ಸೆ. 24-25: ವಿ.ಟಿ.ಯು ಸಂಶೋಧನಾ ಲೇಖನ ಹಾಗೂ ಪ್ರಭಂದ ಬರವಣಿಗೆ ಕಾರ್ಯಾಗಾರ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 

ಉಜಿರೆ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯದ ಸಹಭಾಗಿತ್ವದಲ್ಲಿ ಎರಡು ದಿನಗಳ VTU Thesis & Research Paper Writing using LaTex (ಲೇಟೆಕ್ಸ್ ತಂತ್ರಾಂಶ ಉಪಯೋಗಿಸಿ ವಿ.ಟಿ.ಯು ಸಂಶೋಧನಾ ಲೇಖನ ಹಾಗೂ ಪ್ರಭಂದ ಬರವಣಿಗೆ)  ಎಂಬ ಕಾರ್ಯಾಗಾರವನ್ನು ಸೆ.24 ರಿಂದ 25 ರವರೆಗೆ  ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ಕರ್ನಾಟಕ ಹಾಗೂ ಇತರ ರಾಜ್ಯಗಳಿಂದ ಪ್ರಾದ್ಯಾಪಕ ವೃಂದ ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಲಿರುವರು.
ಕಾರ್ಯಕ್ರಮದ ಉದ್ಘಾಟಕರಾಗಿ ವಿಟಿಯು ಇ-ಲರ್ನಿಂಗ್ ಸೆಂಟರ್ ಮೈಸೂರು ವಿಶೇಷ ಅಧಿಕಾರಿ ಡಾ| ಪಿ. ಸಂಧ್ಯಾ ಆಗಮಿಸಲಿದ್ದು, ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಾ| ಬಿ ಯಶೋವರ್ಮ ರವರು ಅಧ್ಯಕ್ಷತೆ ವಹಿಸಲಿದ್ದಾರೆ. ಕಾಲೇಜಿನ ಪ್ರಾಂಶುಪಾಲ ಡಾ| ಅಶೊಕ್ ಕುಮಾರ್ ಟಿ ಸ್ವಾಗತವನ್ನು ಕೋರಲಿರುವರು ಹಾಗೂ ಕಾರ್ಯಾಗಾರದ ಸಂಚಾಲಕ ಡಾ| ಧರ್ಮಣ್ಣ ಎಲ್ ರವರು ವಂದನಾರ್ಪನೆ ಮಾಡಿ, ಸಂಯೋಜಕಿ ಶ್ವೇತಾ ಎಸ್.ವಿ ಅತಿಥಿ ಪರಿಚಯ ಮಾಡಲಿರುವರು ಎಂದು ಎಸ್.ಡಿ.ಎಂ.ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.