ಗುರುವಾಯನಕೆರೆ: ‘ವಿಕಾಸ ಸದನ’ ಉದ್ಘಾಟನೆ

ಗುರುವಾಯನಕೆರೆ : ವಿಕಾಸ ವಿವಿಧೋದ್ದೇಶ ಸಹಕಾರಿ ಸಂಘ ಗುರುವಾಯನಕೆರೆ, ಇದರ ನೂತನ ಕಟ್ಟಡ ‘ವಿಕಾಸ ಸದನ’  ಉದ್ಘಾಟನಾ ಸಮಾರಂಭವು ಇಂದು (ಸೆ.20 ) ಜರುಗಿತು
ಉದ್ಘಾಟನೆಯನ್ನು ಬೆಳ್ತಂಗಡಿ ವಲಯದ ಧರ್ಮಗುರು ವಂ.ಫಾ| ಬೊನವೆಂಚರ್ ನಜ್ರೆತ್  ನೆರವೇರಿಸಿ ಸಂಸ್ಥೆಗೆ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ದ.ಕ.ಜಿಲ್ಲಾ ಸಹಕಾರಿ ಸಂಘಗಳ ಉಪನಿಂಬಂಧಕ ಬಿ.ಕೆ ಸಲೀಂ ಕೆ.ಸಿ.ಎಸ್, ವಿಧಾನ ಪರಿಷತ್ ಸದಸ್ಯ ಕೆ.ಹರೀಶ್ ಕುಮಾರ್,  ಕೊಲ್ಪೆದಬೈಲು ಮೊಹಿಯುದ್ದೀನ್ ಜಾಮಿಯಾ ಮಸೀದಿ ಅಧ್ಯಕ್ಷ ಹಾಜಿ ಅಬ್ದುಲ್ ಲತೀಫ್ ಸಾಹೇಬ್, ಗ್ರಾ.ಪಂ ಅಧ್ಯಕ್ಷ ಅಶೋಕ್ ಕೋಟ್ಯಾನ್, ಜಿ.ಪಂ ಸದಸ್ಯೆ ಶ್ರೀಮತಿ ಮಮತಾ ಎಂ.ಶೆಟ್ಟಿ, ತಾ.ಪಂ ಸದಸ್ಯ ಗೋಪಿನಾಥ್ ನಾಯಕ್ ,ಕುವೆಟ್ಟು ಗ್ರಾ.ಪಂ ಅಧ್ಯಕ್ಷ ಅಶೋಕ ಕೋಟ್ಯಾನ್ಉಪಸ್ಥಿತರಿದ್ದು, ಸಂಸ್ಥೆಗೆ ಶುಭಹಾರೈಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಹಾಗೂ ಸಂಘದ ನಿರ್ದೇಶಕ ಮೋಹನ್ ಹೆಗ್ಡೆ ಯವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ವಿಕಾಸ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಎಲೋಶಿಯಸ್ ಡಿ’ ಸೋಜ, ಉಪಾಧ್ಯಕ್ಷ ಯೋಗೀಶ್ ಪೈ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಅನಿತಾ ಫೆರ್ನಾಂಡಿಸ್, ನಿರ್ದೇಶಕರುಗಳು, ಆಡಳಿತ ಮಂಡಳಿ ಸದಸ್ಯರು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.