ಜೇಸಿ ಸದಾನಂದ ಆಚಾರ್ಯ ಹೃದಾಯಘಾತದಿಂದ ನಿಧನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಉಜಿರೆ : ಕಲ್ಮಂಜ ಗ್ರಾಮದ ಪಿಲತ್ತಬೆಟ್ಟು ಮನೆಯ ಉಜಿರೆ ಜೇಸಿಯ ಮಾಜಿ ಅಧ್ಯಕ್ಷ ಜೇಸಿ ಸದಾನಂದ ಆಚಾರ್ಯ (55.ವ) ರವರು ಹೃದಾಯಘಾತದಿಂದ ಸೆ. 18 ರಂದು ನಿಧನರಾದರು
ಸೆ. 13  ಗಣೇಶ್ ಚತುರ್ಥಿ ಹಬ್ಬದಂದು ಎದೆನೋವು ಕಾಣಿಸಿಕೊಂಡು ಉಜಿರೆಯಲ್ಲಿ ಚಿಕಿತ್ಸೆ ಪಡೆದು, ಕೊಡಲೇ ಮಂಗಳೂರಿಗೆ ವರ್ಗಾಯಿಸಲಾಗಿತ್ತು. ಚಿಕಿತ್ಸೆ ನಡೆದು ಬಳಿಕ ಸೆ. 18 ರಂದು ಆಸ್ಪತ್ರೆಯ ಬಿಲ್ಲು ನೀಡಿ ಡಿಸ್ಚಾರ್ಜ್  ಆಗಿ ಆಸ್ಪತ್ರೆಯಿಂದ ಕೆಳಗೆ ಬರುವಷ್ಟರಲ್ಲಿ ಮತ್ತೆ ಹೃದಾಯಘಾತ ಸಂಭವಿಸಿ ನಿಧನರಾಗಿದ್ದಾರೆ.
ಇವರು ಹಲವು ವರ್ಷಗಳಿಂದ ವಿಶ್ವಕರ್ಮ ಸಹಕಾರಿ ಸಂಘದಲ್ಲಿ ಸೇವೆ ಸಲ್ಲಿಸುತ್ತಿದ್ದು, ಉಜಿರೆ ಜೇಸಿ ಸದಸ್ಯರಾಗಿ, ಅಧ್ಯಕ್ಷರಾಗಿ ಹಲವು ಸಂಘ ಸಂಸ್ಥೆಯಲ್ಲಿ ಸಕ್ರೀಯರಾಗಿದ್ದರು.
ಮೃತರು ಪತ್ನಿ ಬೆಳ್ತಂಗಡಿ ತಾಲೂಕು ಪಂಚಾಯತ್‌ನಲ್ಲಿ ಲೆಕ್ಕಪರಿಶೋಧಕರಾಗಿ ಸೇವೆ ಸಲ್ಲಿಸುತ್ತಿರುವ ಲೀಲಾವತಿ , ಪುತ್ರ ಅಖಿಲೇಶ್, ಪುತ್ರಿ ಅಕ್ಷತಾ ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.