HomePage_Banner_
HomePage_Banner_
HomePage_Banner_

ಮಡಂತ್ಯಾರು ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 217-18 ನೇ ಸಾಲಿನ ಮಹಾಸಭೆಯು ಇತ್ತೀಚೆಗೆ ವಿಶ್ವಕರ್ಮ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಕೆ.ಅರವಿಂದ ಜೈನ್  ಅಧ್ಯಕ್ಷತೆಯಲ್ಲಿ ಜರಗಿತು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ  ಎಚ್.ಧರ್ಣಪ್ಪ ಗೌಡ, ನಿರ್ದೇಶಕರಾದ  ಕೆ.ಬಿ.ಮಹಾವೀರ ಬಲ್ಲಾಳ್, ಅಬ್ಬುಲ್ ರಹಿಮಾನ್ ಪಡ್ಪು,  ಕಿಶೋರ್ ಕುಮಾರ್ ಶೆಟ್ಟಿ,   ಕುಮಾರ ನಾಯ್ಕ,   ಪದ್ಮನಾಭ ಸಾಲಿಯಾನ್ , ಜೋಯೆಲ್ ಗಾಡ್‌ಫ್ರೀ ಮೆಂಡೋನ್ಸ, ಶ್ರೀಮತಿ ಧನಲಕ್ಷ್ಮೀ, ಶ್ರೀಮತಿ ಪ್ರಫುಲ್ಲ, ಡಿಸಿಸಿ ಬ್ಯಾಂಕಿನ ವಲಯ ಪ್ರತಿನಿಧಿ  ಸಿರಾಜುದ್ದೀನ್ ಉಪಸ್ಥಿತರಿದ್ದರು.

2017-18ನೇ ಸಾಲಿನ ವರದಿಯನ್ನು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೋಕಿಂ ಡಿ’ಸೋಜ  ಮಂಡಿಸಿದರು. ಕಾರ್ಯಸೂಚಿಯಲ್ಲಿರುವ ವಿಷಯಗಳನ್ನು ಸಭೆಗೆ ಸಂಘದ ಸಿಬ್ಬಂದಿ ಮುತ್ತಪ್ಪ ಮೂಲ್ಯ, ಸವಿನ್ ಜೈನ್,  ಕಿಶನ್ ಕುಮಾರ್ ಓದಿ ಹೇಳಿದರು. ಸಂಘದ ನಿರ್ದೇಶಕ ಕಿಶೋರ್ ಕುಮಾರ್ ಶೆಟ್ಟಿ ಪ್ರಾರ್ಥಿಸಿ, ಶ್ರೀಮತಿ ಪೂರ್ಣಿಮರವರು ಕಾರ್ಯಕ್ರಮ ನಿರೂಪಿಸಿ, ಉಪಾದ್ಯಕ್ಷ ಎಚ್.ಧರ್ಣಪ್ಪ ಗೌಡ ಧನ್ಯವಾದವಿತ್ತರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.