ಮೂಡಬಿದ್ರೆಯಲ್ಲಿ ಶೋರಿನ್ ರ್‍ಯೂ ಕರಾಟೆ ಎರಡೂ ವಿಭಾಗಗಳಲ್ಲಿ ಬೆಳ್ತಂಗಡಿಗೆ ಚಾಂಪ್ಯನ್‌ಶಿಪ್

ಬೆಳ್ತಂಗಡಿ : ಶೋರಿನ್ ರ್‍ಯೂ ಕರಾಟೆ ಅಸೋಸಿಯೇಶನ್ ಮೂಡಬಿದ್ರೆ ಹಾಗೂ ಎಂ.ಕೆ. ಇದರ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿದ್ದ 16 ನೇ ರಾಜ್ಯಮಟ್ಟದ ಓಪನ್ ಕರಾಟೆ ಚಾಂಪಿಯನ್‌ಶಿಪ್ 2018 ಕರಾಟೆ ಪಂದ್ಯಾಟದಲ್ಲಿ ಬೆಳ್ತಂಗಡಿ ತಾಲೂಕು ಶೋರಿನ್ ರ್‍ಯೂ ತಂಡ ಭಾಗವಹಿಸಿ ಹಲವು ಬಹುಮಾನಗಳನ್ನು ತನ್ನದಾಗಿಸಿಕೊಂಡಿದೆ.
ಬಾಲಕರ ವಿಭಾಗದ ಗ್ರ್ಯಾಂಡ್ ಚಾಂಪ್ಯನ್‌ಶಿಪ್‌ನಲ್ಲಿ ಮೋಹನ್ ಇವರು ಗ್ರ್ಯಾಂಡ್ ಚಾಂಪ್ಯನ್ ಆಗಿ ಹೊರಹೊಮ್ಮಿದ್ದಾರೆ. ಸೀನಿಯರ್ ವಿಭಾಗದಲ್ಲಿ ಸಿರಾಜ್ ಹೆಚ್ ಗುರುವಾಯನಕೆರೆ ಇವರು ಗ್ರ್ಯಾಂಡ್ ಚಾಂಪ್ಯನ್ ಆಗಿ ಮೂಡಿಬಂದಿದ್ದಾರೆ.
ಅಲ್ಲದೆ ಈ ಬಾರಿಯ ಶೋರಿನ್ ರ್‍ಯೂ ತಂಡದಿಂದ ಎಸ್‌ಡಿಎಂ ಇಂಗ್ಲೀಷ್ ಮೀಡಿಯಂ ಶಾಲೆ ವಿದ್ಯಾರ್ಥಿ ಮೋಹನ್ (40-45 ಕೆ.ಜಿ) ಕುಮಿಟೆ ಪ್ರಥಮ, ಅಭಿನವ್ (30-35 ಕೆ.ಜೆ) ಕುಮಿಟೆ ದ್ವಿತೀಯ, ಆಕಾಶ್ (20-25 ಕೆ.ಜೆ) ಕುಮಿಟೆ ದ್ವಿತೀಯ, ಧನುಷ್ (30-35 ಕೆ.ಜಿ) ಕುಮಿಟೆ ತೃತೀಯ, ನಾಗರಾಜ್ (50-55 ಕೆ.ಜಿ) ಕುಮಿಟೆ ಪ್ರಥಮ ಹಾಗೂ ಗ್ರ್ಯಾಂಡ್ ಚಾಂಪ್ಯನ್ ರನ್ನರ್‍ಸ್, ಸಾಯಿ ಕಿರಣ್ ರೆಡ್ಡಿ 55-60 ಕೆ.ಜಿ) ಕುಮಿಟೆ ಪ್ರಥಮ ಬ್ಲ್ಯಾಕ್ ಬೆಲ್ಟ್, ನಿಶ್ವಾನ್ (50-60ಕೆ.ಜಿ) ಕುಮಿಟೆ ದ್ವಿತೀಯ ಬ್ಲ್ಯಾಕ್ ಬೆಲ್ಟ್, ರಷಾದ್ ಅನುಗ್ರಹ ಉಜಿರೆ ಬ್ರೌನ್ ಬೆಲ್ಟ್ (70 ರಿಂದ 75 ಕೆ.ಜಿ) ಪ್ರಥಮ, ವಿಘ್ನೇಶ್ (60-70 ಕೆ.ಜಿ) ಬ್ಲ್ಯಾಕ್ ಬೆಲ್ಟ್ ವಿಭಾಗ ಪ್ರಥಮ  ಇವರು ಬಹುಮಾನಗಳನ್ನು ಪಡೆದುಕೊಂಡು ತಾಲೂಕಿಗೆ ಕೀರ್ತಿ ತಂದಿದ್ದಾರೆ.
ತ್ರಿಲೋಕ್ ಡ್ಯಾನ್ಸ್ ಇನ್ಸ್‌ಟ್ಯೂಟ್ ಇದರ ಮಾಲಿಕ ಸುಧೀರ್ ಜೈನ್ ಅವರ ಪ್ರೋತ್ಸಾಹದಿಂದ ತಮ್ಮ ಸಂಸ್ಥೆಯಲ್ಲೇ ಕರಾಟೆ ತರಬೇತಿ ಪಡೆಯುತ್ತಿರುವ ಈ ಸ್ಪರ್ಧಾಳು ವಿದ್ಯಾರ್ಥಿಗಳಿಗೆ ಕರಾಟೆ ಮುಖ್ಯ ಶಿಕ್ಷಕ ಸೆನ್ಸಾಯಿ ಅಬ್ದುಲ್ ರಹಿಮಾನ್, ಸಹಶಿಕ್ಷಕ ಸೆನ್ಸಾಯಿ ಅಲ್ತಾಫ್, ಸೆನ್ಸಾಯಿ ಮುಹಮ್ಮದ್ ಶಫೀಕ್, ಸೆನ್ಸಾಯಿ ರಿಝ್ವಾನ್ ಇವರು ತರಬೇತಿ ನೀಡಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.