ಕಳೆಂಜದಲ್ಲಿ ಚಿನ್ನದ ಮೊಟ್ಟೆ ಇಡುವ ಕೋಳಿ

ಕಳೆಂಜ ಗ್ರಾಮದ ಬನತ್ತಾರು ಏಕೋ ನಿವಾಸಿ ಜೋನ್ಸನ್ ಪಿ.ಯು. ಅವರ ಬಳಿ ಚಿನ್ನದ ಮೊಟ್ಟೆ ಇಡುವ 24 ಕೋಳಿಗಳು ಬೆಳೆಯುತ್ತಿದೆ.
ಏನಿದು ಆಶ್ಚರ್ಯ ಎಂದು ಹುಬ್ಬೇರಿಸಬೇಡಿ…
ಸುದ್ದಿ ಬಿಡುಗಡೆ ಪತ್ರಿಕೆ ವಿತರಕರೂ ಆಗಿರುವ ಕಳೆಂಜ ಡಿವೈನ್ ಸ್ಟೋರ್‍ಸ್ ಮಾಲಕ ಜೋನ್ಸನ್ ಅವರು ಸಾಕುವ ಈ ಕೋಳಿ ಸತತ 365 ದಿವಸಗಳಲ್ಲಿ ಕಂದು ಬಣ್ಣದ ಮೊಟ್ಟೆ ಇಡುತ್ತದೆ. ಮಾಮೂಲಿ ಕೋಳಿ ಮೊಟ್ಟೆಗಿಂತ ತುಸು ದೊಡ್ಡದಾದ ಒಳಗೆ ಸಣ್ಣ ಗಾತ್ರದ ಹಳದಿ ಬಣ್ಣದ ಅಂಶ ಹೊಂದಿರುವ ಈ ಮೊಟ್ಟೆ 5 ರಿಂದ 7 ರೂ.ಗೆ ಮಾರಾಟ ವಾಗುತ್ತದೆ. ಔಷಧಿಯ ಗುಣ ಹೊಂದಿರುವ ಈ ಮೊಟ್ಟೆಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ. ವರ್ಷ ಪೂರ್ತಿ ಯಾದೊಡನೆ ನಿಮಗೆ ಸಾಕು ಎಂದಾದರೆ ಮರುದಿನವೇ ನೀವು ಅದನ್ನು ನಾಟಿ ಕೋಳಿಯ ಬೆಲೆಗೆ ಮಾಂಸಕ್ಕಾಗಿ ಮಾರಾಟ ಕೂಡ ಮಾಡಬಹುದು. ಮೊಟ್ಟೆಯೂ ಲಾಭ, ಕೋಳಿಯೂ ಲಾಭ….
ಬಿವಿ 380 ಎಂಬ ತಳಿಯ ಕೋಳಿ ಇದಾಗಿದ್ದು ಹೇಂಟೆಗಳು ಮಾತ್ರ ಬರುತ್ತದೆ. ಮೇಲ್ನೋಟಕ್ಕೆ ಇದು ಸುಂದರವಾಗಿದ್ದು ನಾಟಿ ಕೋಳಿ ಯನ್ನೇ ಹೋಲುತ್ತದೆ. ಗೂಡಿನೊಳ ಗಡೆ ಇಟ್ಟುಕೊಂಡೇ ಸಾಕುವ ಈ ಕೋಳಿಗೆ ಮನೆ ಉಪಯೋಗದ ಆಹಾರ ತ್ಯಾಜ್ಯಗಳು, ತರಕಾರಿ, ಹಸಿರು ಹುಲ್ಲು, ಧಾನ್ಯ, ಹಲಸು, ಮಾವು, ಎಸ್‌ಕೆಎಮ್‌ನವರ ಉತ್ಪನ್ನವಾದ ಚಿಕನ್ ಫೀಡ್ ಇವುಗಳೆಲ್ಲವೂ ಆಹಾರ.
ಒಂದು ತಿಂಗಳ ಮರಿಯ ಸಮೇತವಾಗಿ 6 ರಿಂದ 10, 10 ರಿಂದ 24, ಅದಕ್ಕಿಂತ ಮೇಲೆ 2 ಸಾವಿರ ಕೋಳಿವರೆಗೂ ಸಾಕಾಣಿಕೆ ಮಾಡ ಬಹುದಾದ ಅವರವರ ಸಾಮರ್ಥ್ಯಕ್ಕೆ ತಕ್ಕುದಾದ ಗೂಡುಗಳನ್ನು ಕೇರಳದ ಕಂಪೆನಿಯೊಂದು ಒದಗಿಸಿಕೊಡುತ್ತದೆ. ಹೆಚ್ಚುವರಿ ಮೊಟ್ಟೆ ಉತ್ಪಾದನೆಯಾದರೆ ಅದಕ್ಕೆ ಮಾರುಕಟ್ಟೆ ಹುಡುಕಬೇಕಾದ ಅವಶ್ಯಕತೆ ಕೂಡ ಇಲ್ಲ. ಇದೇ ಕಂಪನೆಯವರು ಮೊಟ್ಟೆ ಖರೀದಿ ವ್ಯವಸ್ಥೆಯನ್ನೂ ಮಾಡುತ್ತಾರೆ. ಸಾಧಾರಣ ಮೊಟ್ಟೆಗೆ 7 ರೂ. ಬೆಲೆ ಇದ್ದು, ಪ್ರಥಮ ಹಂತದ ಮೊಟ್ಟೆ ಸ್ವಲ್ಪ ಕಿರಿದಾಗಿರುವು ದರಿಂದ ಜೋನ್ಸನ್ ಅವರು ಈಗ 5 ರೂ. ಗೆ ಮಾರಾಟ ಮಾಡುತ್ತಿದ್ದಾರೆ. ಸದ್ಯ ಊರಿನಲ್ಲೇ ಎಲ್ಲಾ ಮೊಟ್ಟೆಗಳು ಮಾರಲ್ಪಡುತ್ತಿದೆ.
ಯಾವುದೇ ಕೃತಕ ಔಷಧಿ ಅಥವಾ ರಾಸಾಯನಿಕ ಮಾತ್ರೆಗಳನ್ನು ನೀಡದೆ ಪ್ರಾಕೃತಿಕ ವಾಗಿಯೇ ತರಕಾರಿ- ಹುಲ್ಲು ತಿಂದು ಬೆಳೆಯುವ ಈ ಕೋಳಿ ಮೊಟ್ಟೆಗೆ ಸಹಜವಾಗಿಯೇ ಮಾರುಕಟ್ಟೆಯಲ್ಲಿ ಡಿಮ್ಯಾಂಡ್ ಇದೆ.
ಕೊಕ್ಕಿನಲ್ಲಿ ಒತ್ತಿ ನೀರು ಕುಡಿದು ಕೊಳ್ಳುವ ಕೋಳಿಗಳು:
ಕೋಳಿಗಳು ಸಣ್ಣ ಮರಿ ಇರುವಾಗ ಪಿಂಗಾಣಿಯಲ್ಲಿ ನೀರಿಟ್ಟು ಕುಡಿಸಲಾಗುತ್ತದೆ. ಬೆಳೆಯುತ್ತಿರು ವಂತೆಯೇ ಕೋಳಿ ಸಾಕಾಣಿಕ ಬಾಕ್ಸ್ ಮೇಲೆ ಅಳವಡಿಸಲಾಗಿರುವ ಸಣ್ಣ ನಿಪ್ಪಲ್ ಮಾದರಿಯನ್ನು ಕೋಳಿ ತನ್ನ ಕೊಕ್ಕಿನಲ್ಲಿ ಒತ್ತಿದಾಗ ಗುಟುರು ನೀರು ಅದರ ಬಾಯಿಗೆ ಬೀಳುವ ಸ್ವಯಂ ವ್ವವಸ್ಥೆ ರೂಪಿತವಾಗಿದೆ. ಕೋಳಿಗಳು ಬುದ್ದಿ ಕಲಿಸಿದ ಪ್ರಾಣಿಯ ರೀತಿ ಈ ನೀರು ಕುಡಿಯುವ ತಂತ್ರ ಉಪ ಯೋಗಿಸುತ್ತಿರುವುದು ಆಕರ್ಷಣೀಯ ವಾಗಿದೆ ಕೂಡ. ಸಣ್ಣ ಮಟ್ಟಕ್ಕೆ ಉದ್ಯಮ ಪ್ರಾರಂಭಿಸಿ ರುವ ಜೋನ್ಸನ್ ಅವರಿಗೆ ಈಗ ಪ್ರತಿದಿನ 20 ಮೊಟ್ಟೆ ಸಂಗ್ರಹ ವಾಗುತ್ತಿದೆ. ಆದ್ದರಿಂದ ಅವರಿಗೆ ಈ ಉದ್ಯಮ ಲಾಭದಾಯಕ ಎಂದು ಗೊತ್ತಾಗಿದೆ. ಅವರ ಪತ್ನಿ ಶಿಜಿ ಜೋನ್ಸನ್ ಕೋಳಿ ಸಾಕಾಣಿಕೆಯಲ್ಲಿ ತನ್ನನ್ನು ಪೂರ್ಣವಾಗಿ ತೊಡಗಿಸಿ ಕೊಂಡಿದ್ದಾರೆ. ಅವರ ಈ ಪ್ರೋತ್ಸಾಹ ದಿಂದ ಮುಂದಕ್ಕೆ ಈ ಉದ್ಯಮವನ್ನು ದೊಡ್ಡಮಟ್ಟಕ್ಕೆ ವಿಸ್ತರಿಸುವ ಉದ್ಧೇಶ ಹೊಂದಿದ್ದಾರೆ ಜೋನ್ಸನ್.

12 ಸಾವಿರ ರೂ. ಘಟಕ ವೆಚ್ಚದಲ್ಲಿ ಜೋನ್ಸನ್ ಅವರು 24 ಕೋಳಿಗಳ ಒಂದು ಯುನಿಟ್ ಪ್ರಾರಂಭಿಸಿದ್ದಾರೆ. 1 ತಿಂಗಳ ಮರಿಗಳ ಮೂಲಕ ಆರಂಭಿಸಿದ ಅವರ ಘಟಕದಲ್ಲಿ ನಾಲ್ಕೇ ತಿಂಗಳಲ್ಲಿ 20 ಕೋಳಿಗಳು ಮೊಟ್ಟೆ ಇಡಲು ಪ್ರಾರಂಭಿಸಿದೆ. ಗೂಡಿನ ಒಳಗೆಯೇ ಇಟ್ಟು ಸಾಕುವ ಈ ಕೋಳಿಗಳಿಗೆ ಯೋಜನಾ ಗಾತ್ರಕ್ಕೆ ಬೇಕಾದ ಗೂಡು, ಅವುಗಳಿಗೆ ಕುಡಿಯುವ ನೀರಿನ ಸಣ್ಣ ಕ್ಯಾನ್, ಪಿವಿಸಿ ಪೈಪ್ ಮೂಲಕ ಕುಡಿಯುವ ನೀರಿನ ವ್ಯವಸ್ಥೆ, ಗೂಡಿನ ಒಳಗಡೆಯೇ ಮೊಟ್ಟೆ ಇಟ್ಟರೆ ಅದು ಕಾಲ್ತುಳಿತಕ್ಕೆ ಒಳಗಾಗದಂತೆ ಒಂದು ಭಾಗಕ್ಕೆ ಹೋಗಿ ನಿಲ್ಲುವ ಒಳಾಂಗಣ ವಿನ್ಯಾಸವನ್ನು ಈ ಗೂಡು ಹೊಂದಿದೆ.

ಗ್ರಾ.ಯೋಜನೆಯಿಂದ ಈ ಉದ್ಯಮಕ್ಕೆ ಸಾಲ ಸೌಲಭ್ಯ
ಸಾವಯವವಾಗಿ ಉತ್ಪತ್ತಿಯಾಗುವ ಮೊಟ್ಟೆ ಕೋಳಿ ಸಾಕಾಣಿಕೆಗೆ ಈಗಾಗಲೇ ಗ್ರಾ. ಯೋಜನೆಯ ಮೂಲಕ ಪ್ರಾಯೋಗಿಕ ನೆಲೆಯಲ್ಲಿ ಸಾಲ ಸೌಲಭ್ಯ ಒದಗಿಸಲು ನಿರ್ಧರಿಸಲಾಗಿದೆ. ಕಿನ್ನಿಗೊಳಿ ಮತ್ತು ಮೂಲ್ಕಿಯಲ್ಲಿ ಈ ಪ್ರಯತ್ನಕ್ಕೆ ಕೈ ಹಾಕಲಾಗಿದೆ. ಕೇರಳದ ಎರ್ನಾಕುಳಂ ಜಿಲ್ಲೆಯ ಅಭಿಲಾಷ್ ಹ್ಯಾಚರೀಸ್ ಕಂಪನಿ ಪೂರೈಕೆ ಮಾಡುತ್ತಿರುವ ಈ ಕೋಳಿ ಘಟಕಕ್ಕೆ ಗೂಡು, 50 ಕೋಳಿಗಳು, 1.50 ಕ್ವಿಂಟಾಲ್ ಆಹಾರವನ್ನು ಅವರೇ ಒದಗಿಸುತ್ತಾರೆ. ಇದಕ್ಕೆ 35 ಸಾವಿರ ರೂ ನಿಗದಿಪಡಿಸಲಾಗಿದೆ. ಗ್ರಾ. ಯೋಜನೆಯ ಸ್ವಸಹಾಯ ಸಂಘ ಮತ್ತು ಪ್ರಗತಿ ಬಂಧು ಒಕ್ಕೂಟಗಳಿಗೆ ಕುಕ್ಕುಟ ಉದ್ಯಮಕ್ಕೆ ನೀಡುವ ಪ್ರೋತ್ಸಾಹ ವಿಭಾಗಕ್ಕೆ ಈ ಉದ್ಯಮವನ್ನು ಒಳಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.