ಖೋ-ಖೋ ಪಂದ್ಯಾಟ: ಬಂದಾರು ಶಾಲೆ ವಿಭಾಗ ಮಟ್ಟಕ್ಕೆ

ಬಂದಾರು: ಬಂಟ್ವಾಳ ತಾಲೂಕು ಬೋಳಂತಿಮೊಗರು ಶಾಲೆಯಲ್ಲಿ ಇತ್ತೀಚೆಗೆ ನಡೆದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಖೋ-ಖೋ ಪಂದ್ಯಾಟದಲ್ಲಿ ಬೆಳ್ತಂಗಡಿ ತಾಲೂಕನ್ನು ಪ್ರತಿನಿಧಿಸಿದ್ದ ಸ.ಹಿ.ಪ್ರಾ.ಶಾಲೆ ಬಂದಾರು ಇಲ್ಲಿಯ ಪ್ರಾಥಮಿಕ ಶಾಲಾ ಬಾಲಕಿಯರ ತಂಡವು ಸತತ 7 ನೇ ಬಾರಿಗೆ ಬಂಟ್ವಾಳ ತಾಲೂಕನ್ನು ಸೋಲಿಸುವುದರ ಮೂಲಕ ಮಂಡ್ಯದಲ್ಲಿ ನಡೆಯುವ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ. ಅಲ್ಲದೆ ತಂಡದಲ್ಲಿ ಮೋಹಿನಿ ಉತ್ತಮ ಓಟಗಾರ್ತಿ ಹಾಗೂ ಸಹನಾ ಉತ್ತಮ ಆಕ್ರಮಣಕಾರಿ ಆಟಗಾರ ಪ್ರಶಸ್ತಿ ಪಡೆದಿರುತ್ತಾರೆ. ಈ ತಂಡಕ್ಕೆ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರಶಾಂತ್ ತರಬೇತಿ ನೀಡಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.