ವ್ಯಕ್ತಿಗಳಾಗಿ ಬಂದು ಶಕ್ತಿಯಾಗಿ ಹೋಗಲು ಭಜನಾ ತರಬೇತಿ ಕಮ್ಮಟ ಪೂರಕ: ಹೇಮಾವತಿ ವಿ ಹೆಗ್ಗಡೆ

ಧರ್ಮಸ್ಥಳ: ಅಂತರಂಗ ಶುದ್ಧಿಯಾಗದೆ ಪೂಜೆ ಪುರಸ್ಕಾರಗಳನ್ನು ಮಾಡಿದರೂ ಪ್ರಯೋಜನವಿಲ್ಲ. ವ್ಯಕ್ತಿಗಳಾಗಿ ಬಂದು ಶಕ್ತಿಯಾಗಿ ಹೋಗಲು ಭಜನಾ ತರಬೇತಿ ಕಮ್ಮಟ ಪೂರಕ ಎಂದು ಮಾತೃಶ್ರೀ ಹೇಮಾವತಿ ವೀ.ಹೆಗ್ಗಡೆ ನುಡಿದರು. ಅವರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ 20ನೇ ವರ್ಷದ ಭಜನಾ ತರಬೇತಿ ಕಮ್ಮಟವನ್ನುದ್ದೇಶಿಸಿ ಮಾತನಾಡಿದರು.

ಸಂಗೀತ, ಭಜನಾ ಸಾಹಿತ್ಯಕ್ಕೆ ತಮಗೆ ಅರಿವಿಲ್ಲದಂತೆ ತಲೆ, ಕೈಕಾಲುಗಳನ್ನು ಆಡಿಸುವ ಶಕ್ತಿ ಇದೆ. ಭಜನೆಯಿಂದ ಸಮಾಜದಲ್ಲಿ ಸಂಘಟನೆ ಸೃಷ್ಠಿಯಾಗುತ್ತದೆ. ಭಜನೆಗೆ ವಿಶ್ವಶಾಂತಿಯನ್ನು ನಿರ್ಮಿಸುವ ಶಕ್ತಿ ಇದೆ. ಭಜನೆಯು ದೇವರು ಮತ್ತು ಮನುಷ್ಯರ ನಡುವಿನ ಸೇತುವೆಯಾಗಿರುತ್ತದೆ.  ನಮ್ಮ ನಶ್ವರವಾದ ಬದುಕಿನ ಸಂದರ್ಭದಲ್ಲಿ ದೇವರು ಮೆಚ್ಚುವಂತಹ ಕೆಲಸ ಮಾಡಬೇಕಾಗಿದೆ.  ನಮ್ಮ ಸಹಜ ಗುಣಗಳನ್ನು ಗುರುತಿಸಿ ಬೆಳೆಸುವ ಗುಣವನ್ನು ಭಜನಾ ತರಬೇತಿ ಕಮ್ಮಟದಲ್ಲಿ ಪ್ರೇರೆಪಿಸುವ ಕೆಲಸ ಮಾಡುತ್ತೇವೆ. ಮನುಷ್ಯ ಒಳ್ಳೆಯ ಗುಣಗಳನ್ನು ಬೆಳೆಸಿಕೊಂಡಾಗ ಮಾತ್ರ ಮನುಷ್ಯನಿಗೆ ಬೆಲೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಶ್ರೀಧಾಮ ಮಾಣಿಲ ಮಹಾಲಕ್ಷ್ಮೀ ಸೇವಾ ಪ್ರತಿಷ್ಠಾನದ ಶ್ರೀ ಮೋಹನದಾಸ ಸ್ವಾಮೀಜಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.