3.5 ಲಕ್ಷ ಎನ್ ಪಿ ಎಸ್ ನೌಕರರಿಂದ ಅ. 3 ರಂದು ಸಾಂದರ್ಭಿಕ ರಜೆ! ಹೋರಾಟ: ರಕ್ತ ಕೊಟ್ಟೇವು ಪಿಂಚಣಿ ಬಿಡೆವು ಹೋರಾಟಕ್ಕೆ ಇನ್ನೊಂದು ರೂಪ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ರಾಷ್ಟ್ರೀಯ ಹೊಸ ಪಿಂಚಣಿ ನೀತಿ ವಿರುದ್ಧ ಮತ್ತೊಮ್ಮೆ ಸೆಟೆದು ನಿಂತಿರುವ ರಾಜ್ಯದ 3.5 ಲಕ್ಷ ನೌಕರರು ಸಾಂದರ್ಭಿಕ ರಜೆ ಹಾಕುವ ಮೂಲಕ ರಾಜ್ಯ ಮತ್ತು ಕೇಂದ್ರ ಸರಕಾರಿ ಎನ್‌ಪಿಎಸ್ ನೌಕರರು ಅ. 3 ರಂದು “ರಕ್ತ ಕೊಟ್ಟೇವು- ಪಿಂಚಣಿ ಬಿಡೆವು” ಎಂಬ ವಿನೂತನ ಹೋರಾಟದದಲ್ಲಿ ಭಾಗಿಯಾಗಲಿದ್ದೇವೆ ಎಂದು ಎನ್‌ಪಿಎಸ್ ನೌಕರರ ಸಂಘದ ತಾಲೂಕು ಅಧ್ಯಕ್ಷ ಸುರೇಶ್ ಮಾಸ್ಟರ್ ಮಾಚಾರ್ ತಿಳಿಸಿದ್ದಾರೆ.
ಸೆ. 29 ರಂದು ಬೆಳ್ತಂಗಡಿ ನಗರದ ವಾರ್ತಾ ಭವನ ಕಟ್ಟಡದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಅವರು ಈ ತೀರ್ಮಾನ ಪ್ರಕಟಿಸಿದರು.
ನಿವೃತಿಯ ಬಳಿಕ ಇಳಿವಯಸ್ಸಿನಲ್ಲಿ ಗೌರವಯುತ ಬಾಳುವೆ ನಡೆಸಬಹುದೆಂಬ ಆಶಾಭಾವನೆಯಿಂದ ಸರಕಾರಿ ನೌಕರ ಪಡೆದಿರುವ ಎನ್‌ಪಿಎಸ್ ನೌಕರರರು ರಾಷ್ಟ್ರೀಯ ಪಿಂಚಣಿ ನೀತಿ ಹೊಸ ಕಾಯ್ದೆಯಂತೆ ನಿವೃತಿಯ ನಂತರ ಪಿಂಚಣಿ ವಂಚಿತರಾಗಿ ಬದುಕು ಸಾಗಿಸುವಂತಾಗಿರುವುದರ ವಿರುದ್ಧ ಈಗಾಗಲೇ ಸರಕಾರದ ಗಮನಸೆಳೆವ ಹೋರಾಟಗಳನ್ನು ನಡೆಸಿದ್ದರೂ, ಪ್ರಯೋಜನವಾಗದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ  ಈ ತೀರ್ಮಾನ ಕೈಗೊಂಡಿದ್ದೇವೆ. ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಅಂದು ಸಾಮಾಜಿಕ ಕಾರ್ಯಕರ್ತರು, ಆಯಾಯಾ ಕ್ಷೇತ್ರದ ಶಾಸಕರುಗಳನ್ನು ಆಹ್ವಾನಿಸಿ, ವಿವಿಧ ಸಂಘ ಸಂಸ್ಥೆಗಳ ಸಹಕಾರವನ್ನೂ ಪಡೆದು, ಈ ವಿಶೇಷ ಹೋರಾಟವನ್ನು ಸಂಘಟಿಸಲಾಗುತ್ತಿದೆ. ಅಂತೆಯೇ ಬೆಳ್ತಂಗಡಿ ನಗರದಲ್ಲಿ ಮೌನ ಮೆರವಣಿಗೆ, ಮಿನಿ ವಿಧಾನ ಸೌಧ ಕಟ್ಟಡದ ಮುಂದೆ ಹಾಕಲಾಗುವ ವೇದಿಕೆಯಲ್ಲಿ ಇಡೀ ದಿನ ವಿಭಿನ್ನ ರೀತಿಯಲ್ಲಿ ಹೋರಾಟ ನಡೆಯಲಿದೆ ಎಂದರು.
ಸರಕಾರಿ ರಕ್ತ ನಿಧಿಗೆ ರಕ್ತ ನೀಡುವ ಮೂಲಕ ಕ್ರಾಂತಿಕಾರಿ! ಹೋರಾಟ
ಹೋರಾಟದ ಭಾಗವಾಗಿ ಇಡೀ ರಾಜ್ಯಾಧ್ಯಂತ ಅಂದು ಎನ್‌ಪಿಎಸ್ ನೌಕರರು ಸರಕಾರಿ ನೌಕರರು ಇಡೀ ದಿನ ಧರಣಿ ಸತ್ಯಾಗ್ರಹ ಕೈಗೊಳ್ಳುವುದೂ ಮಾತ್ರವಲ್ಲದೆ, ಸರಕಾರಿ ರಕ್ತ ನಿಧಿಗೆ ಸಮರ್ಪಣೆಯಾಗುವಂತೆ ಏಕಕಾಲದಲ್ಲಿ ಬೃಹತ್ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದೇವೆ. ಆ ಮೂಲಕ ಸರಕಾರದ ಗಮನವನ್ನು ತಮ್ಮತ್ತ ಸೆಳೆಯುವ ದೇಶದಲ್ಲೇ ಮೊತ್ತಮೊದಲ ಪ್ರಯತ್ನವಾಗಿ ಹೊಸ ದಾಖಲೆ ಬರೆಯಲಿದ್ದೇವೆ. ಬಹುಷಃ ಇದು ಗಿನ್ನಿಸ್ ದಾಖಲೆಯಾಗಿಯೂ ಪರಿವರ್ತನೆಯಾಗುವ ಸಾಧ್ಯತೆ ಇದೆ ಎಂದೂ ಅವರು ತಿಳಿಸಿದರು.
ಗೋಷ್ಟಿಯಲ್ಲಿ ಸಂಘಟನೆಯ ತಾಲೂಕು ಸಂಚಾಲಕ ಪರಮೇಶ್ (ಕಂದಾಯ ಇಲಾಖೆ), ಮೋಹನ್ ಬಂಗೇರ (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ರವೀಂದ್ರ ಅಂಕಲಗಿ(ಅರಣ್ಯ ಇಲಾಖೆ), ಕಿರಣ್ ಕುಮಾರ್ (ನ್ಯಾಯಾಂಗ ಇಲಾಖೆ)ಇವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.