ರಬ್ಬರ್ ಕೃಷಿ ಸಹಾಯಧನಕ್ಕಾಗಿ ಅರ್ಜಿ ಅಹ್ವಾನ

ರಬ್ಬರ್ ಕೃಷಿ ಅಭಿವೃದ್ಧಿ ಹೊಸ ಕೃಷಿ ಮತ್ತು ಪುನರ್ ಕೃಷಿ ಮಾಡಿರುವ ಕೃಷಿಕರಿಗೆ ಸಹಾಯಧನ ಪಡೆಯಲು ರಬ್ಬರ್ ಮಂಡಳಿಯ ಅರ್ಜಿಗಳನ್ನು ಆಹ್ವಾನಿಸಿದೆ. 2017 ನೇ ವರ್ಷದಲ್ಲಿ ರಬ್ಬರ್ ಕೃಷಿ ಮಾಡಿರುವ ಕೃಷಿಕರು ನಿಗದಿತ ಅರ್ಜಿ ಫಾರಂನ್ನು ದ್ವಿ-ಪ್ರತಿಯಲ್ಲಿ ಅವಶ್ಯಕ ದಾಖಲೆಗಳೊಂದಿಗೆ ಆಯಾಯ ರಬ್ಬರ್ ಮಂಡಳಿ ಪ್ರಾದೇಶಿಕ ಕಛೇರಿಗಳಲ್ಲಿ ಅ.31ರ ಒಳಗಾಗಿ ಸಲ್ಲಿಸಬೇಕು. ಅರ್ಜಿ ಫಾರಂ ರಬ್ಬರ್ ಮಂಡಳಿಯ ವೆಬ್ ಸೈಟ್ www.rubberboard.org.in ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಪ್ರಸುತ್ತ ವರ್ಷದಲ್ಲಿ 5 ಹೆಕ್ಟರ್‌ವರೆಗೆ ಹೊಸ ಕೃಷಿ ಅಥವಾ ಪುನರ್ ಕೃಷಿ ಮಾಡುವ ಕೃಷಿಕರು ಸಹಾಯಧನ ಪಡೆಯಲು ಅರ್ಹರಾಗಿದ್ದು, ಗರಿಷ್ಠ 2 ಹೇಕ್ಟರ್ ರಬ್ಬರ್ ಕೃಷಿಗೆ, ಪ್ರಮಾಣಿಕರಿಸಿದ ರಬ್ಬರ್ ಸಸಿ ಗಿಡದ ಸಹಾಯಧನ ರೂ. 5000  ಸೇರಿದಂತೆ 1 ಹೆಕ್ಟರ್ ಗೆ ರೂ. 40000 ಗಳನ್ನು ನೀಡಲಾಗುವುದು.
ಹೆಚ್ಚಿನ ಮಾಹಿತಿಗೆ ಕೃಷಿಕರು ರಬ್ಬರ್ ಮಂಡಳಿ ಪ್ರಾದೇಶಿಕ ಕಛೇರಿ ಮಂಗಳೂರು (08256-2429229, ಪುತ್ತೂರು 08251 232021 ) ಕ್ಷೇತ್ರೀಯ ಕಛೇರಿಗಳಿಗೆ ಭೇಟಿ ನೀಡಬಹುದು ಹಾಗೂ ರಬ್ಬರ್ ಮಂಡಳಿಯ ಕಾಲ್‌ಸೆಂಟರ್‌ಲ್ಲೂ (0824- 2576622) ಸಹ ಮಾಹಿತಿಯನ್ನು ಪಡೆಯಬಹುದು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.