ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಜಯನಗರ

ಜಯನಗರ: ನಾವು ಮಕ್ಕಳಿಗೆ ನಮ್ಮ ಸಂಸ್ಕೃತಿ ಬಗ್ಗೆ ತಿಳಿಸುವುದಿಲ್ಲ, ಇಂದು ನಾವು ಜಾತಿ ಕಟ್ಟುಪಾಡಿಗೆ ಒಂದು ಬಿದ್ದಿದ್ದೇವೆ. ವ್ಯಕ್ತಿಗಳಿಂದ ಸ್ಥಾಪಿತವಾದವು ಮನಗಳು, ಧರ್ಮವೊಂದು ಇದ್ದರೆ ಅದು ನಮ್ಮ ಸನಾತನ ಧರ್ಮ ಮಾತ್ರ ಮನೆಯಲ್ಲಿ ನಮ್ಮ ಮಕ್ಕಳಿಗೆ ಇತಿಹಾಸ ಪುರುಷರ ಕತೆಗಳನ್ನು ತಿಳಿಸಬೇಕಾಗಿದೆ ಎಂದು ಯುವ ವಾಗ್ಮಿ, ದೈವದ ಮಧ್ಯಸ್ಥರಾದ ಮನ್ಮಥ ಶೆಟ್ಟಿ ಪುತ್ತೂರು ಇವರು ಜಯನಗರ-ಗುರಿಪಳ್ಳ 42 ನೇ ಶ್ರೀ ಗಣೇಶೋತ್ಸವ ಕಾರ್ಯಕ್ರಮದ ಸೆ.15 ರಂದು ಧಾರ್ಮಿಕ ಉಪನ್ಯಾಸದಲ್ಲಿ ತಿಳಿಸಿದ್ದರು.
ನಂತರ ಮಾತಾಡಿ, ದೇವರ ಬಳಿ ಬರುವಾಗ ಏಕಾಗ್ರತೆ, ಹಾಗೂ ಜಾತಿ ಪದ್ಧತಿಯನ್ನು ಬದಿಗಿರಿಸಬೇಕು ದಕ್ಷಿಣ ಕನ್ನಡ ಜಿಲ್ಲೆ ದೈವ ದೇವರುಗಳ ನಾಡು. ನಮಗೆ ತಿಮ್ಮಪ್ಪ, ಅಣ್ಣಪ್ಪ, ನಾಗಪ್ಪ ಇದ್ದಾರೆ. ಇಂದಿನ ನಾಗಬನಗಳು ಬದಲಾಗಿದೆ. ಇದು ನಮ್ಮ ಸಂಸ್ಕೃತಿಗೆ ವಿರುದ್ಧವಾಗಿದೆ. ಪ್ರಕೃತಿ ದತ್ತವಾದ ನಾಗಬನಗಳಿಲ್ಲ, ಮಾರ್ಬಲ್, ಟೈಲ್ಸ್ ನಿಂದ ಕೂಡಿದ ನಾಗಕಟ್ಟೆಗಳಾಗಿ ಬದಲಾಗಿದೆ. ನಮ್ಮ ಯುವಕರು ಗುಡ್ಕ, ಮದ್ಯಪಾನದಿ ದುಶ್ಚಟ್ಟಗಳಿಂದ ಬಲಿಯಾಗುತ್ತಿದ್ದಾರೆ. ಯುವತಿಯರು ಮೊಬೈಲ್‌ಗಳಿಂದ ಲವ್ ಜಿಹಾದ್ ಗೆ ಬೀಳುತ್ತಿದ್ದಾರೆ.
ಇದಕ್ಕೆಲ್ಲಾ ನಮ್ಮ ಶಿಕ್ಷಣ ಪದ್ಧತಿ ಬದಲಾದ ಪರಿಣಾಮಗಳು, ನಮ್ಮ ಮಕ್ಕಳಿಗೆ ಇತಿಹಾಸವನ್ನು ತಿಳಿಸಿಕೊಡುವ ಗುರುಕುಲ ಮಾದರಿ ಶಿಕ್ಷಣ ವ್ಯವಸ್ಥೆ ಬರಬೇಕೆಂದು ತಿಳಿಸಿದರು. ನಾವು ದೈವರಾದನೆ, ದೈವ ಸಂಸ್ಕೃತಿ ಮರೆಯುತ್ತಿದ್ದೇವೆ.
ತುಳುನಾಡು ದೈವರಾದನೆ, ನಾಗಾರಾದನೆ ಇರುವ ನಾಡು. ಕೇಸರಿಗೆ ಅಪಾರವಾದ ಗೌರವವಿದೆ. ನಮ್ಮ ಭಾರತ ದೇಶ ವಿಶ್ವ ಗುರು ಸ್ಥಾನಕ್ಕೆ ಬರಬೇಕು. ಇದಕ್ಕೆ ಯುವಕರು ದೇಶ ಕಟ್ಟುವ ಕೆಲಸದಲ್ಲಿ ತೊಡಗಬೇಕಾಗಿದೆ ಎಂದು ಕರೆ ನೀಡಿದರು.
ಶ್ರೀ.ಧ.ಮಂ. ತಾಂತ್ರಿಕ ಮಹಾವಿದ್ಯಾಲಯ ಉಜಿರೆ ಇಲ್ಲಿಯ ಉಪನ್ಯಾಸಕ ಸತ್ಯನಾರಾಯಣ ಭಟ್ ದೀಪ ಬೆಳಗಿಸಿ ಕಾರ್ಯಕ್ರಮ ಚಾಲನೆ ನೀಡಿ ಮಾತಾನಾಡಿ ಗುರಿಪಳ್ಳದ ವಿದ್ಯಾ ದೇಗುಲದಲ್ಲಿ ಶ್ರೀ ವಿದ್ಯಾ ಗಣಪತಿಯನ್ನು ಪೂಜಿಸಲಾಗಿದೆ.
ಲೋಕ ಮಾನ್ಯ ತಿಲಕರು ರಾಜಕೀಯ ಬಿಟ್ಟು, ಸಂಘಟನೆಗಾಗಿ ಗಣೇಶೋತ್ಸವವನ್ನು ಪ್ರಾರಂಭಿಸಿದರು ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ಗುರಿಪಳ್ಳ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ನೀಲಯ್ಯ ಪೂಜಾರಿ ಕೊಡೆಕ್ಕಲ್ ವಹಿಸಿದ್ದರು. ಶ್ರೀ ಗಣೇಶೋತ್ಸವದಲ್ಲಿ ಪಾಲ್ಗೊಂಡು ಎಲ್ಲರ ಸಹಕಾರಕ್ಕೆ ಸ್ಮರಿಸಿದರು.
ವೇದಿಕೆಯಲ್ಲಿ ಗಣಪತಿ ಮೂರ್ತಿ ನೀಡಿದವರು, ಅನ್ನದಾನಕ್ಕೆ ಸಹಕಾರ ನೀಡಿದವರಿಗೆ, ದೇವರಿಗೆ ಹೂವಿನ ಅಲಂಕಾರ ಮಾಡಿಸಿದವರನ್ನು ಗೌರವಿಸಲಾಯಿತು.
ಪ್ರಾಸ್ತಾವಿಕ ಮಾತನ್ನು ಕೇರಿಮಾರು ಬಾಲಕೃಷ್ಣ ಗೌಡ ನೀಡಿದರು, ನವೀನ್ ಶೆಟ್ಟಿ ಸ್ವಾಗತಿಸಿದರು. ಶಾಲಾ ಮಕ್ಕಳಿಂದ ಪ್ರಾರ್ಥನೆ, ವೇದಿಕೆಯಲ್ಲಿ ಶಾಲಾ ಮುಖ್ಯ ಶಿಕ್ಷಕಿ ವಸಂತಿ, ಎಸ್.ಡಿ.ಎಂ.ಸಿ ಅಧ್ಯಕ್ಷೆ ಗೀತಾ ಉಪಸ್ಥಿತರಿದ್ದರು. ಗುರುರಾಜ್ ನಿರೂಪಿಸಿದರು. ಪೌರೋಹಿತ್ಯವನ್ನು ಕಾನರ್ಪ ಸತ್ಯನಾರಾಯಣ ಹೊಳ್ಳ ವಹಿಸಿದ್ದರು. ಪ್ರತೀ ದಿನ ರಂಗ ಪೂಜೆಗಳು, ಸತ್ಯನಾರಾಯಣ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಗೀತಾ ಸಾಹಿತ್ಯ ಸಂಭ್ರಮ ವಿನೂತನ ಶೈಲಿಯ ಕಾರ್ಯವಿತ್ತು. ವೈಭವದ ಶೋಭಾ ಯಾತ್ರೆಯ ಮೂಲಕ ಗಣಪತಿ ಮೂರ್ತಿ ನೇತ್ರಾವತಿ ನದಿಯಲ್ಲಿ ವಿಸರ್ಜನೆ ಮಾಡಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.