ಕೊಲ್ಲಿ ದೇವಸ್ಥಾನ: ಧಾರ್ಮಿಕ ಸಭೆ

Advt_NewsUnder_1
Advt_NewsUnder_1
Advt_NewsUnder_1

ಮಿತ್ತಬಾಗಿಲು: ಮಿತ್ತಬಾಗಿಲು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೊಲ್ಲಿಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮವು ಸೆ.14 ರಂದು ಜರುಗಿತು.
ಸಭೆಯ ಅಧ್ಯಕ್ಷತೆಯನ್ನು ಧಾರ್ಮಿಕ ಪರಿಷತ್ ಸದಸ್ಯ ಮುಕುಂದ ಸುವರ್ಣ ವಹಿಸಿದ್ದರು. ಅತಿಥಿಗಳಾಗಿ ಆಗಮಿಸಿದ್ದ ಮಂಗಳೂರು ಮೆಸ್ಕಾಂನ ಅಧೀಕ್ಷಕರಾದ ಮಂಜಪ್ಪ ಮಾತನಾಡಿ, ಕೊಲ್ಲಿಗೆ ಒಂದು ಫೀಡರ್ ಒದಗಿಸುವ ಬಗ್ಗೆ ಭರವಸೆ ನೀಡಿದರು. ಕೊಲ್ಲಿ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಕೆ. ವಾಸುದೇವ ರಾವ್ ಕಕ್ಕೆನೇಜಿ, ಬಿ. ಭುಜಬಲಿ ಧರ್ಮಸ್ಥಳ, ಮಿತ್ತಬಾಗಿಲು ಗ್ರಾ.ಪಂ ಅಧ್ಯಕ್ಷ ನಾರಾಯಣ ಪಾಟಾಳಿ, ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಸುರೇಶ ಪೂಜಾರಿ ಅಡ್ಕದಕೆರೆ, ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ಕಿಲ್ಲೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದ್ಲಲಿ ಪ್ರಸಿದ್ಧ ಸ್ಯಾಕ್ಸೋಪೋನ್ ವಾದಕರಾದ ಶ್ರೀಮತಿ ಶ್ರೀಜಾ, ಕು| ತುಳಸಿ, ಕು| ಜ್ಯೋತಿ ಇವರುಗಳನ್ನು ಸನ್ಮಾನಿಸಲಾಯಿತು.
ಗಣೇಶೋತ್ಸವ ಸಮಿತಿ ಕಾರ್ಯದರ್ಶಿ ಮೋನಪ್ಪ ಗೌಡ ಅಂಬ್ರೋಲಿ ಸ್ವಾಗತಿಸಿ, ಸಮಿತಿ ಪ್ರಧಾನ ಕಾರ್ಯದರ್ಶಿ ಕೇಶವ.ವಿ.ಫಡಕೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ನಂತರ ಕು| ವೈಶಾಲ್ಯ ಮತ್ತು ಬಳಗ ಕುಕ್ಕಾವು ಇವರಿಂದ ಮನೋರಂಜನಾ ಕಾರ್ಯಕ್ರಮ ಜರುಗಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.