ಗುಂಡ್ಯ ಘನ ವಾಹನ ಸಂಚಾರ ಆಗ್ರಹಿಸಿ ಪ್ರತಿಭಟನೆ, ಮನವಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಶಿರಾಡಿ ಘಾಟಿ ರಸ್ತೆಯಲ್ಲಿ ಲಘು ವಾಹನ ಹೊರತು ಪಡಿಸಿ ಘನ ವಾಹನ ಸಂಚಾರಕ್ಕೆ ಹೇರಲಾಗಿರುವ ನಿಷೇಧವನ್ನು ಹಿಂಪಡೆಯಬೇಕು. ಕನಿಷ್ಠ ಬಸ್ ಮತ್ತು 6 ಚಕ್ರದ ಲಾರಿಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿ ಗುಂಡ್ಯ ಪೇಟೆಯಲ್ಲಿ ಸೆ. 22 ರಂದು ಪ್ರತಿಭಟನೆ ನಡೆಯಿತು.
ಶಿರಾಡಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ಆಶ್ರಯದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಕಳೆದ 9ತಿಂಗಳಿನಿಂದ ನಾನಾ ಕಾರಣಗಳನ್ನು ಮುಂದಿಟ್ಟು ಶಿರಾಡಿ ಘಾಟಿ ರಸ್ತೆಯನ್ನು ಮುಚ್ಚಿದೆ. ಇದರಿಂದಾಗಿ ದ.ಕ. ಜಿಲ್ಲೆಯ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ವ್ಯವಸ್ಥೆಗೆ ಧಕ್ಕೆ ಉಂಟಾಗಿದೆ. ಆದ ಕಾರಣ ತಕ್ಷಣದಿಂದಲೇ ರಸ್ತೆಯಲ್ಲಿ ಕನಿಷ್ಠ ಬಸ್ ಮತ್ತು 6 ಚಕ್ರದ ಲಾರಿಗಳ ಓಡಾಟಕ್ಕೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು. ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಮಾತನಾಡಿ ವಿಪರೀತ ಮಳೆ, ಗುಡ್ಡ ಕುಸಿತ ನೆಪ ಒಡ್ಡಿ ಘನ ವಾಹನ ಸಂಚಾರಕ್ಕೆ ಅವಕಾಶ ನೀಡದೆ ನಿಷೇಧ ಹೇರಲಾಗಿದೆ. ಆದರೆ ಗುಡ್ಡ ಕುಸಿತ ಆಗಿರುವ ದ.ಕ. ಜಿಲ್ಲಾ ವ್ಯಾಪ್ತಿಯಲ್ಲಿ ಸರಿಪಡಿಸಲಾಗಿದೆ, ಸಕಲೇಶಪುರ ವ್ಯಾಪ್ತಿಯಲ್ಲಿ ಬಾಕಿ ಇದ್ದು, ಅದನ್ನು ಸರಿಪಡಿಸದೆ ಬಿಡಲಾಗಿದೆ. ಅದಾಗ್ಯೂ ಬಸ್ ಹೋಗಲು ಸಾಧ್ಯ ಇಲ್ಲ ಎನ್ನುವಂತಹ ಅಪಾಯ ಇರುವುದಿಲ್ಲ, ಹಾಗೂ ಬಸ್ ಸಂಚಾರ ಮಾಡಬಹುದು ಎನ್ನುವ ಬಗ್ಗೆ ಹೆದ್ದಾರಿ ಇಲಾಖೆಯವರು ತಿಳಿಸಿರುತ್ತಾರೆ. ಇಲ್ಲಿ ಉದ್ದೇಶಪೂರ್ವಕವಾಗಿ ಬಂದ್ ಮಾಡಿ ಇಡಲಾಗಿದೆ. ತಕ್ಷಣ ಜಿಲ್ಲಾಢಳಿತ ಈ ಬಗ್ಗೆ ಗಮನ ಹರಿಸಿ ಅಗತ್ಯ ಕ್ರಮಕೈಗೊಳ್ಳಬೇಕು ಎಂದರು.
ಪ್ರತಿಭಟನೆಯ ಕಾವು ಏರುತ್ತಿದ್ದಂತೆ ಪ್ರತಿಭಟನಾಕಾರರು ಹೆದ್ದಾರಿ ತಡೆಗೆ ಮುಂದಾದರು. ಆಗ ಪೊಲೀಸರು ಮಧ್ಯ ಪ್ರವೇಶಿಸಿ ರಸ್ತೆ ತಡೆ ಮಾಡದಂತೆ ಪ್ರತಿಭಟನಾಕಾರರನ್ನು ಮನವೊಳಿಸಿದರು. ಆಗ ಪ್ರತಿಭಟನಾಕಾರರು ಹೆದ್ದಾರಿ ಇಲಾಖೆಯವರು ಇಲ್ಲಿಗೆ ಬಂದು ರಸ್ತೆ ದುಸ್ಥಿತಿ ಬಗ್ಗೆ ತಿಳಿಸಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಉಪ್ಪಿನಂಗಡಿ ಎಸ್.ಐ. ನಂದಕುಮಾರ್ ಹೆದ್ದಾರಿ ಇಲಾಖೆಯವರನ್ನು ಸಂಪರ್ಕಿಸಿದ್ದು, ಸುಮಾರು ೧ ತಾಸು ಬಳಿಕ ಅವರು ಸ್ಥಳಕ್ಕೆ ಆಗಮಿಸಿ ಮಾಹಿತಿ ನೀಡಿದರು. ಹೆದ್ದಾರಿ ಇಲಾಖೆಯವರ ಹೇಳಿಕೆ ಮೇರೆಗೆ ಮುಂದೆ ಜಿಲ್ಲಾಧಿಕಾರಿ ಬಳಿ ಮತ್ತೆ ನಿಯೋಗ ತೆರಳಿ ಮತ್ತೆ ಸಂಚಾರ ರದ್ದುಗೊಳಿಸಿರುವ ಬಗ್ಗೆ ಸ್ಪಷ್ಟ ಮಾಹಿತಿ ಪಡೆದುಕೊಂಡು ಮುಂದೆ ಕಾರ್‍ಯರೂಪಿಸುವ ಬಗ್ಗೆ ನಿರ್ಧರಿಸಲಾಗಿ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ಬಸ್ ಸಂಚಾರಕ್ಕೆ ಅವಕಾಶ ನೀಡಬಹುದು-ಹೆದ್ದಾರಿ ಇಲಾಖೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ನಂಜಪ್ಪ ಪ್ರತಿಭಟನಾಕಾರರ ಬಳಿ ಆಗಮಿಸಿ “ಈ ರಸ್ತೆಯಲ್ಲಿ ಓಲ್ವ ಬಸ್ ಸಹಿತ 6 ಚಕ್ರ ತನಕದ ವಾಹನ ಸಂಚಾರಕ್ಕೆ ಅವಕಾಶ ನೀಡುವ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ, ಆದರೆ ತದ ಸುರಕ್ಷತೆಯ ದೃಷ್ಠಿಯಿಂದ ಬಂದ್ ಮಾಡಿದ್ದಾರೆ, ತಮ್ಮ ಬೇಡಿಕೆ ಬಗ್ಗೆ ಮತ್ತೆ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ” ಅವರು ತಿಳಿಸಿದರು.

ಇವರೊಂದಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ಸಿ.ವಿ. ರೆಡ್ಡಿ ಇದ್ದರು.ಶಿರಾಡಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸದಸ್ಯರುಗಳಾದ ದಾಮೋದರ್ ಗುಂಡ್ಯ, ಸುಭಾಶ್ ಗುಂಡ್ಯ, ಯತೀಶ್ ಗುಂಡ್ಯ, ಸೂರ್‍ಯನಾರಾಯಣ ಶಿಶಿಲ, ಸುಧೀರ್ ಕುಮಾರ್ ಅರಸಿನಮಕ್ಕಿ, ಲಾರಿ ಚಾಲಕ, ಮಾಲಕರಾದ ಶರೀಫ್ ಬಿ.ಸಿ.ರೋಡು, ಮಹಮ್ಮದ್ ಅಲ್ತಾಫ್, ಅಶ್ರಫ್, ಮಹಮ್ಮದ್ ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.