ದೀಪಾವಳಿ ವಿಶೇಷಾಂಕ-2018: ಬರಹಗಳಿಗೆ ಆಹ್ವಾನ

ಬರಹಗಳಿಗೆ ಆಹ್ವಾನ: ಬೆಳಕಿನ ಹಬ್ಬ ದೀಪಾವಳಿ ಹತ್ತಿರದಲ್ಲಿದೆ. ಈ ಹಬ್ಬಕ್ಕೆ ಎಂದಿನಂತೆ ಸುದ್ದಿ ಕೂಡಾ ಅಕ್ಷರ ತೋರಣ ಕಟ್ಟುವ ಮೂಲಕ ಸಾಥ್ ನೀಡಲಿದೆ. ಅತ್ಯುತ್ತಮವಾದ ಉಡುಗೊರೆ ನೀಡಲು ಸುದ್ದಿ ಸಿದ್ಧವಾಗಿದೆ. ಹಾಗೆಂದೇ ದೀಪಾವಳಿ ಸಂಚಿಕೆಯ ತಯಾರಿ ಆರಂಭಗೊಂಡಿದೆ. ಓದುಗರಿಗೆ ಅತ್ಯುತ್ತಮವಾದ ಸಂಚಿಕೆಯೊಂದನ್ನು ನೀಡಬೇಕೆಂಬ ಹಂಬಲ ನಮ್ಮದು. ಸುಮಾರು 250 ಆಕರ್ಷಕ ಪುಟಗಳ, ವಿಚಾರ ವೈವಿಧ್ಯಗಳ ಸಂಗ್ರಹ ಯೋಗ್ಯ ಸಂಚಿಕೆ ಈ ದೀಪಾವಳಿ ಸಂಭ್ರಮದಲ್ಲಿ ನಿಮ್ಮೊಂದಿಗಿರುತ್ತದೆ. ಇದರಲ್ಲಿ ನಿಮ್ಮ ಪಾಲೂ ಇದ್ದರೆ ಸಂಭ್ರಮ ಇನ್ನೂ ಹೆಚ್ಚು. ಆ ನಿಟ್ಟಿನಲ್ಲಿ ನಿಮ್ಮ ಬರಹಗಳಿಗೆ, ಅಭಿಪ್ರಾಯಗಳಿಗೆ ಅವಕಾಶ ನೀಡುತ್ತಿದ್ದೇವೆ.

ಜಾಯಿಂಟ್ ಫ್ಯಾಮಿಲಿಯ ಸಂಭ್ರಮ :
ಆಧುನಿಕ ಕಾಲಘಟ್ಟದಲ್ಲಿ ತಂತ್ರಜ್ಞಾನ ಮುಂದುವರಿದಿದ್ದು ಪರಸ್ಪರ ಮಾನವೀಯ ಸಂಬಂಧಗಳು ಕ್ಷೀಣಿಸುತ್ತಿವೆ. ಹಿಂದೆ ಇದ್ದ ಅವಿಭಕ್ತ ಕುಟುಂಬ ಪದ್ಧತಿ ಇಂದು ಬಹುತೇಕ ನಿಂತು ಹೋಗಿದ್ದು ನಾವಿಬ್ಬರು-ನಮಗಿಬ್ಬರು ಎಂಬಂತಾಗಿದೆ. ಇನ್ನೂ ಒಂದು ಹೆಜ್ಜೆ ಮುಂದುವರಿದು ನಾವಿಬ್ಬರು-ನಮಗೊಬ್ಬ ಎಂಬ ಸ್ಥಿತಿ ಬಂದಿದೆ. ಈ ಹಿನ್ನಲೆಯಲ್ಲಿ ಕೂಡು ಕುಟುಂಬದಲ್ಲಿರುವ ಸಂಭ್ರಮವನ್ನು ನಿಮ್ಮದೇ ಶೈಲಿಯಲ್ಲಿ ಬರೆದು ಕಳುಹಿಸಬಹುದು.
ಬೇರೆ ಬೇರೆ ಕಾರಣಗಳಿಂದ ಹರಿದು ಹಂಚಿ ಹೋಗಿರುವ ನೀವು ಧಾರ್ಮಿಕ-ಸಾಮಾಜಿಕ ಕಾರ್ಯಕ್ರಮಗಳಿಗಾಗಿ ಒಟ್ಟು ಸೇರಿದಾಗ ಪಟ್ಟ ಸಂಭ್ರಮ, ಅಥವಾ ನಿಮ್ಮ ಕಲ್ಪನೆಯಲ್ಲಿರುವ ಜಾಯಿಂಟ್ ಫ್ಯಾಮಿಲಿ ಖುಷಿ, ಅದರ ಅವಶ್ಯಕತೆ, ಅದರಿಂದ ನಿಮಗಾಗಿರುವ ಪ್ರಯೋಜನ ಇವುಗಳ ಬಗ್ಗೆ ನೇರವಾಗಿ ಅಭಿಪ್ರಾಯ ಬರೆಯಿರಿ. ಪೀಠಿಕೆಗೆ ಅವಕಾಶವಿಲ್ಲ. ಬರಹ ಎ೪ ಅಳತೆಯ ಶೀಟ್‌ನಲ್ಲಿ 1 ಪುಟದ ಮಿತಿಯಲ್ಲಿರಲಿ. ಸ್ಪಷ್ಟವಾದ ಅಕ್ಷರ ಇರಲಿ. ನಿಮ್ಮ ಪೂರ್ಣವಿಳಾಸ, ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಮೊಬೈಲ್ ಸಂಖ್ಯೆ ಕಡ್ಡಾಯ. ಅಂಚೆ ಲಕೋಟೆಯ ಮೇಲೆ ಯಾವ ವಿಭಾಗಕ್ಕೆ ಎಂದು ಸ್ಪಷ್ಟವಾಗಿ ಬರೆಯಿರಿ.

ಕಾಲೇಜು ವಿದ್ಯಾರ್ಥಿಗಳಿಗಾಗಿ ಮಾತ್ರ : ಮೊಬೈಲ್ ಬಳಕೆಯ ಪರಿಣಾಮ
ಮೊಬೈಲ್ ಫೋನ್ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ಇಂದು ಒತ್ತಡಕ್ಕೊಳಗಾಗುತ್ತಿರುವ ವಿದ್ಯಾರ್ಥಿಗಳು, ಆಧುನಿಕ ತಂತ್ರಜ್ಞಾನದ ಹೊಡೆತಕ್ಕೆ ಸಿಲುಕಿ ನಲುಗಿ ಹೋಗಿದ್ದಾರೆ. ಕ್ಷುಲ್ಲಕ ವಿಚಾರಗಳಿಗೂ ಆತ್ಮಸ್ಥೈರ್ಯ ಕಳೆದುಕೊಂಡು ಜೀವನ ಕೊನೆಗಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ಅನಿಸಿಕೆ ಅಭಿಪ್ರಾಯ, ಸಲಹೆಗಳನ್ನು ಈ ಅಂಕಣದಲ್ಲಿ ಹಂಚಿಕೊಳ್ಳಬಹುದು.
ಎ4 ಶೀಟ್‌ನಲ್ಲಿ 1 ಪುಟದ ಮಿತಿ ಮಾತ್ರ. ಹೆಸರು, ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆ, ಯಾವ ಕಾಲೇಜು ವಿದ್ಯಾರ್ಥಿ ಮತ್ತು ಯಾವ ತರಗತಿ ಎಂಬುದನ್ನು ಕಡ್ಡಾಯವಾಗಿ ದಾಖಲಿಸಿ. ಬರಹದೊಂದಿಗೆ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಕಡ್ಡಾಯವಾಗಿ ಅಳವಡಿಸಿ. ಆಯ್ದ ಬರಹಗಳನ್ನು ವಿಶೇಷಾಂಕದಲ್ಲಿ ಪ್ರಕಟಿಸಲಾಗುವುದು.

 5 ರಿಂದ 10 ವರ್ಷದೊಳಗಿನ ಮಕ್ಕಳ ಭಾವಚಿತ್ರ ಸ್ಪರ್ಧೆ: ಈ ಬಾರಿ ದೀಪಾವಳಿ ವಿಶೇಷಾಂಕದ ಮುಖಪುಟದಲ್ಲಿ ರಾರಾಜಿಸುವ ಸುವರ್ಣ ಅವಕಾಶ ನಿಮ್ಮ ಪಾಲಿಗೆ. 5 ರಿಂದ 10 ವರ್ಷದೊಳಗಿನ ಮಕ್ಕಳ ಭಾವಚಿತ್ರ ಸ್ಪರ್ಧೆ ಏರ್ಪಡಿಸಿದ್ದೇವೆ. ಮಕ್ಕಳು ಹೇಗಿದ್ದರೂ ನೋಡಲು ಚೆನ್ನ. ಹಾಗಿರುವಾಗ ನಿಮ್ಮ ಮಕ್ಕಳ ನೈಜವಾದ ಭಾವಚಿತ್ರ ನಮಗೆ ಕಳುಹಿಸಿಕೊಡಿ
ಕಡ್ಡಾಯವಾಗಿ ಸ್ಟುಡಿಯೋ, ಅಥವಾ ಉತ್ತಮ ಗುಣಮಟ್ಟದ ಕ್ಯಾಮರಾದಲ್ಲಿ ಕ್ಲಿಕ್ಕಿಸಿದ ಫೋಟೋಗಳನ್ನು ಮಾತ್ರ ಕಳುಹಿಸಿಕೊಡಿ.
ಹೆಸರು, ವಿಳಾಸ, ಸಂಪರ್ಕ ಸಂಖ್ಯೆ, ಹುಟ್ಟಿದ ದಿನಾಂಕ ಮಾಹಿತಿ ಕಡ್ಡಾಯ.   ಒಂದೇ ಮಗುವಿನ 3 ವಿಭಿನ್ನ ರೀತಿಯ ಚಿತ್ರಗಳಿಗೆ ಅವಕಾಶವಿದೆ.
ಯಾವುದೇ ಕಾರಣಕ್ಕೂ ಭಾವಚಿತ್ರ ಹಿಂತಿರುಗಿಸಲಾಗುವುದಿಲ್ಲ. ಸೆ.30 ಕೊನೆಯ ದಿನಾಂಕ

ನುಡಿ ಚಿತ್ರಗಳು : ಸಣ್ಣ ಚಿತ್ರ, ಅದಕ್ಕೊಂದು ಸಣ್ಣ ವಿಶ್ಲೇಷಣೆಯೆಂಬಂತೆ ಕನಿಷ್ಠ ಪದಗಳಲ್ಲಿ ನುಡಿಚಿತ್ರ ಬರಹಗಳಿಗೆ ಅವಕಾಶವಿದೆ. ವಿದ್ಯಾರ್ಥಿಗಳು, ಸಾರ್ವಜನಿಕರೂ ಭಾಗವಹಿಸಬಹುದು.

ನಿದ್ದೆಯಲ್ಲಿ ಬಿದ್ದ ಕನಸು…..: ನಿಮಗೆ ಕನಸು ಬಿದ್ದಾಗ ಆಗಿರುವ ಸ್ವಾರಸ್ಯಕರ ಅನುಭವವನ್ನು ಬರಹದ ಮೂಲಕ ಹಂಚಿಕೊಳ್ಳಿ. ಬರಹ ಸ್ವಾರಸ್ಯಕರವಾಗಿರಲಿ. ಪೀಠಿಕೆ ಬಳಸದೆ ನೇರವಾಗಿ ಬರೆಯಿರಿ.
ಎ4 ಶೀಟ್‌ನಲ್ಲಿ 1 ಪುಟದ ಮಿತಿ ಮಾತ್ರ. ಹೆಸರು, ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆ, ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಕಡ್ಡಾಯವಾಗಿ ಅಳವಡಿಸಿ.

ಛಾಯಾಗ್ರಾಹಕರಿಗಾಗಿ ಚಿತ್ರ ಸ್ಪರ್ಧೆ:-ಛಾಯಾಗ್ರಾಹಕರು ಎಂದರೆ ನಮ್ಮ ಬದುಕಿನ ಅಪರೂಪದ ಕ್ಷಣಗಳನ್ನು ಅಚ್ಚಳಿಯದ ನೆನಪಾಗಿ ದಾಖಲಿಸುವವರು. ಒಂದು ವಸ್ತು, ವಿಷಯ, ಸಂದರ್ಭವನ್ನು ನಾವು ಒಂದು ದೃಷ್ಟಿಯಿಂದ ನೋಡಿದರೆ, ಛಾಯಾಗ್ರಾಹಕರು ಮೂರನೇ ಕಣ್ಣಿನಿಂದ ನೋಡುತ್ತಾರೆ. ಪ್ರಕೃತಿ ಸೃಷ್ಠಿಯ ಅದೆಷ್ಟೋ ವಿಸ್ಮಯಗಳು, ಅಪೂರ್ವ ಕ್ಷಣಗಳನ್ನು ಅವರು ಸೆರೆಹಿಡಿದಿರುತ್ತಾರೆ. ಅಂತಹದ್ದರಲ್ಲಿ ಛಾಯಾಗ್ರಾಹಕರೇ ತೆಗೆದ ಅತ್ಯಪರೂಪದ ಚಿತ್ರಗಳೇನಾದರೂ ಇದ್ದರೆ ನಿಮಗಾಗಿ ಸ್ಪರ್ಧೆಯೊಂದನ್ನು ಈ ಬಾರಿ ನಡೆಸುತ್ತಿದ್ದೇವೆ. ವೃತ್ತಿಪರ ಛಾಯಾಗ್ರಾಹಕರಲ್ಲದೆ ಹವ್ಯಾಸಿಗಳೂ ಇದರಲ್ಲಿ ಭಾಗಿಯಾಗಬಹುದು.
ಟ ನೈಜವಾದ ಚಿತ್ರ (ಎಡಿಟಿಂಗ್‌ಗೆ ಅವಕಾಶವಿಲ್ಲ) . ಸೆ.೩೦ ಕೊನೆಯ ದಿನಾಂಕ ,ಪ್ರಿಂಟೆಡ್ ಕ್ವಾಪಿ ಇರಲಿ , ನಿಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಕಡ್ಡಾಯವಾಗಿ ನೀಡಿ. ಯಾವುದೇ ಕಾರಣಕ್ಕೂ ಚಿತ್ರ ಹಿಂತಿರುಗಿಸಲಾಗುವುದಿಲ್ಲ.

ಸೌಂದರ್ಯ ಲಹರಿ ಭಾವಚಿತ್ರ ಸ್ಪರ್ಧೆ : (ಯುವತಿಯರಿಗೆ ಭಾವಚಿತ್ರ ಸ್ಪರ್ಧೆ) ಒಬ್ಬರು ಒಂದೇ ಭಾವಚಿತ್ರ ಕಳುಹಿಸಿಕೊಡುವುದು. ಆಯ್ಕೆಯಾದ ಭಾವಚಿತ್ರವನ್ನು ಸಂಚಿಕೆಯಲ್ಲಿ ಪ್ರಕಟಿಸಲಾಗುವುದು. ನಿಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಕಡ್ಡಾಯವಾಗಿ ನೀಡಿ.

ಮಿನಿ ಕಥೆ ಸ್ಪರ್ಧೆ: (ಮುಕ್ತ ವಿಭಾಗ) ಮಹಿಳೆಯರು, ಪುರುಷರು, ವಿದ್ಯಾರ್ಥಿಗಳೂ ಬರೆಯಬಹುದು. (ಕಥೆ ಒಂದು ಪುಟ ಮೀರದಿರಲಿ)

ದೀಪಾವಳಿಗೆ ಸಂಬಂಧಪಟ್ಟ ಹನಿಗವನ, ವ್ಯಂಗ್ಯಚಿತ್ರ, ನಗೆಹನಿಗಳು, ವಾಟ್ಸ್‌ಆಪ್ ಜೋಕ್ಸ್‌ಗಳನ್ನೂ ಕಳುಹಿಸಬಹುದು ಆಯ್ದವುಗಳನ್ನು ಪ್ರಕಟಿಸಲಾಗುವುದು. (ಕೃತಿಚೌರ್ಯಕ್ಕೆ ಅವಕಾಶವಿಲ್ಲ)

ಸೆಲ್ಫಿ ವಿದ್ ಫ್ಯಾಮಿಲಿ
ಹೇಳಿ ಕೇಳಿ ಇದು ಯುವ ಮನಸ್ಸುಗಳ ಅಭಿಪ್ರಾಯದಂತೆ ಸೆಲ್ಫಿ ಯುಗ ಎಂದರೆ ತಪ್ಪಲ್ಲ. ಮಿತ್ರರು ಹಳೆಯ ಸ್ನೇಹಿತರು, ವಿಐಪಿ ಅತಿಥಿಗಳು, ತಮ್ಮ ನೆಚ್ಚಿನ ನಾಯಕರುಗಳು, ಸಿನಿಮಾ – ಕ್ರೀಡಾ ತಾರೆಗಳು ಮಾತ್ರವಲ್ಲದೆ ಸರಳ ಸಾಮಾನ್ಯರಾದರೂ ಕೆಲವರು ಅವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳವುದನ್ನು ಮರೆಯುವುದಿಲ್ಲ. ಹಾಗಿರುವಾಗ ನಿಮ್ಮ ಕುಟುಂಬದ ಜೊತೆ ಮಾತ್ರ ನೀವು ತೆಗೆದುಕೊಂಡಿರುವ ಸೆಲ್ಫಿಯನ್ನು ನಮಗೆ ಕಳುಹಿಸಿಕೊಡಿ. ಸೆಲ್ಫಿ ವಿದ್ ಫ್ಯಾಮಿಲಿ ಎನ್ನುವ ಸ್ಪರ್ಧೆಯ ಮೂಲಕ ನಿಮ್ಮ ಕುಟುಂಬದಲ್ಲಿ ನಗು ಮೂಡಿಸುವ ಕಾರ್ಯಕ್ಕೆ ಸುದ್ದಿ ಮುಂದಾಗಿದೆ. ಇಲ್ಲಿ ಆಯ್ದ ಚಿತ್ರಗಳನ್ನು ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟಿಸಲಾಗುವುದು.
ಸೆಲ್ಫಿ ಕಳುಹಿಸಬೇಕಾದ ನಂಬ್ರ: 9620372412 ಸೆಲ್ಫಿ ಜೊತೆ ನಿಮ್ಮ ವಿಳಾಸ, ಮೊಬೈಲ್ ಸಂಖ್ಯೆ ಕಳುಹಿಸಿ. ಒಬ್ಬರು 3 ಕ್ಕಿಂತ ಹೆಚ್ಚು ಕಳುಹಿಸುವಾಗಿಲ್ಲ. ಗುಣಮಟ್ಟದ ಚಿತ್ರಕ್ಕೆ ಮೊದಲ ಆದ್ಯತೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.