ಪಟ್ರಮೆ: ಪಟ್ರಮೆ ಗ್ರಾಮದ ಪಟ್ಟೂರು ಎಂಬಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿ ಮನೆಯು ಸಂಪೂರ್ಣವಾಗಿ ಸುಟ್ಟು ಭಸ್ಮವಾದ ಘಟನೆ ಇಂದು(ಸೆ.28) ಮುಂಜಾನೆ ಸುಮಾರು ಗಂಟೆ 3 ರಿಂದ 4 ಗಂಟೆಯ ಹೊತ್ತಿನಲ್ಲಿ ನಡೆದಿದೆ.
ಈ ಮನೆಯಲ್ಲಿ ಪಟ್ರಮೆಯ ಮಹಮ್ಮದ್ ರವರು ತಮ್ಮ ಪತ್ನಿ ಸಾರಮ್ಮ , ಮಗಳು, ಅಳಿಯ, ಮೊಮ್ಮಕ್ಕಳೊಂದಿಗೆ ವಾಸವಾಗಿದ್ದರು. ಮುಂಜಾನೆ ಹೊತ್ತಿಗೆ ಮನೆಗೆ ಬೆಂಕಿ ಹತ್ತಿಕೊಂಡು ಉರಿದಿದ್ದು, ಮನೆ ಹಾಗೂ ಚಿನ್ನಾಭರಣವೂ ಸೇರಿ ಲಕ್ಷಾಂತರ ಮೌಲ್ಯದ ಸೊತ್ತು ನಷ್ಟವಾಗಿದೆ ಹಾಗೂ ದಾಖಲೆಗಳು ನಾಶವಾಗಿದೆ. ಮನೆಯ ಹಿಂಬದಿಯಲ್ಲಿ ಕಟ್ಟಿದ್ದ ನಾಲ್ಕು ಆಡುಗಳು ಸಜೀವ ದಹನವಾಗಿದ್ದು ,ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಈ ದುರ್ಘಟನೆ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.