ಶಾಸಕರ ನೂತನ ಕಛೇರಿ ‘ಶ್ರಮಿಕ’ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1

 

ಬೆಳ್ತಂಗಡಿ: ಬೆಳ್ತಂಗಡಿ ಬಸ್ಸು ತಂಗುದಾಣದ ಬಳಿಯ ಜಿ.ಪಂ ಇಂಜಿನಿಯರಿಂಗ್ ಕಛೇರಿಯ ಬಳಿ ಶಾಸಕ ಹರೀಶ್ ಪೂಂಜ ರವರ ನೂತನ ಕಛೇರಿ ಶ್ರಮಿಕ ಉದ್ಘಾಟನಾ ಕಾರ್ಯಕ್ರಮವು ಇಂದು (ಸೆ.13 ) ರಂದು ಜರುಗಿತು.
ಉದ್ಘಾಟನೆಯನ್ನು ಶಾಸಕರ ಮಾತಾಪಿತರಾದ ಮುತ್ತಣ್ಣ ಪೂಂಜ ಮತ್ತು ಶ್ರೀಮತಿ ನಳಿನಿ ಪೂಂಜ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ, ಉದ್ಯಮಿ ಶಶಿಧರ ಶೆಟ್ಟಿ, ಬಿಜೆಪಿ ಮಾಜಿ ಅಧ್ಯಕ್ಷ ಪಿ.ಕುಶಾಲಪ್ಪ ಗೌಡ, ವಿಭಾಗೀಯ ಪ್ರಭಾರಿ ಪ್ರತಾಪ್ ಸಿಂಹ ನಾಯಕ್, ಉದ್ಯಮಿ ಎಂ.ಬಿ ಪುರಾಣಿಕ್, ಬಾಲಕೃಷ್ಣ ಶೆಟ್ಟಿ ಸವಣಾಲು ಮತ್ತಿತರರು ಉಪಸ್ಥಿತರಿದ್ದರು.
ಬಂದ ಅತಿಥಿಗಳನ್ನು ಶಾಸಕ ಹರೀಶ್ ಪೂಂಜ ಮತ್ತು ಸ್ವೀಕೃತಾ ಪೂಂಜ ದಂಪತಿ ಸ್ವಾಗತಿಸಿ, ಸತ್ಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.