ಪ.ಜಾತಿ, ಪಂಗಡದ ನಿರುದ್ಯೋಗಿ ಯುವಕರಿಂದ ಕೋಳಿ ಸಾಕಾಣಿಕೆಗೆ ಅರ್ಜಿ ಆಹ್ವಾನ

ಬೆಳ್ತಂಗಡಿ: 2018-19 ನೇ ಸಾಲಿನಲ್ಲಿ 500 ಮಾಂಸದ ಕೋಳಿ ಘಟಕ ಪ್ರಾರಂಭಿಸಲು ಆಸಕ್ತಿ ಇರುವ ಪ.ಜಾತಿ ಮತ್ತು ಪ.ಪಂಗಡದ ನಿರುದ್ಯೋಗಿ ಯುವಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ಘಟಕ ವೆಚ್ಚ ರೂ. 1.60 ಲಕ್ಷ. ಇದರಲ್ಲಿ ರೂ.80 ಸಾವಿರ (ಶೇ 50) ಸಹಾಯಧನವಾಗಿದೆ. ಉಳಿದ ರೂ.80 ಸಾವಿರವನ್ನು ಆರ್ಥಿಕ ಸಂಸ್ಥೆಗಳಿಂದ ಸಾಲ ರೂಪವಾಗಿ ಪಡೆದುಕೊಳ್ಳಬೇಕು. ಪ.ಜಾತಿಗೆ 2 ಘಟಕ ಮತ್ತು ಪ.ಪಂಗಡಕ್ಕೆ 1 ಘಟಕವಿದೆ. ಫಲಾನುಭವಿಗಳು ಪಶು ಆಸ್ಪತ್ರೆ ಬೆಳ್ತಂಗಡಿ ಇಲ್ಲಿಂದ ಅರ್ಜಿಯನ್ನು ಪಡೆದುಕೊಳ್ಳಬಹುದು ಎಂದು ಸಹಾಯಕ ನಿದೇರ್ಶಶಕ ಡಾ. ರತ್ನಾಕರ ಮಲ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.