ಧರ್ಮಸ್ಥಳ : ಪುರಾಣ ವಾಚನ ಪ್ರವಚನ ಮಂಗಲ

ಧರ್ಮಸ್ಥಳ: ಎರಡು ತಿಂಗಳ ಕಾಲ ಶ್ರೀ ಕ್ಷೇತ್ರದಲ್ಲಿ ಪುರಾಣ ವಾಚನ ಪ್ರವಚನದ ಮೂಲಕ ನಾಡಿನ ವಿದ್ವಾಂಸರ ವಿದ್ವತ್ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿ ಕೊಡಲಾಗಿದ್ದು, ಇದು ಭಕ್ತಾಧಿಗಳ ಪುರಾಣಗಳ ಜ್ಞಾನ ವೃದ್ಧಿಗೂ ಕಾರಣವಾಗಿದೆ. ಬೇರೆ ಬೇರೆ ವಿದ್ವಾಂಸರಿಂದ ಕಥೆಯ ಸ್ವಾದ, ಸ್ವಾರಸ್ಯ, ಪ್ರವಚನದ ವಿಧಾನ ಆಕರ್ಷಣೀಯವಾಗಿದೆ. ಇದನ್ನು ಸಂತೋಷದಿಂದ ಸ್ವಾಮಿಗೆ ಸಮರ್ಪಿಸಿದ್ದೇವೆ. ಎಲ್ಲವೂ ಶಿಸ್ತುಬದ್ಧವಾಗಿ, ವ್ಯವಸ್ಥಿತವಾಗಿ ನಡೆದಿದೆ. ಸೇವೆ ಮಾಡಿದವರಿಗೂ ಪುರಾಣವಾಚನ ಆಲಿಸಿದ ಭಕ್ತಾಧಿಗಳಿಗೂ ಮಂಜುನಾಥ ಸ್ವಾಮಿಯ ಅನುಗ್ರಹವಿರಲೆಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ನುಡಿದರು.
ಅವರು ಸೆ.17 ರಂದು ಕ್ಷೇತ್ರ ಧರ್ಮಸ್ಥಳದ ಪ್ರವಚನ ಮಂಟಪದಲ್ಲಿ ಜು.17 ರಿಂದ ಪ್ರಾರಂಭಗೊಂಡು ಎರಡು ತಿಂಗಳ ಕಾಲ ಪ್ರತಿನಿತ್ಯ ಸಂಜೆ 6.30 ರಿಂದ 8 ರವರೆಗೆ ನಡೆದ ಪುರಾಣ ವಾಚನ ಪ್ರವಚನ ಜ್ಞಾನ ಸೂತ್ರದ ಮಂಗಳ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು ಅವರು 63 ದಿನಗಳಲ್ಲಿ ಪುರಾಣವಾಚನ ಹಾಗೂ ಉಜಿರೆ ಅಶೋಕ ಭಟ್ ಪ್ರವಚನದಲ್ಲಿ ಭಾಗವಹಿಸಿದ್ದರು. ಹೇಮಾವತಿ ಹೆಗ್ಗಡೆ, ಮಾಣಿಲ ಮೋಹನದಾಸ ಸ್ವಾಮೀಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶ್ರೀನಿವಾಸ ರಾವ್ ಕಾರ್ಯಕ್ರಮ ನಿರೂಪಿಸಿ, ವೀರೂ ಶೆಟ್ಟಿ ಪ್ರವಚನ ನಡೆಸಿಕೊಟ್ಟ ವಿದ್ವಾಂಸರ ಯಾದಿ ಪ್ರಕಟಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.