ಬೆಳ್ತಂಗಡಿ ಉದ್ಯಮಿ ರವಿರಾಜ ರೈ ನಿಧನ

ಬೆಳ್ತಂಗಡಿ: ಖ್ಯಾತ ಮರದ ವ್ಯಾಪಾರಿ, ಕೆಲ್ಲಗುತ್ತು ತಾಳಿಪಡ್ಪು ನಿವಾಸಿ ರವಿರಾಜ ರೈ (49.ವ) ರವರು ಸೆ.15 ರಂದು ಸ್ವಗೃಹದಲ್ಲಿ ನಿಧನರಾದರು.
ಚಿಕ್ಕಮಗಳೂರು ಮತ್ತು ಬೆಳ್ತಂಗಡಿಯಲ್ಲಿ ಆಸ್ತಿಹೊಂದಿರುವ ಇವರು ಮೂಲತಃ ಮುಂಡೂರು ಗ್ರಾಮದ ಉರ್ಕಿ ನಿವಾಸಿಯಾಗಿದ್ದು, ಪ್ರಸ್ತುತ ಕ.ಸ.ಬಾ ಗ್ರಾಮದ ಕೆಲ್ಲಗುತ್ತು ಬಳಿಯ ತಾಳಿಪಡ್ಪು ತೋಟದ ಮನೆಯಲ್ಲಿ ವಾಸವಾಗಿದ್ದರು. ಸೆ.15ರಂದು ಬೆಳಿಗ್ಗೆ ಮನೆಯ ಆಳು ನೋಡುವ ವೇಳೆ ರವಿರಾಜ ರವರು ಛಾವಡಿಯಲ್ಲಿ ಕವುಚಿ ಮಲಗಿದ ಸ್ಥಿತಿಯಲ್ಲಿ ಬಿದ್ದಿದ್ದರು. ಅವರಿಗೆ ಹೃದಯಾಘಾತವಾಗಿರುವ ಸಾಧ್ಯತೆ ಇದೆ ಎನ್ನಲಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಇವರು ಚಿಕ್ಕಮಗಳೂರು ಲಯನ್ಸ್ ಕ್ಲಬ್ ಅಧ್ಯಕ್ಷರಾಗಿದ್ದರು. ಮೃತರು ತಾಯಿ ಸತ್ಯವತಿ ರೈ, ಪತ್ನಿ ದೇವಿಕಾ, ಇಬ್ಬರು ಪುತ್ರಿಯರು, ಓರ್ವ ಪುತ್ರ, ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.