನಾನೂ ಕೂಡ ನಗರ ನಕ್ಸಲ್’ ಎಂಬ ಫಲಕವನ್ನು ತನ್ನ ಕೊರಳಿನಲ್ಲಿ ಧರಿಸಿಕೊಂಡು ನಕ್ಸಲರಿಗೆ ಬೆಂಬಲ ನೀಡಿದ ಘಟನೆ ನಡೆಯಿತು. ಹಿಂದೂಗಳಿಗೆ ಒಂದು ನ್ಯಾಯ ಮತ್ತು ನಕ್ಸಲವಾದಿಗಳ ಸಮರ್ಥಕರಿಗೆ ಮತ್ತೊಂದು ನ್ಯಾಯ. ದೇಶದ್ರೋಹಿ ನಕ್ಸಲವಾದಿಗಳ ಸಮರ್ಥನೆ ಮಾಡಿರುವ ಕಾರಣ ಇವರೆಲ್ಲರ ಮೇಲೆಯೂ ಕಠಿಣ ಕ್ರಮ ಜರುಗಿಸುವ ಕಾನೂನು ರಚಿಸಬೇಕು ಮತ್ತು ನಗರವಾಸಿ ನಕ್ಸಲವಾದಿಗಳೊಂದಿಗೆ ದೇಶಾದ್ಯಂತ ನೆಲೆಯೂರಿರುವ ನಕ್ಸಲವಾದಿಗಳನ್ನು ನಾಶಪಡಿಸಲು ಸೈನ್ಯ ಮತ್ತು ಪೊಲೀಸರಿಗೆ ಸರ್ವಾಧಿಕಾರವನ್ನು ನೀಡಬೇಕು’.
ನಾಲಾಸೋಪಾರಾ ಸ್ಫೋಟಕ ಪ್ರಕರಣ ಮತ್ತು ದಾಭೋಲಕರ ಹತ್ಯೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಒಂದು ತಿಂಗಳಿನಲ್ಲಿ 9 ಹಿಂದುತ್ವನಿಷ್ಠರನ್ನು ಬಂಧಿಸಲಾಗಿದೆ. ಇವರಲ್ಲಿ ಯಾರೂ ಸನಾತನ ಸಂಸ್ಥೆಯ ಸಾಧಕರಲ್ಲ, ಆದಾಗ್ಯೂ ‘ಸನಾತನ ಸಂಸ್ಥೆಯನ್ನು ನಿಷೇಧಿಸಬೇಕು’, ಎನ್ನುವ ತಳಬುಡವಿಲ್ಲದ ಮತ್ತು ಉತ್ಪ್ರೇಕ್ಷೆಯ ಬೇಡಿಕೆಯನ್ನು ಕೆಲವು ರಾಜಕೀಯ ಪಕ್ಷಗಳು, ಸಂಘಟನೆಗಳು, ತಥಾಕಥಿತ ಪುರೋಗಾಹಿಗಳು, ಮುಸಲ್ಮಾನ ಮುಖಂಡರು ಮುಂತಾದವರು ಮಾಡುತ್ತಿದ್ದಾರೆ. ಕೆಲವು ಪ್ರಸಾರ ಮಾಧ್ಯಮಗಳು ಬಿಸಿಬಿಸಿ ಮತ್ತು ದಿಕ್ಕು ತಪ್ಪಿಸುವ ಸುದ್ದಿಗಳನ್ನು ಪ್ರಸಾರ ಮಾಡಿ ಹಿಂದೂ ಭಯೋತ್ಪಾದನೆ’ ಸಿದ್ಧಪಡಿಸಲು ಹಿಂದೂ ವಿರೋಧಿ ಧೋರಣೆ ಅನುಸರಿಸುತ್ತಿರುವ ರಾಷ್ಟ್ರದ್ರೋಹಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಬೇಕೆಂದು ಒತ್ತಾಯಿಸಿ ಈ ಆಂದೋಲನ ನಡೆಯಿತು. ಹಾಗೆಯೇ ಈ ವಿಷಯಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲು ರಾಜ್ಯದ ಗೃಹಮಂತ್ರಿ ಡಾ. ಜಿ. ಪರಮೇಶ್ವರ ಇವರಿಗೆ ತಹಶೀಲ್ದಾರರ ಮೂಲಕ ಮನವಿ ನೀಡಲಾಯಿತು.

ಪ್ರತಿಭಟನೆಯಲ್ಲಿ ವಿಶ್ವ ಹಿಂದೂ ಪರಿಷತ್ ನ  ತಿಮ್ಮಪ್ಪ ಗೌಡ ಬೆಳಾಲು,  ದೇವರಾಜ್ ಬೆಳ್ತಂಗಡಿ , ವಿಘ್ನೇಶ್ ಆಚಾರ್ಯ , ಚಿರಂಜೀವಿ ಯುವಕ ಮಂಡಲದ   ಜಯರಾಜ್ ಸಾಲಿಯಾನ್, ಹಿಂದೂ  ಜನಜಾಗೃತಿ ಸಮಿತಿಯ ಶ್ರೀನಿವಾಸ ರಾವ್ ಸೇರಿದಂತೆ ಹಲವಾರು ಧರ್ಮಪ್ರೇಮಿ ಬಾಂಧವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.