ಅಕ್ರಮ ಕಪ್ಪುಕಲ್ಲು ಗಣಿಗಾರಿಕೆಗೆ ದಾಳಿ ಹಿಟಾಚಿ, ಲಾರಿ ಸಹಿತ ಸೊತ್ತುಗಳ ವಶ

Advt_NewsUnder_1
Advt_NewsUnder_1
Advt_NewsUnder_1

ಲಾಯಿಲ: ಲಾಯಿಲ ಗ್ರಾ.ಪಂ. ವ್ಯಾಪ್ತಿಯ ಪೆರಿಂದಿಲೆಯಲ್ಲಿ ಭಾರಿ ಪ್ರಮಾಣದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ, ಕಪ್ಪು ಕಲ್ಲು ಗಣಿಗಾರಿಕೆ ಪ್ರದೇಶಕ್ಕೆ ಬೆಳ್ತಂಗಡಿ ತಹಶೀಲ್ದಾರ್ ಮದನ್ ಮೋಹನ್ ಹಾಗೂ ಕಂದಾಯ ಅಧಿಕಾರಿಗಳು ಪೊಲೀಸರ ಸಹಕಾರದಲ್ಲಿ ದಾಳಿ ನಡೆಸಿ ವಾಹನ ಸಮೇತ ಸೊತ್ತುಗಳನ್ನು ವಶಪಡಿಸಿಕೊಂಡ ಘಟನೆ ಸೆ.18 ರಂದು ವರದಿಯಾಗಿದೆ.
ಮಹಮ್ಮದ್ ಅನ್ಸಾರಿ ಎಂಬರಿಗೆ ಸೇರಿದ ಪಟ್ಟಾ ಜಾಗದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಪರವಾನಿಗೆ ಪಡೆಯದೆ ಅಕ್ರಮವಾಗಿ ಈ ಗಣಿಗಾರಿಕೆಯನ್ನು ನಡೆಸಲಾಗುತ್ತಿತ್ತು. ಖಚಿತ ವರ್ತಮಾನದ ಆಧಾರದಲ್ಲಿ ಕಂದಾಯ ಇಲಾಖೆಯು ಈ ದಾಳಿಯನ್ನು ನಡೆಸಲಾಗಿದ್ದು, ದಾಳಿಯ ವೇಳೆ ಸ್ಥಳದಲ್ಲಿದ್ದವರು ಪರಾರಿಯಾಗಿದ್ದು, ಎರಡು ಲಾರಿ, ಎರಡು ಹಿಟಾಚಿ, ಒಂದು ಟ್ರ್ಯಾಕ್ಟರ್ ಸೇರಿದಂತೆ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳನ್ನು ಬೆಳ್ತಂಗಡಿ ಠಾಣೆಯ ಸುಪರ್ದಿಯಲ್ಲಿಡಲಾಗಿದೆ.
ಬೆಳ್ತಂಗಡಿ ತಹಶೀಲ್ದಾರ್ ಅವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಮುಂದಿನ ಕ್ರಮಕ್ಕಾಗಿ ನೀಡಿದ ಸೂಚನೆಯಂತೆ ಮಂಗಳೂರಿನಿಂದ ಸೆ.19 ರಂದು ಅಧಿಕಾರಿಗಳು ಬೆಳ್ತಂಡಿಗೆ ಆಗಮಿಸಿ ಅಕ್ರಮ ಗಣಿಗಾರಿಕೆ ಪ್ರದೇಶಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮಹಜರು ನಡೆಸಿ, ಕೇಸು ದಾಖಲಿಸಿಕೊಂಡಿರುವುದಾಗಿ ವರದಿಯಾಗಿದೆ. ಕಂದಾಯ ನಿರೀಕ್ಷಕ ರವಿಕುಮಾರ್, ಲಾಯಿಲ ಗ್ರಾಮಲೆಕ್ಕಾಧಿಕಾರಿ ಮೇಘನಾ, ನಡ ಗ್ರಾಮ ಲೆಕ್ಕಾಧಿಕಾರಿ ಅಂಕಿತ್, ಗ್ರಾಮ ಸಹಾಯಕ ಸತೀಶ್, ಎಎಸ್‌ಐ ಅಶೋಕ್, ಎಚ್‌ಸಿ ರಾಜೇಶ್, ಅಶೋಕ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.