ದ.ಕ ಜಿಲ್ಲೆಯಲ್ಲಿ ದಸರಾ ರಜೆ ಕಡಿತವಿಲ್ಲ

Advt_NewsUnder_1
Advt_NewsUnder_1
Advt_NewsUnder_1

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ದಸರಾ ರಜೆಯಲ್ಲಿ ಯಾವುದೇ ಕಡಿತ ಮಾಡುವುದಿಲ್ಲ, ಜಿಲ್ಲಾಧಿಕಾರಿ, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಡಿ.ಡಿ.ಪಿ.ಐ ಜೊತೆ ಚರ್ಚಿಸಿ ಈ ತೀರ್ಮಾಣಕ್ಕೆ ಬಂದಿದ್ದೇವೆ. ಮಳೆ ಹಿನ್ನೆಲೆಯಲ್ಲಿ ಈ ಬಾರಿಯ ದಸರಾ ರಜೆ ಕಡಿತಗೊಳಿಸಿದ್ದ ಆದೇಶ ಹಿಂಪಡೆದಿದ್ದು, ಈ ಬಾರಿ ಎಂದಿನಂತೆ ದಸರಾ ರಜೆ ಇರಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಸೆ.27 ರಂದು ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ದಸರಾ ರಜೆಯಲ್ಲಿ ಯಾವುದೇ ಕಡಿತ ಇಲ್ಲ. ಶಿಕ್ಷಣ ಇಲಾಖೆಯ ಎಂದಿನ ತೀರ್ಮಾನದಂತೆ ರಜೆ ನೀಡಲಾಗುವುದು. ಮಳೆ ಹಿನ್ನೆಲೆಯಲ್ಲಿ ಹೆಚ್ಚುವರಿ ರಜೆ ನೀಡಿದ್ದಕ್ಕಾಗಿ ದಸರಾ ರಜೆ ಕಡಿತ ಮಾಡಲಾಗಿತ್ತು. ಆದರೆ ಈ ಕುರಿತಾಗಿ ವಿರೋಧ ಬಂದ ಹಿನ್ನೆಲೆಯಲ್ಲಿ ಸರ್ಕಾರ ರಜೆ ಕಡಿತ ನಿರ್ಧಾರವನ್ನು ವಾಪಾಸ್ ಪಡೆದಿದೆ. ಅ.7 ರಿಂದ 21 ರ ವರೆಗೆ ದಸರಾ ರಜೆ ಇರಲಿದೆ ಎಂದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.