ನಮ್ಮ ರಕ್ಷಣೆಗೆ ಹೆಲ್ಮೆಟ್

Advt_NewsUnder_1
Advt_NewsUnder_1
Advt_NewsUnder_1

        ರಾಜೇಶ್              ಗ್ರಾಮೀಣ ಶ್ರೇಷ್ಠತಾ ಕೇಂದ್ರ ಬೆಳ್ತಂಗಡಿ

ಇಂದು ಅತೀ ವೇಗವಾಗಿ ಬೆಳೆಯುತ್ತಿರುವ ನಮ್ಮ ನಗರ-ಪಟ್ಟಣಗಳ ರಸ್ತೆಗಳ ಸ್ಥಿತಿ ಎಳ್ಳಷ್ಟೂ ಸುಧಾರಣೆ ಆಗಿಲ್ಲ. ಆದರೆ ರಸ್ತೆಗೆ ಇಳಿಯುವ ವಾಹನಗಳ ಸಂಖ್ಯೆ ಮಾತ್ರ ಹಲವು ಪಟ್ಟು ಹೆಚ್ಚುತ್ತಲೇ ಇದೆ. ಇದರ ಪರಿಣಾಮವಾಗಿ ಎಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ಸಮಸ್ಯೆಗಳು ಉಂಟಾಗುತ್ತಿದೆ. ಸಂಚಾರ ದಟ್ಟಣೆಯಿಂದ ಮಹಾನಗರಗಳ ಬದುಕಂತೂ ಅಸಹನೀಯ ಹಂತ ತಲುಪುತ್ತಿದೆ. ರಾಜಧಾನಿ ಬೆಂಗಳೂರು ಹಾಗೂ ಮಂಗಳೂರಿನಂತ ದೊಡ್ಡ ದೊಡ್ಡ ನಗರಗಳನ್ನು ವಾಹನಗಳ ನಗರ ಎಂದು ಕರೆದರೆ ತಪ್ಪಾಗಲಾರದು, ಏಕೆಂದರೆ ನಗರದ ರಸ್ತೆಗಳ ಮೇಲೆ ಓಡಾಡುವ ವಾಹನಗಳಲ್ಲಿ ಬೈಕ್, ಸ್ಕೂಟರ್ ಮುಂತಾದ ದ್ವಿಚಕ್ರ ವಾಹನಗಳು ಸುಮಾರು ಶೇಕಡಾ 70 ರಷ್ಟಿವೆ. ಅಷ್ಟರ ಮಟ್ಟಿಗೆ ನಮ್ಮ ಬದುಕನ್ನು ದ್ವಿಚಕ್ರ ವಾಹನಗಳು ಆವರಿಸಿಕೊಂಡಿದೆ. ಆದರೆ ನಗರದಲ್ಲಿ ಹಾಗೂ ಜನ ನಿಭಿಡ ಪ್ರದೇಶಗಳಲ್ಲಿ ದ್ವಿಚಕ್ರ ವಾಹನ ಓಡಿಸುವುದೆಂದರೆ ಸರ್ಕಸ್ ಮಾಡಿದಷ್ಟೇ ಕಷ್ಟಕರ. ಆಯತಪ್ಪಿದರೆ ಮೂಳೆ ಮುರಿತ ಮತ್ತೂ ಎಡವಟ್ಟಾದರೆ ಪ್ರಾಣಕ್ಕೇ ಕುತ್ತು. ಜವರಾಯನಿಗೆ ವಾಹನ ಚಾಲನೆ ಮಾಡುವವರು, ಹಿಂಬದಿ ಸವಾರ ಎನ್ನುವ ಭೇದ ಇರಲಾರದು, ನಿಮಾನ್ಸ್ ಅಧ್ಯಯನದ ಪ್ರಕಾರ ದ್ವಿಚಕ್ರ ವಾಹನ ಅಪಘಾತಗಳಲ್ಲಿ ದುರ್ಮರಣಕ್ಕೀಡಾದ 116 ಮಂದಿಯಲ್ಲಿ 33 ಮಂದಿ ಹಿಂಬದಿ ಸವಾರರು. ಹಾಗಾದರೇ ಹೆಲ್ಮೆಟನ್ನು ಚಾಲನೆ ಮಾಡುವವರಷ್ಟೇ ಧರಿಸಿದರೆ ಸಾಲದು, ಹಿಂಬದಿ ಸವಾರರ ಜೀವರಕ್ಷಣೆಗೂ ಹೆಲ್ಮೆಟ್ ಅಗತ್ಯ ಎಂಬುದನ್ನು ಈ ಅಂಕಿ-ಅಂಶ ಹೇಳುತ್ತದೆ. ಹೆಲ್ಮೆಟ್ ಧರಿಸುವಂತದ್ದು ಸುರಕ್ಷತೆಗಾಗಿ ಎಂದು ಅರಿತಿರಬೇಕು. ಅಪಘಾತದಿಂದ ತಲೆಗೆ ಆಗಬಹುದಾದ ಪೆಟ್ಟಿನ ತೀವ್ರತೆಯನ್ನು ಹೆಲ್ಮೆಟ್ ತಗ್ಗಿಸಬಲ್ಲುದು, ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯಗೊಳಿಸಿರುವ ರಾಜ್ಯ ಸರ್ಕಾರದ ಕ್ರಮಕ್ಕೆ, ಸುಪ್ರಿಂಕೋರ್ಟ್‌ನ ರಸ್ತೆ ಸುರಕ್ಷಾ ಸಮಿತಿಯೂ ಹೆಲ್ಮೆಟ್ ಕಡ್ಡಾಯಗೊಳಿಸಬೇಕು ಎನ್ನುವ ಸೂಚನೆಯನ್ನು ನೀಡಿದೆ. ಆದರೆ ನಾವೆಲ್ಲರೂ ಈ ನಿಯಮವನ್ನು ಗಾಳಿಗೆ ತೂರಿ, ನಮ್ಮ ರಕ್ಷಣೆಯನ್ನು ಮಾಡದೆ, ಅಜಾಗರೂಕತೆಯಿಂದ ದ್ವಿಚಕ್ರ ವಾಹನಗಳನ್ನು ಚಲಾಯಿಸುತ್ತಿದ್ದೇವೆ. ಆದರೆ ಕೆಲವೊಮ್ಮೆ ಪೊಲೀಸರ ಭಯದಿಂದ ಹೆಲ್ಮೆಟ್ ಧರಿಸುವ ಕ್ರೇಜಿ ಯುವಕರು ನಮ್ಮಲ್ಲಿದ್ದಾರೆ. ಕಳೆದ ವರ್ಷ ವೇಣೂರಿನಲ್ಲಿ ಬೈಕ್ ಸ್ಕಿಡ್ ಆಗಿ ಗೋಳಿಯಂಗಡಿಯ ವಿಶ್ವನಾಥ್‌ರವರ ದೇಹದ ಯಾವುದೇ ಭಾಗಕ್ಕೂ ಗಾಯವಾಗದೇ, ಕೇವಲ ತಲೆಯು ರಸ್ತೆಗೆ ಬಡಿದು ಮರಳಿ ಬಾರದ ಲೋಕಕ್ಕೆ ಜಾರಿ ಹೋದರು. ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ ವಿಶ್ವನಾಥ್‌ರವರು ವಾಹನ ಚಲಾಯಿಸುತ್ತಿರುವ ಸಂದರ್ಭ ಹೆಲ್ಮೆಟ್ ಧರಿಸಿದ್ದರೆ ಯಾವುದೇ ಅಪಾಯವಿಲ್ಲದೆ ಪಾರಾಗುತ್ತಿದ್ದರೇನೋ? ದೇವರು ಬರೆದ ಬರಹವನ್ನು ತಪ್ಪಿಸಲು ಅಸಾಧ್ಯ. ಆದರೂ ನಾವು ಜಾಗರೂಕತೆ ವಹಿಸಬೇಕಾದುದು ಅತೀ ಅಗತ್ಯ.
ಕೆಲವರಂತೂ ನಾನು ಹೆಲ್ಮೆಟ್ ಹಾಕಿಕೊಂಡರೆ ನನ್ನ ಕೂದಲ ವಿನ್ಯಾಸವು ಹಾಳಾಗುತ್ತದೆ ಎನ್ನುವ ಮಾತುಗಳು ಬರುತ್ತಿದೆ. ಆದರೆ ನಾವು ಶಿರಸ್ತ್ರಾಣವನ್ನು ಧರಿಸಿಕೊಳ್ಳೊದು ನಮ್ಮ ರಕ್ಷಣೆಗೆ ಹೊರತು ಇನ್ನೊಬ್ಬರ ರಕ್ಷಣೆಗಾಗಿ ಅಲ್ಲ ಎಂಬುದು ನಾವು ಅರಿತಿರಬೇಕು. ಏನೇ ಆಗಲಿ ಸಂಚಾರಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಕಾಟಾಚಾರಕ್ಕೆ ಹೆಲ್ಮೆಟ್ ಧರಿಸಿದರೆ ಪ್ರಯೋಜನ ಇಲ್ಲ, ಉತ್ತಮ ಗುಣಮಟ್ಟದ ಹೆಲ್ಮೆಟ್ ಹೊಂದುವುದು ಅಗತ್ಯ, ಅತೀ ವೇಗದ ಚಾಲನೆ, ಮದ್ಯ ಸೇವಿಸಿ ವಾಹನ ಚಲಾಯಿಸುವುದು ಅಪಘಾತಗಳಿಗೆ ಪ್ರಮುಖ ಕಾರಣ. ಸಂಚಾರ ನಿಯಮಗಳ ಬಗ್ಗೆ ಎಳವೆಯಿಂದಲೇ ಅರಿವು ಮೂಡಿಸುವ ಕೆಲಸ ಪೋಷಕರಿಂದ ಆಗಬೇಕು, ಜೀವ ಅಮೂಲ್ಯವಾದುದು, ಇದರ ರಕ್ಷಣೆಗೆ ಕೈ ಜೋಡಿಸಬೇಕಾದುದು ನಮ್ಮೆಲ್ಲರ ಹೊಣೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.