ಯುವಕ ಆತ್ಮಹತ್ಯೆ ಪ್ರಕರಣ: ಮೂವರ ವಿರುದ್ಧ ಖಾಸಗಿ ದೂರು

ಅಳದಂಗಡಿ : ಅಳದಂಗಡಿ ಪದ್ಮಾಂಬ ಕ್ಯಾಟರಿಂಗ್ ಉದ್ಯೋಗಿ ಪದ್ಮಪ್ರಸಾದ ಹೆಗ್ಡೆ ಆತ್ಮಹತ್ಯೆಗೆ ಸಂಬಂಧಿಸಿದಂತೆ ಅವರ ತಂದೆ ವೃಷಭರಾಜ ಹೆಗ್ಡೆ ನ್ಯಾಯಾಲಯಕ್ಕೆ ನೀಡಿದ ಖಾಸಗಿ ದೂರಿನಂತೆ ಕ್ಯಾಟರಿಂಗ್ ಮಾಲಕ ಹಾಗೂ ಇನ್ನಿಬ್ಬರ ಮೇಲೆ ಎಫ್‌ಐಆರ್ ದಾಖಲಿಸುವಂತೆ ವೇಣೂರು ಠಾಣೆಗೆ ಆದೇಶಿಸಿದೆ. ಆ ಹಿನ್ನಲೆಯಲ್ಲಿ ಸುನಿಲ್ ಕುಮಾರ್, ಅವರ ಪತ್ನಿ ಕಾವ್ಯಶ್ರೀ ಮತ್ತು ಸುಕೇಶ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ. ಬೆಳ್ತಂಗಡಿ ಠಾಣಾ ಸರ್ಕಲ್ ಇನ್ಸ್‌ಪೆಕ್ಟರ್ ನಾಗೇಶ್ ಕದ್ರಿ ಅವರು ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದಾರೆ. ಆತ್ಮಹತ್ಯೆಗೆ ಇವರ ದುಷ್ಪ್ರೇರಣೆಯೇ ಕಾರಣ ಎಂದು ಮೃತರ ತಂದೆ ದೂರಿನಲ್ಲಿ ಆಪಾದಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.