ಓಡೀಲು: ಸಾರ್ವಜನಿಕ ಶ್ರೀ ಗಣೇಶೋತ್ಸವ

Advt_NewsUnder_1
Advt_NewsUnder_1
Advt_NewsUnder_1

ಓಡೀಲು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಓಡೀಲು ವತಿಯಿಂದ 29 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೊತ್ಸವವು ಸೆ.13 ರಿಂದ 15 ರವರೆಗೆ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಪ್ರಧಾನ ಅರ್ಚಕ ಎಂ.ರಘುರಾಮ ಭಟ್ ಮಠ ಇವರ ಪೌರೋಹಿತ್ಯದಲ್ಲಿ ಶ್ರೀ ಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲ್ಲಿ ಜರುಗಿತು.
ಗಣಪತಿಷ್ಠೆ ಬಳಿಕ ಮಹಾಪೂಜೆ ನಡೆಯಿತು. ನಂತರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಗಣೇಶ್ ಸುವರ್ಣ ವಹಿಸಿದ್ದರು. ಮಡಿಕೇರಿ ಫೀಲ್ಡ್ ಮಾರ್ಸಲ್ ಕೆ.ಎಂ ಕಾರ್‍ಯಪ್ಪ ಕಾಲೇಜು ಪ್ರಾಧ್ಯಾಪಕ ಡಾ| ಮಾದವ ಎಂ.ಕೆ ಧಾರ್ಮಿಕ ಉಪನ್ಯಾಸ ನೀಡಿದರು. ವೇದಮೂರ್ತಿ ಸುಬ್ರಯ ಭಟ್ ಕೊಡಂಗೆ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಶೆಟ್ಟಿ ಪುರಿಪಟ್ಟ, ಉಪಾಧ್ಯಕ್ಷ ಸತೀಶ್ ಬಂಗೇರ ಕುವೆಟ್ಟು ವೇದಿಕೆಯಲ್ಲಿ ಉಪಸ್ಥಿತರಿದ್ದರು.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.