HomePage_Banner_
HomePage_Banner_

ಬದ್ಯಾರ್ ಫಾ. ಎ.ಎನ್ ಪಿಂಟೋ ಆಸ್ಪತ್ರೆಗೆ ನೀರಿನ ಫಿಲ್ಟರ್ ಕೊಡುಗೆ

ಪಡಂಗಡಿ: ಜೈನ್ ಮಿಲನ್ ಬೆಳ್ತಂಗಡಿ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ಸುವರ್ಣ ಮಹೋತ್ಸವ ಸವಿನೆನಪಿನ ಕೊಡುಗೆಯಾಗಿ ಸ್ವಾತಂತ್ರ್ಯ ಹೋರಾಟಗಾರ ಭೋಜರಾಜ ಹೆಗ್ಡೆಯವರು ಅವರ ಮಕ್ಕಳ ಸಹಾಯದೊಂದಿಗೆ, ದಿವಂಗತರಾದ ಅವರ ಧರ್ಮಪತ್ನಿ ಪ್ರಭಾವತಿ ಹೆಗ್ಡೆ ಅವರ ಸ್ಮರಣಾರ್ಥ ಬದ್ಯಾರ್ ಫಾ. ಎಲ್.ಎನ್ ಪಿಂಟೋ ಆಸ್ಪತ್ರೆಗೆ ನೀರಿನ ಫಿಲ್ಟರ್ ಕೊಡುಗೆಯಾಗಿ ನೀಡಿದರು.
ಜೈನ್ ಮಿಲನ್ ಘಟಕದ ಅಧ್ಯಕ್ಷ ಪಾಶ್ವನಾಥ ಜೈನ್, ಜೈನ್ ಮಿಲನ್ ವಲಯ ನಿರ್ದೇಶಕ, ಸೋಮಶೇಖರ ಶೆಟ್ಟಿ, ಪ್ರಸ್ತುತ ಕಾರ್ಯದರ್ಶಿ ಮುನಿರಾಜ ಅಜ್ರಿ, ಉಜಿರೆ ಕಾಲೇಜಿನ ಪದ್ಮರಾಜ ಜೈನ್ ಇವರು ಉಪಸ್ಥಿತರಿದ್ದರು. ಈ ಕೊಡುಗೆಯನ್ನು ಆಸ್ಪತ್ರೆಯ ಆಡಳಿತಾಧಿಕಾರಿ ಸಿಸ್ಟರ್ ಪ್ರೇಮಲತಾ ಮತ್ತು ಬದ್ಯಾರ್ ಸಂತ ರಫಾಯಲ್ ಚರ್ಚ್‌ನ ಧರ್ಮಗುರುಗಳಾದ ರೆ. ಫಾ ಮೆಲ್ವಿನ್ ಡಿಸೋಜಾ ಇವರು ಸ್ವೀಕರಿಸಿ ತಮ್ಮ ಸಂತೋಷ ವ್ಯಕ್ತಪಡಿಸಿದರು.
ಹಣ್ಣುಹಂಪಲು, ಔಷಧೀಯ ಗಿಡಗಳ ವಿತರಣೆ: ಇದೇ ಸಮಾರಂಭದಲ್ಲಿ ಆಸ್ಪತ್ರೆಯ ಆವರಣದಲ್ಲಿ ನೆಡುವಂತೆ ಔಷಧೀಯ ಗಿಡಗಳನ್ನು ನೀಡಲಾಯಿತು. ಭೋಜರಾಜ ಹೆಗ್ಡೆಯವರು ಆಸ್ಪತ್ರೆಯ ಎಲ್ಲಾ ರೋಗಿಗಳಿಗೆ ಹಣ್ಣುಹಂಪಲು ವಿತರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.