ಬೆಳ್ತಂಗಡಿ: ತಾಲೂಕು ಔಷಧ ವ್ಯಾಪಾರಸ್ಥರ ಸಂಘದ ಆಶ್ರಯದಲ್ಲಿ ವರ್ಲ್ಡ್ ಫಾರ್ಮಾಸಿಸ್ಟ್ ಡೇ ಕಾರ್ಯಕ್ರಮ ಸೆ.25 ರಂದು ಅಂಬೇಡ್ಕರ್ ಭವನದಲ್ಲಿ ಆಚರಿಸಲಾಯಿತು. ದ.ಕ ಜಿಲ್ಲಾ ಸಹಾಯಕ ಔಷದ ನಿಯಂತ್ರಕ ರಾಮಕಾಂತ ಕುಂಟೆಯವರು ದೀಪ ಬೆಳಗಿಸಿ ಉದ್ಘಾಟಿಸಿ, ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆಯ ವೈದ್ಯ ಡಾ| ಮುರಳಿ ಕೃಷ್ಣ ಮಾತನಾಡುತ್ತಾ, ಸಮಾಜ ಮುಖೇನ ಒಳ್ಳೆಯ ಕಾರ್ಯಕ್ರಮಗಳೊಂದಿಗೆ ಔಷಧ ತಜ್ಞರು ಔಷಧ ಅಂಗಡಿಯಲ್ಲಿ ಜನರ ಹತ್ತಿರವಾಗಿ, ಜನರ ಸಮಸ್ಯೆಯನ್ನು ಆಲಿಸಿ, ವೈದ್ಯರ ಸಲಹಾ ಭೇಟಿಯಂತೆ ಸರಿಯಾದ ಮಾಹಿತಿಯನ್ನು ನೀಡಿ ಒಳ್ಳೆಯ ಸೇವೆಯನ್ನು ನೀಡುವಂತೆ ಹಾರೈಸಿದರು. ವೇದಿಕೆಯಲ್ಲಿ ಗೌರವಾಧ್ಯಕ್ಷ ಉಜಿರೆ ಅಮರ್ಡ್ರಗ್ ಹೌಸ್ನ ಕೇಶವ ಭಟ್, ಸಂಘದ ಪ್ರಧಾನ ಕಾರ್ಯದರ್ಶಿ ಬೆಳ್ತಂಗಡಿ ಮಹಾಗಣಪತಿ ಎಂಟರ್ ಪ್ರೈಸಸ್ನ ಪ್ರಕಾಶ್ ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಸಂಘದ ಹಿರಿಯ ಫಾರ್ಮಾಸಿಸ್ಟ್, ಅಶ್ವಿನ್ ಮೆಡಿಕಲ್ಸ್ ಮಾಲಕ ಚಂದ್ರಶೇಖರ್ರವರ ಸೇವೆಯನ್ನು ಪರಿಗಣಿಸಿ ಸನ್ಮಾನಿಸಲಾಯಿತು. ತಾಲೂಕಿನ ಎಲ್ಲಾ ಫಾರ್ಮಾಸಿಸ್ಟ್ ಮತ್ತು ಔಷಧ ಅಂಗಡಿಯ ಮಾಲಕರು ಹಾಜರಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಸಭಾಧ್ಯಕ್ಷರಾದ ಸಂಘದ ಅಧ್ಯಕ್ಷ ಡಿ. ಜಗದೀಶ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಧನ್ಯವಾದವಿತ್ತರು.